ಖಚಿತ ರಿಟರ್ನ್‌ ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಜನರು ತಮ್ಮ ರಿಯಲ್ ಎಸ್ಟೇಟ್‌ ಹೂಡಿಕೆಯ ಬಗ್ಗೆ ಜನರು ಮಾತನಾಡುವುದನ್ನು ಎಂದಾದರೂ ಕೇಳಿದ್ದೀರಾ, "2004 ರಲ್ಲಿ ನಾನು ಆ ಮನೆಯನ್ನು 30 ಲಕ್ಷ ರೂ.ಗೆ ಖರೀದಿ ಮಾಡಿದ್ದೆ. ಈಗ ಅದರ ಮೌಲ್ಯ 1.2 ಕೋಟಿ ರೂ.! ಇದು 15 ವರ್ಷಗಳಲ್ಲಿ 4 ಪಟ್ಟು ಹೆಚ್ಚಾಗಿದೆ." ಇದು ಸಮಗ್ರ ರಿಟರ್ನ್ಸ್‌ನ ಒಂದು ಉದಾಹರಣೆಯಾಗಿದೆ.

ಒಂದು ಹೂಡಿಕೆಯ ಅಂತಿಮ ಮೌಲ್ಯವನ್ನು ನೀವು, ಹೂಡಿಕೆ ಮಾಡಿದ ಬೆಲೆಯೊಂದಿಗೆ ಹೋಲಿಕೆ ಮಾಡಿದಾಗ, ಕಾಲಾನಂತರದಲ್ಲಿ ಉಂಟಾದ ಬೆಳವಣಿಗೆಯನ್ನು ಸಮಗ್ರ ರಿಟರ್ನ್‌ ರೀತಿ ಅಳೆಯಲಾಗುತ್ತದೆ. 

ಉದಾಹರಣೆಗೆ, ನೀವು 5 ವರ್ಷಗಳ ಹಿಂದೆ ರೂ. 5000 ಅನ್ನು ಒಂದು ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಿರಿ. ನಿಮ್ಮ ಹೂಡಿಕೆಯ ಮೌಲ್ಯವು ಇಂದು ರೂ. 6000 ಆಗಿದ್ದರೆ, ನೀವು 1000 ರೂ. ಗಳಿಕೆ ಮಾಡಿದ್ದೀರಿ. ಇದು ನಿಮ್ಮ ಆರಂಭಿಕ ಹೂಡಿಕೆ ರೂ. 5000 ಮೇಲೆ 20% ಸಮಗ್ರ ರಿಟರ್ನ್‌ಗೆ ಸಮಾನವಾಗಿದೆ. 

ಸಮಗ್ರ ರಿಟರ್ನ್‌ ಹಿನ್ನಡೆಯೇನೆಂದರೆ, ಇದು ಬೆಳವಣಿಗೆಯಾದ ಕಾಲವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಮೇಲಿನ ಸನ್ನಿವೇಶದಲ್ಲಿ 20% ರಿಟರ್ನ್‌ ಚೆನ್ನಾಗಿದೆ ಎನಿಸುತ್ತದೆ. ಆದರೆ, ಇದನ್ನು 5 ವರ್ಷಗಳಲ್ಲಿ ಸಾಧಿಸಿದ್ದು ಎಂದಾದರೆ ಆಕರ್ಷಕವಾಗಿ ಕಾಣಿಸುತ್ತದೆಯೇ? ಆದರೆ, 5 ವರ್ಷದ ಅವಧಿಗೆ ಸರಾಸರಿ ವಾರ್ಷಿಕ ರಿಟರ್ನ್‌ ಅನ್ನು ನೀವು ಲೆಕ್ಕ ಮಾಡಿದರೆ (ಸಿಎಜಿಆರ್), ಇದು ಕೇವಲ 3.7% ಆಗಿರುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಫಂಡ್‌ಗಳಿಂದ ರಿಟರ್ನ್‌ ಲೆಕ್ಕ ಮಾಡುವಾಗ ಸಮಗ್ರ ರಿಟರ್ನ್‌ ಅನ್ನು ಬಳಸಲಾಗುತ್ತದೆ. ಇತರ ಪ್ರಕರಣಗಳಲ್ಲಿ ವಾರ್ಷಿಕಗೊಳಿಸಿದ ರಿಟರ್ನ್‌ ಅನ್ನು (ಸಿಎಜಿಆರ್‌) ಲೆಕ್ಕ ಮಾಡಲಾಗುತ್ತದೆ. ಇದು ನೀಡಿದ ಕಾಲಾವಧಿಯಲ್ಲಿ ಹೂಡಿಕೆಯು ಗಳಿಸಿದ ಸರಾಸರಿ ವಾರ್ಷಿಕ ರಿಟರ್ನ್‌ ಅನ್ನು ಇದು ನೀಡುತ್ತದೆ.

ತೋರಿಸಿದ ಸಿಎಜಿಆರ್‌ ಉದಾಹರಣೆಯಲ್ಲಿ, 5 ವರ್ಷಗಳಲ್ಲಿ 20% ರಿಟರ್ನ್ ಗಳಿಕೆಯು ಉತ್ತಮ ರಿಟರ್ನ್ ಅಲ್ಲ ಎಂಬುದನ್ನು ಹೈಲೈಟ್ ಮಾಡುವುದು.

436
ನಾನು ಹೂಡಿಕೆ ಮಾಡಲು ಸಿದ್ಧ