ಈಕ್ವಿಟಿ ಮತ್ತು ಡೆಟ್‌ಫಂಡ್‌ನ ಮಧ್ಯೆ ಯಾವ ವ್ಯತ್ಯಾಸವಿದೆ?

ಈಕ್ವಿಟಿ ಮತ್ತು ಡೆಟ್‌ಫಂಡ್‌ನ ಮಧ್ಯೆ ಯಾವ ವ್ಯತ್ಯಾಸವಿದೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

“ಎಲ್ಲ ಮ್ಯೂಚುವಲ್‌ಫಂಡ್‌ಗಳೂ ಒಂದೇ ರೀತಿ ಇರುತ್ತವೆಯೇ? ಅಷ್ಟಕ್ಕೂ, ಇದೊಂದು ಮ್ಯೂಚುವಲ್‌ ಫಂಡ್‌ಅಲ್ಲವೇ?” ಎಂದು ಗೋಕುಲ್‌ಕೇಳಿದರು. ಮ್ಯೂಚುವಲ್‌ ಫಂಡ್‌ವಿತರಕರಾದ ಅವರ ಸ್ನೇಹಿತ ಹರೀಶ್‌ಮುಗುಳ್ನಕ್ಕರು. ಹಲವರು ಈ ರೀತಿಯ ಮಾತುಗಳನ್ನು ಅವರ ಬಳಿ ಆಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಜನರು ಎಲ್ಲ ಮ್ಯೂಚುವಲ್‌ಫಂಡ್‌ಗಳೂ ಒಂದೇ ರೀತಿ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಹಲವು ರೀತಿಯ ಫಂಡ್‌ಗಳು ಇರುತ್ತವೆ. ಈ ಪೈಕಿ ಪ್ರಮುಖವಾದವುಗಳೆಂದರೆ ಈಕ್ವಿಟಿ ಫಂಡ್‌ಗಳು ಮತ್ತು ಡೆಟ್‌ಫಂಡ್‌ಗಳಾಗಿವೆ. ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುದೇ ಇವೆರಡರ ಮಧ್ಯದ ವ್ಯತ್ಯಾಸವಾಗಿದೆ. ಡೆಟ್ ಫಂಡ್‌ಗಳು ಫಿಕ್ಸೆಡ್‌ಆದಾಯ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈಕ್ವಿಟಿ ಷೇರು ಮತ್ತು ಸಂಬಂಧಿತ ಸೆಕ್ಯುರಿಟಿಗಳಲ್ಲಿ ಈಕ್ವಿಟಿ ಫಂಡ್‌ಗಳು ಪ್ರಮುಖವಾಗಿ ಹೂಡಿಕೆ ಮಾಡುತ್ತವೆ. ಸ್ಕೀಮ್‌ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ನಿರ್ಧರಿಸುವ ವಿಭಿನ್ನ ಗುಣಲಕ್ಷಣಗಳನ್ನು ಈಕ್ವಿಟಿ ಮತ್ತು ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳು ಹೊಂದಿರುತ್ತವೆ.

ವಿಭಿನ್ನ ಹೂಡಿಕೆದಾರರು ವಿಭಿನ್ನ ಅಗತ್ಯಗಳನ್ನು ಹೊಂದಿರುತ್ತವೆ. ಕೆಲವರಿಗೆ ತಮ್ಮ ಗುರಿಗಳನ್ನು ಸಾಧಿಸಲು ಅಧಿಕ ರಿಟರ್ನ್ಸ್ ಅಗತ್ಯವಿರುತ್ತದೆ ಮತ್ತು ಕೆಲವರು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳಬಲ್ಲರು. ಕೆಲವು ಹೂಡಿಕೆದಾರರು ದೀರ್ಘಕಾಲೀನ ಗುರಿಗಳನ್ನು ಹೊಂದಿದ್ದಾರೆ. ಇನ್ನೂ ಕೆಲವರು ಅಲ್ಪಕಾಲೀನದಿಂದ ಮಧ್ಯಮಕಾಲದ ಗುರಿಗಳನ್ನು ಹೊಂದಿರುತ್ತಾರೆ. ಹೂಡಿಕೆದಾರರು ದೀರ್ಘಕಾಲೀನ ಗುರಿಗಳಿಗೆ ಈಕ್ವಿಟಿ ಫಂಡ್‌ಆಯ್ಕೆ ಮಾಡಬೇಕು ಮತ್ತು ಅಲ್ಪಕಾಲೀನದಿಂದ ಮಧ್ಯಕಾಲೀನ ಗುರಿಗಳಿಗೆ ಡೆಟ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈಕ್ವಿಟಿ ಫಂಡ್‌ಗಳು ಅಧಿಕ ರಿಟರ್ನ್ಸ್‌ಅನ್ನು ಒದಗಿಸುವ ಸಾಧ್ಯತೆ ಇರುತ್ತದೆ, ಆದರೆ ಅಪಾಯದೊಂದಿಗೆ.  ಡೆಟ್ ಫಂಡ್‌ಗಳು ಬಹುತೇಕ ಸ್ಥಿರವಾಗಿರುತ್ತವೆ. ಆದರೆ ತುಲನಾತ್ಮಕವಾಗಿ  ಕಡಿಮೆ ರಿಟರ್ನ್ಸ್‌ಅನ್ನು ಒದಗಿಸುತ್ತವೆ.

442
ನಾನು ಹೂಡಿಕೆ ಮಾಡಲು ಸಿದ್ಧ