ಮ್ಯೂಚುವಲ್‌ ಫಂಡ್‌ಗಳಲ್ಲಿ ಅಪ್ರಾಪ್ತ ವಯಸ್ಕರು ಹೂಡಿಕೆ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ಗಳಲ್ಲಿ ಅಪ್ರಾಪ್ತ ವಯಸ್ಕರು ಹೂಡಿಕೆ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

18 ವರ್ಷದವರೆಗೆ ಪಾಲಕರು/ಕಾನೂನಾತ್ಮಕ ಪೋಷಕರ ಸಹಾಯದಿಂದ ಮ್ಯೂಚುವಲ್‌ ಫಂಡ್‌ಗಳಲ್ಲಿ 18 ವರ್ಷದೊಳಗಿನ (ಅಪ್ರಾಪ್ತರು) ಯಾರಾದರೂ ಹೂಡಿಕೆ ಮಾಡಬಹುದು. ಪಾಲಕರು/ಪೋಷಕರ ಪ್ರತಿನಿಧಿತ್ವವನ್ನು ಹೊಂದಿರುವ ಅಪ್ರಾಪ್ತ ವಯಸ್ಕರು ಸ್ವತಂತ್ರ ಖಾತೆದಾರರಾಗಿರುತ್ತಾರೆ. ಅಪ್ರಾಪ್ತರ ಮ್ಯೂಚುವಲ್‌ ಫಂಡ್‌ ಫಾಲಿಯೋದಲ್ಲಿ ಜಂಟಿ ಹೋಲ್ಡಿಂಗ್‌ ಮಾಡಲು ಸಾಧ್ಯವಿಲ್ಲ. ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವಂತಹ ಹೂಡಿಕೆ ಗುರಿಯನ್ನು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾಧಿಸಬಹುದು.

ಮಗು 18 ವರ್ಷಕ್ಕೆ ಕಾಲಿಟ್ಟ ನಂತರ ಮತ್ತು ಪ್ರಾಪ್ತ ವಯಸ್ಕನಾದನಂತರ, ಪಾಲಕ/ಪೋಷಕರಾಗಿ ನೀವು ಮೊದಲು ಮಾಡಬೇಕಾಗಿರುವುದೆಂದರೆ ಅಪ್ರಾಪ್ತರ ಖಾತೆಯಿಂದ ಪ್ರಾಪ್ತ ವಯಸ್ಕರ ಖಾತೆ ಎಂಬುದಾಗಿ ಖಾತೆಯ ಸ್ಥಿತಿಯನ್ನು ಬದಲಿಸಬೇಕು. ಇಲ್ಲವಾದರೆ ಖಾತೆಯಲ್ಲಿ ಎಲ್ಲವಹಿವಾಟುಗಳನ್ನೂ ನಿಲ್ಲಿಸಬೇಕಾಗುತ್ತದೆ. 18 ವರ್ಷಗಳಿಗಿಂತ ಹೆಚ್ಚಿನ ಹೂಡಿಕೆದಾರರಿಗೆ ಅನ್ವಯವಾಗುವಂತೆ ಖಾತೆದಾರರು ಎಲ್ಲ ತೆರಿಗೆ ಬಾಧ್ಯತೆಗಳನ್ನು ಭರಿಸಬೇಕಾಗುತ್ತದೆ. ಮಗು ಅಪ್ರಾಪ್ತನಾಗಿರುವವರೆಗೂ ಮಗುವಿನ ಪೋರ್ಟ್‌ಫೋಲಿಯೋದ ಎಲ್ಲ ಆದಾಯ ಮತ್ತು ಗಳಿಕೆಯನ್ನು ಪಾಲಕರ ಆದಾಯದೊಂದಿಗೆ ಸೇರಿಸಲಾಗುತ್ತದೆ ಮತ್ತು ಪಾಲಕರೇ ಅನ್ವಯಿಸುವ ತೆರಿಗೆಯನ್ನು ಪಾವತಿಸುತ್ತಾರೆ. ಮಗುವು ಪ್ರಾಪ್ತ ವಯಸ್ಕನಾದಾಗ, ಅವರನ್ನು ಪ್ರತ್ಯೇಕ ಎಂದು ಪರಿಗಣಿಸಲಾಗುತ್ತದೆ ಮತ್ತು ಆ ವರ್ಷದಲ್ಲಿ ಎಷ್ಟು ತಿಂಗಳು ಪ್ರಾಪ್ತವಯಸ್ಕರಾಗಿದ್ದಾರೆಯೋ ಅಷ್ಟು ತಿಂಗಳಿಗೆ ಪ್ರತ್ಯೇಕ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

441
ನಾನು ಹೂಡಿಕೆ ಮಾಡಲು ಸಿದ್ಧ