ಸಿಎಜಿಆರ್ ಅಥವಾ ವಾರ್ಷಿಕಗೊಳಿಸಿದ ರಿಟರ್ನ್ ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕ್ರೋಢೀಕೃತ ವಾರ್ಷಿಕ ಪ್ರಗತಿ ದರ (ಸಿಎಜಿಆರ್‌) ಎಂಬುದನ್ನು ಸಾಮಾನ್ಯವಾಗಿ ರಿಟರ್ನ್‌ ಮೆಟ್ರಿಕ್‌ನಲ್ಲಿ ಬಳಸಲಾಗುತ್ತದೆ. ಯಾಕೆಂದರೆ, ಇದು ವಾರ್ಷಿಕ ರಿಟರ್ನ್ ಗಳಿಕೆಯನ್ನು ವಿವರಿಸುತ್ತದೆ. ಆದರೆ ನಿಖರ ರಿಟರ್ನ್‌ನಲ್ಲಿ ರಿಟರ್ನ್ ಪಡೆಯಲು ಎಷ್ಟು ಸಮಯವನ್ನು ವೆಚ್ಚ ಮಾಡಲಾಗಿದೆ ಎಂಬುದನ್ನು ಪರಿಗಣಿಸಲಾಗುವುದಿಲ್ಲ.

ಸಿಎಜಿಆರ್‌ಗೆ ಯಾಕೆ ಆದ್ಯತೆ ನೀಡಲಾಗುತ್ತದೆ ಎಂದಾದರೆ, ಆರಂಭಿಕ ಹೂಡಿಕೆ ಮೊತ್ತ, ಹೂಡಿಕೆಯ ಅಂತಿಮ ಮೌಲ್ಯ ಮತ್ತು ಕಳೆದ ಸಮಯಾವಧಿಯನ್ನು ಆಧರಿಸಿ ಹೂಡಿಕೆಯು ಗಳಿಸಿದ ಸರಾಸರಿ ವಾರ್ಷಿಕ ರಿಟರ್ನ್‌ ಅನ್ನು ಒದಗಿಸುವ ಮೂಲಕ ವಿಭಿನ್ನ ಸ್ವತ್ತು ವಿಭಾಗಗಳಲ್ಲಿ ಹೋಲಿಕೆ ಮಾಡಲು ಇದು ಅನುವು ಮಾಡುತ್ತದೆ. 5 ವರ್ಷಗಳ ಹಿಂದೆ ರೂ. 1000 ಹೂಡಿಕೆ ಮಾಡಿದ್ದರೆ, ಇಂದು ಇದು 1800 ರೂ. ಮೌಲ್ಯದ್ದಾಗಿರುತ್ತದೆ. ಇದರ ಒಟ್ಟು ಪ್ರಗತಿ ದರವು 80% ಆಗಿದ್ದರೂ, ಇದರ ಸಿಎಜಿಆರ್ ಪ್ರತಿ ವರ್ಷ ಗಳಿಸಿದ ಹೂಡಿಕೆಯ ಸರಾಸರಿ ರಿಟರ್ನ್ ಆಗಿರುತ್ತದೆ. ಇದರ ಸಿಎಜಿಆರ್ 12.5% ಆಗಿರುತ್ತದೆ. ವಾರ್ಷಿಕ 12.5% ಅನ್ನು ನೀಡುವ ಬ್ಯಾಂಕ್‌ ಎಫ್‌ಡಿಗೆ ಇದನ್ನು ನೀವು ಹೋಲಿಸುವುದಾದರೆ, ಸಿಎಜಿಆರ್ ಅತ್ಯಂತ ಸುಲಭವಾಗುತ್ತದೆ. 

ಇದೇ ರೀತಿ, ಹಣದುಬ್ಬರವನ್ನು ಹೊರತುಪಡಿಸಿ ನಿಮ್ಮ ಗಳಿಕೆಯ ಲೆಕ್ಕಾಚಾರವನ್ನು ಕೂಡ ಮಾಡಬಹುದು. ಹಣದುಬ್ಬರದ ವಾರ್ಷಿಕ ಸಂಖ್ಯೆ ಶೇ. 4 ಎಂದಾದರೆ, ಹಣದುಬ್ಬರವನ್ನು ಹೊರತುಪಡಿಸಿ ನೀವು ವಾರ್ಷಿಕ 8.5% ಅನ್ನು ಗಳಿಸಿದ್ದೀರಿ ಎಂಬುದನ್ನು ಕಂಡುಕೊಳ್ಳಲು ನಿಮಗೆ ಸುಲಭವಾಗಿಸುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಹೋಲಿಕೆ ಮಾಡಿದರೆ ಸಿಎಜಿಆರ್ ಅತ್ಯಂತ ಉಪಯುಕ್ತವಾಗಿದೆ. ಕೆಲವು ವರ್ಷಗಳಲ್ಲಿ ಹೂಡಿಕೆಯು 12.5% ಕ್ಕಿಂತ ಹೆಚ್ಚನ್ನು ನೀಡಿರಬಹುದು ಮತ್ತು ಕೆಲವು ವರ್ಷಗಳಲ್ಲಿ 12.5% ಕ್ಕಿಂತ ಕಡಿಮೆ ನೀಡಿರಬಹುದು. ಆದರೆ 5 ವರ್ಷದ ಅವಧಿಯಲ್ಲಿ ಇದು ಸರಾಸರಿ 12.5% ಬೆಳೆದಿದೆ.

436
ನಾನು ಹೂಡಿಕೆ ಮಾಡಲು ಸಿದ್ಧ