ಸ್ಕೀಮ್‌ನ ಅಧಿಕ ಅಥವಾ ಕಡಿಮೆ ಎನ್‌ಎವಿಯು ನಿಮ್ಮ ಹೂಡಿಕೆ ನಿರ್ಧಾರದ ಮೇಲೆ ಪರಿಣಾಮ ಬೀರಬಹುದೇ?

ಸ್ಕೀಮ್‌ನ ಅಧಿಕ ಅಥವಾ ಕಡಿಮೆ ಎನ್‌ಎವಿಯು ನಿಮ್ಮ ಹೂಡಿಕೆ ನಿರ್ಧಾರದ ಮೇಲೆ ಪರಿಣಾಮ ಬೀರಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ರೆಗ್ಯುಲರ್ ಬದಲಿಗೆ ನೀವು ಲಾರ್ಜ್ ಪಿಜ್ಜಾ ಆರ್ಡರ್‌ ಮಾಡಿದರೆ, ಇವೆರಡರ ರುಚಿಯಲ್ಲಿ ನಿಮಗೆ ಏನಾದರೂ ವ್ಯತ್ಯಾಸ ಕಂಡುಬರುತ್ತದೆಯೇ? ಖಂಡಿತವಾಗಿಯೂ ಇಲ್ಲ! ಒಂದೇ ರೆಸಿಪಿ ಮತ್ತು ಪ್ರಕ್ರಿಯೆಯನ್ನು ಬಳಸಿ ಇವೆರಡನ್ನೂ ತಯಾರಿಸಲಾಗುತ್ತದೆ. ಅವು ಗಾತ್ರ ಮತ್ತು ಬೆಲೆಯಲ್ಲಿ ಮಾತ್ರ ವ್ಯತ್ಯಾಸ ಹೊಂದಿರುತ್ತವೆ. ಮೆನುವಿನಿಂದ ನೀವು ಆರ್ಡರ್‌ ಮಾಡುವ ಗಾತ್ರ ಯಾವುದೇ ಆಗಿರಲಿ, ಫಾರ್ಮ್‌ಹೌಸ್ ಪಿಜ್ಜಾದ ರುಚಿ ಒಂದೇ ಆಗಿರುತ್ತದೆ.

ಪಿಜ್ಜಾದ ರೀತಿಯಲ್ಲೇ ಮ್ಯೂಚುವಲ್‌ ಫಂಡ್ ಕೂಡ ಸೌಲಭ್ಯವನ್ನು ಒದಗಿಸುತ್ತದೆ. ನೀವು ಫಂಡ್ ಖರೀದಿ ಮಾಡಿದಾಗ ನೀವು ಅದರ ಬೆಲೆಯನ್ನು ಅಂದರೆ ಎನ್‌ಎವಿಯನ್ನು ಪಾವತಿ ಮಾಡಿ ಫಂಡ್‌ನ ಯೂನಿಟ್‌ ಖರೀದಿ ಮಾಡುತ್ತೀರಿ. ಹೆಚ್ಚು ಹೂಡಿಕೆದಾರರ ಹಣವನ್ನು ಹೊಂದಿರುವ ದೊಡ್ಡ ಫಂಡ್‌ ದೊಡ್ಡ ಅಸೆಟ್ ಬೇಸ್‌ ಹೊಂದಿರುತ್ತದೆ ಮತ್ತು ಎನ್‌ಎವಿ ಹೆಚ್ಚಿರುತ್ತದೆ. ಆದರೆ, ಇದೇ ಫಂಡ್‌ ಪರಿಚಯಿಸಿದಾಗ ಕಡಿಮೆ ಎನ್‌ಎವಿ ಹೊಂದಿರಬಹುದು. ಯಾಕೆಂದರೆ, ಕಾಲ ಸರಿದಂತೆ ಫಂಡ್‌ಗೆ ಹೆಚ್ಚು ಹೂಡಿಕೆದಾರರು ಸೇರಿಕೊಂಡು ಫಂಡ್‌ ಬೆಳೆದು ಫಂಡ್‌ನ ಎನ್‌ಎವಿ ಹೆಚ್ಚುತ್ತದೆ. ಆದರೆ, ಫಂಡ್‌ನ ರೆಸಿಪಿ ಬದಲಾಗಿದೆ ಅಥವಾ ಅದನ್ನು ತಯಾರಿಸುವ ಪ್ರಕ್ರಿಯೆ ಬದಲಾಗಿದೆ ಎಂದು ನೀವು ಭಾವಿಸುತ್ತೀರಾ?
ಫಂಡ್‌ನ ಹೂಡಿಕೆ ಉದ್ದೇಶ ಬದಲಾವಣೆಯಾದರೂ ವಿಭಿನ್ನ ಸ್ವತ್ತು ವಿಭಾಗಗಳಿಗೆ ನಿಯೋಜನೆ ಮತ್ತು ಸೆಕ್ಯುರಿಟಿಗಳ ವಿಧ ಮತ್ತು ಫಂಡ್‌ ನಿರ್ವಹಣೆ ಪ್ರಕ್ರಿಯೆಯು ಬದಲಾಗುವುದಿಲ್ಲ. ಹೀಗಾಗಿ, ನಿಮ್ಮ ರಿಟರ್ನ್‌ ಅನುಭವಕ್ಕೆ ಫಂಡ್‌ನ ಎನ್‌ಎವಿ ಎಷ್ಟೇ ಇದ್ದರೂ ಅದು ಬಾಧೆಯಾಗುವುದಿಲ್ಲ. ಫಾರ್ಮ್‌ಹೌಸ್‌ ಪಿಜ್ಜಾದ ಗಾತ್ರ ಎಷ್ಟೇ ಇದ್ದರೂ ರುಚಿ ಹೇಗೆ ಬದಲಾಗುವುದಿಲ್ಲವೋ ಹಾಗೆಯೇ.

436
ನಾನು ಹೂಡಿಕೆ ಮಾಡಲು ಸಿದ್ಧ