ಡೆಟ್ ಫಂಡ್‌ಗಳ ವಿವಿಧ ಪ್ರಕಾರಗಳು ಯಾವುವು?

ಡೆಟ್ ಫಂಡ್‌ಗಳ ವಿವಿಧ ಪ್ರಕಾರಗಳು ಯಾವುವು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಡೆಟ್ ಫಂಡ್‌ಗಳು ಯಾವ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಈ ಸೆಕ್ಯುರಿಟಿಗಳ ಪಕ್ವತೆ (ಕಾಲಾವಧಿ) ಎಷ್ಟು ಎಂಬುದನ್ನು ಆಧರಿಸಿ ಅವುಗಳನ್ನು ವಿಭಾಗಿಸಲಾಗುತ್ತದೆ. ಕಾರ್ಪೊರೇಟ್‌ಗಳು, ಬ್ಯಾಂಕ್‌ಗಳು ಮತ್ತು ಸರ್ಕಾರ ವಿತರಿಸಿದ ಬಾಂಡ್‌ಗಳು, ದೊಡ್ಡ ಕಾರ್ಪೊರೇಟ್‌ ಕಂಪನಿಗಳು ವಿತರಿಸುವ ಡಿಬೆಂಚರುಗಳು, ಹಣದ ಮಾರುಕಟ್ಟೆ ಸಲಕರಣೆಗಳಾದ ವಾಣಿಜ್ಯ  ಪೇಪರುಗಳು ಮತ್ತು ಬ್ಯಾಂಕ್‌ಗಳು ವಿತರಿಸುವ ಡೆಪಾಸಿಟ್‌ಗಳ ಸರ್ಟಿಫಿಕೇಟ್‌ಗಳು (ಸಿಡಿಗಳು) ಅನ್ನು ಡೆಟ್ ಸೆಕ್ಯುರಿಟಿಗಳು ಒಳಗೊಂಡಿರುತ್ತವೆ.

ಡೆಟ್‌ ಫಂಡ್‌ಗಳನ್ನು ಈ ರೀತಿ ವಿಭಾಗಿಸಲಾಗುತ್ತದೆ:

  • ಓವರ್‌ನೈಟ್‌ ಫಂಡ್‌ಗಳು - 1 ದಿನದ ಪಕ್ವತೆ ಪೇಪರುಗಳಲ್ಲಿ (ಸೆಕ್ಯುರಿಟಿಗಳು) ಹೂಡಿಕೆ ಮಾಡುತ್ತವೆ
  • ಲಿಕ್ವಿಡ್‌ ಫಂಡ್‌ಗಳು - 90 ದಿನಗಳೊಳಗೆ ಪಕ್ವವಾಗುವ ಹಣದ ಮಾರುಕಟ್ಟೆ ಸಲಕರಣೆಗಳಲ್ಲಿ ಹೂಡಿಕೆ ಮಾಡುತ್ತವೆ ಫ್ಲೋಟಿಂಗ್ ರೇಟ್‌ ಫಂಡ್‌ಗಳು - ಫ್ಲೋಟಿಂಗ್ ದರದ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ
  • ಅತಿ ಕಡಿಮೆ ಅವಧಿಯ ಫಂಡ್‌ಗಳು - 3-6 ತಿಂಗಳುಗಳಲ್ಲಿ ಪಕ್ವವಾಗುವ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ
  • ಕಡಿಮೆ ಅವಧಿಯ ಫಂಡ್‌ಗಳು - 6-12 ತಿಂಗಳುಗಳಲ್ಲಿ ಪಕ್ವವಾಗುವ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ
  • ಮನಿ ಮಾರ್ಕೆಟ್‌ ಫಂಡ್‌ಗಳು - 1 ವರ್ಷದಲ್ಲಿ ಪಕ್ವವಾಗುವ ಮನಿ ಮಾರ್ಕೆಟ್‌ ಸಲಕರಣೆಗಳಲ್ಲಿ ಹೂಡಿಕೆ ಮಾಡುತ್ತದೆ
  • ಅಲ್ಪಾವಧಿ ಫಂಡ್‌ಗಳು - 1-3 ವರ್ಷಗಳಲ್ಲಿ ಪಕ್ವವಾಗುವ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ
  • ಮಧ್ಯಮಾವಧಿ ಫಂಡ್‌ಗಳು - 3-4 ವರ್ಷಗಳಲ್ಲಿ ಪಕ್ವವಾಗುವ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ
  • ಮಧ್ಯಮದಿಂದ ದೀರ್ಘಾವಧಿ ಫಂಡ್‌ಗಳು - 4-7 ವರ್ಷಗಳಲ್ಲಿ ಪಕ್ವವಾಗುವ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ
  • ದೀರ್ಘಾವಧಿ ಫಂಡ್‌ಗಳು - ದೀರ್ಘಾವಧಿಗೆ ಪಕ್ವವಾಗುವ ಡೆಟ್ (7 ವರ್ಷಗಳಿಗೂ ಹೆಚ್ಚು) ನಲ್ಲಿ ಹೂಡಿಕೆ ಮಾಡುತ್ತದೆ
  • ಕಾರ್ಪೊರೇಟ್‌ ಬಾಂಡ್‌ ಫಂಡ್‌ಗಳು - ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ
  • ಬ್ಯಾಂಕಿಂಗ್‌ ಪಿಎಸ್‌ಯು ಫಂಡ್‌ಗಳು - ಬ್ಯಾಂಕ್‌ಗಳು, ಪಿಎಸ್‌ಯುಗಳು, ಪಿಎಫ್‌ಐಗಳ ಡೆಟ್‌ಗಳಲ್ಲಿ ಹೂಡಿಕೆ ಮಾಡುತ್ತದೆ
  • ಗಿಲ್ಟ್‌ ಫಂಡ್‌ಗಳು - ವಿವಿಧ ಪಕ್ವತೆಯ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ
  • 10 ವರ್ಷಗಳ ಸುಸ್ಥಿರ ಅವಧಿಯೊಂದಿಗೆ ಗಿಲ್ಟ್‌ ಫಂಡ್‌ - 10 ವರ್ಷ ಪಕ್ವತೆಯೊಂದಿಗೆ ಜಿ ಸೆಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ
  • ಡೈನಾಮಿಕ್‌ ಫಂಡ್‌ಗಳು - ವಿವಿಧ ಪಕ್ವತೆಯ ಡೆಟ್ ಫಂಡ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ ಕ್ರೆಡಿಟ್ ರಿಸ್ಕ್ ಫಂಡ್‌ಗಳು - ಈ ಕೆಳಗಿನ ಗರಿಷ್ಠ ರೇಟಿಂಗ್‌ಗಳ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ
442
ನಾನು ಹೂಡಿಕೆ ಮಾಡಲು ಸಿದ್ಧ