ಸಿಎಎಸ್‌ (ಕ್ರೋಢೀಕೃತ ಖಾತೆ ಸ್ಟೇಟ್‌ಮೆಂಟ್) ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಿದ ವಿವಿಧ ವಿಷಯಗಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಮಕ್ಕಳು ಪಡೆದ ಸ್ಕೋರ್‌ಅನ್ನು ಶಾಲೆಯ ರಿಪೋರ್ಟ್ ಕಾರ್ಡ್ ತೋರಿಸುವಂತೆಯೇ, ಕ್ರೋಢೀಕೃತ ಖಾತೆ ಸ್ಟೇಟ್‌ಮೆಂಟ್ (ಸಿಎಎಸ್‌) ಒಂದು ಭೌತಿಕ ಸ್ಟೇಟ್‌ಮೆಂಟ್ ಆಗಿದ್ದು, ಒಂದು ತಿಂಗಳಲ್ಲಿ ವಿಭಿನ್ನ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆದಾರರು ಮಾಡಿದ ಹಣಕಾಸು ವಹಿವಾಟುಗಳನ್ನು ಇದು ಸೆರೆಹಿಡಿಯುತ್ತದೆ. ನೀವು ಮೂರು ವಿಭಿನ್ನ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ ಖರೀದಿ, ರಿಡೆಂಪ್ಷನ್‌, ಬದಲಾವಣೆಗಳು, ಎಸ್‌ಐಪಿಗಳು/ಎಸ್‌ಟಿಪಿಗಳು/ಎಸ್‌ಡಬ್ಲ್ಯೂಪಿಗಳು/ ಡಿವಿಡೆಂಡ್ ಪಾವತಿಗಳು / ಡಿವಿಡೆಂಡ್‌ಗಳ ಮರುಹೂಡಿಕೆಯಂತಹ ಎಲ್ಲ ಹಣಕಾಸು ವಹಿವಾಟುಗಳನ್ನು ಸಂಗ್ರಹಿಸಿರುತ್ತದೆ. ಪ್ಯಾನ್‌ಗೆ ಲಿಂಕ್ ಮಾಡಿದ ವಿವಿಧ ಪೋರ್ಟ್‌ಫೋಲಿಯೋಗಳ ಓಪನಿಂಗ್ ಮತ್ತು ಕ್ಲೋಸಿಂಗ್ ಬ್ಯಾಲೆನ್ಸ್‌ಗಳನ್ನು ಕೂಡ ಸಿಎಎಸ್‌ ಸೆರೆಹಿಡಿಯುತ್ತದೆ. ಬ್ಯಾಂಕ್ ವಿವರ, ವಿಳಾಸ, ನಾಮಿನಿಗಳು ಇತ್ಯಾದಿಯ ಹಣಕಾಸೇತರ ವಹಿವಾಟುಗಳು ಸಿಎಎಸ್‌ನಲ್ಲಿ ಸೆರೆಯಾಗಿರುವುದಿಲ್ಲ.

ವಿಭಿನ್ನ ಫಂಡ್ ಹೌಸ್‌ಗಳಲ್ಲಿನ ಮಾಸಿಕ ಹಣಕಾಸು ವಹಿವಾಟುಗಳನ್ನು ಸಿಎಎಸ್‌ ಸಂಗ್ರಹಿಸುವುದಷ್ಟೇ ಅಲ್ಲ, ಡಿಮ್ಯಾಟ್ ವಿಧದಲ್ಲಿ ಹೊಂದಿರುವ ಇತರ ಸೆಕ್ಯುರಿಟಿಗಳ ವಹಿವಾಟುಗಳನ್ನೂ ಸೆರೆಹಿಡಿಯುತ್ತದೆ. ಅಂದರೆ, ಸ್ಟಾಕ್ ಸಂಬಂಧಿ ವಹಿವಾಟುಗಳನ್ನು ಸಿಎಎಸ್‌ನಲ್ಲಿ ಸೆರೆಹಿಡಿಯಲಾಗುತ್ತದೆ. ಹೀಗಾಗಿ, ನಿಮ್ಮ ಎಲ್ಲ ಹಣಕಾಸು ಹೂಡಿಕೆ ಸಂಬಂಧಿ ವಹಿವಾಟುಗಳ ನಿಜವಾದ ಕ್ರೋಢೀಕೃತ ಸ್ಟೇಟ್‌ಮೆಂಟ್ ಸಿಎಎಸ್ ಆಗಿರುತ್ತದೆ. ಸಿಎಎಸ್‌ ಅನ್ನು ಮಾಸಿಕವಾಗಿ ಜನರೇಟ್ ಮಾಡಲಾಗುತ್ತದೆ ಮತ್ತು ನಂತರದ ತಿಂಗಳ 10 ನೇ ದಿನದಂದು ಹೂಡಿಕೆದಾರರಿಗೆ ಮೇಲ್ ಮಾಡಲಾಗುತ್ತದೆ.

ವಿಶಿಷ್ಟ ಪ್ಯಾನ್‌ ಹೋಲ್ಡರ್‌ಗೆ ಸಿಎಎಸ್‌ ಜನರೇಟ್ ಮಾಡಲಾಗುತ್ತದೆ. ಹೀಗಾಗಿ ಇದು ನಿರ್ದಿಷ್ಟ ಪ್ಯಾನ್‌ಗೆ ಸಂಬಂಧಿಸಿದ ಎಲ್ಲ ಹಣಕಾಸು ವಹಿವಾಟುಗಳನ್ನು ಸಂಗ್ರಹಿಸುತ್ತದೆ. ಒಂದು ತಿಂಗಳಲ್ಲಿ ಪ್ಯಾನ್‌ ಹೊಂದಿರುವವರು ಯಾವುದೇ ಹಣಕಾಸು ವಹಿವಾಟುಗಳನ್ನು ಮಾಡದೇ ಇದ್ದರೆ, ಸಿಎಎಸ್‌ ಜನರೇಟ್ ಮಾಡಲಾಗುವುದಿಲ್ಲ.

436
ನಾನು ಹೂಡಿಕೆ ಮಾಡಲು ಸಿದ್ಧ