ಮ್ಯೂಚುವಲ್‌ಫಂಡ್‌ನ ಕಾರ್ಯಕ್ಷಮತೆಯ ಮೇಲೆ ಏನು ಪರಿಣಾಮ ಬೀರುತ್ತದೆ?

ಮ್ಯೂಚುವಲ್‌ಫಂಡ್‌ನ ಕಾರ್ಯಕ್ಷಮತೆಯ ಮೇಲೆ ಏನು ಪರಿಣಾಮ ಬೀರುತ್ತದೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಪ್ರತಿ ಮ್ಯೂಚುವಲ್‌ಫಂಡ್‌ಸ್ಕೀಮ್‌ ಒಂದು ಹೂಡಿಕೆ ಉದ್ದೇಶವನ್ನು ಹೊಂದಿದೆ ಮತ್ತು ಇದನ್ನು ನಿಗದಿತ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಾರೆ. ಇವರು ಈ ಫಂಡ್‌ನ ಉದ್ದೇಶ ಸಾಧನೆಗೆ ಪೂರಕ ಕಾರ್ಯನಿರ್ವಹಣೆ ಮಾಡಲು ಜವಾಬ್ದಾರರಾಗಿರುತ್ತಾರೆ.

ನಿಧಿ ನಿರ್ವಹಣಾ ತಂಡವು ತೆಗೆದುಕೊಳ್ಳುವ ನಿರ್ಧಾರಗಳು, ಬಂಡವಾಳ ಮಾರುಕಟ್ಟೆಯಲ್ಲಿನ ವಿವಿಧ ಹಂತಗಳು, ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿಗಳು ಮತ್ತು ಮ್ಯೂಚುಯಲ್ ಫಂಡ್‌  ಯೋಜನೆಯ ಮೇಲೆ ಪರಿಣಾಮ ಬೀರುವ ಸಂಬಂಧಿತ ಸೂಕ್ಷ್ಮ ಮತ್ತು ಸ್ಥೂಲ-ಆರ್ಥಿಕ ಅಂಶಗಳು ಇತ್ಯಾದಿಗಳಿಂದ ಈ ಕಾರ್ಯಕ್ಷಮತೆಯು ಪ್ರಭಾವಿತವಾಗಿರುತ್ತದೆ. ವಿಶಿಷ್ಟವಾಗಿ, ಎಲ್ಲಾ ಫಂಡ್ ಮ್ಯಾನೇಜ್ಮೆಂಟ್ ತಂಡಗಳು ಸ್ಕೀಮ್ ಇನ್ಫಾರ್ಮೇಶನ್ ಡಾಕ್ಯುಮೆಂಟ್ ನಲ್ಲಿ ವ್ಯಾಖ್ಯಾನಿಸಿದಂತೆ ಪೋರ್ಟ್ಫೋಲಿಯೊದಲ್ಲಿನ ಸೆಕ್ಯುರಿಟಿಗಳ ಆಯ್ಕೆಯನ್ನು ನಿರ್ದೇಶಿಸುವ ಪ್ರಕ್ರಿಯೆಯನ್ನು ಹೊಂದಿರುತ್ತವೆ. ಈ ಸೆಕ್ಯುರಿಟಿಗಳ ಕಾರ್ಯಕ್ಷಮತೆ, ವಿಭಿನ್ನ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ, ಅಂತಿಮವಾಗಿ ಯೋಜನೆಯ ಕಾರ್ಯಕ್ಷಮತೆಯನ್ನು ನಿರ್ದೇಶಿಸುತ್ತದೆ.  ಇದಕ್ಕಾಗಿಯೇ, ನೀವು ವಿಭಿನ್ನ ಗುರಿಗಳಿಗಾಗಿ ವಿವಿಧ ರೀತಿಯ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಆಯ್ಕೆ  ಮಾಡುತ್ತೀರಿ ಮತ್ತು  ವಿಭಿನ್ನ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ವಿವಿಧ ಅವಧಿಗೆ ಹೂಡಿಕೆ ಮಾಡುತ್ತೀರಿ. 

ಬೆಲೆ, ಗುಣಮಟ್ಟ, ರಿಸ್ಕ್, ಹಣಕಾಸುಗಳು, ಸುದ್ದಿ ಹರಿವು ಮತ್ತು ಆರ್ಥಿಕ ಅಭಿವೃದ್ಧಿಯ ಆಧಾರದಲ್ಲಿ ಸರಿಯಾದ ನಿರ್ಧಾರಗಳನ್ನು ಮಾಡಲು ಫಂಡ್‌ನಿರ್ವಹಣೆ ತಂಡವು ಉತ್ತಮ ಪ್ರಯತ್ನವನ್ನು ಮಾಡುತ್ತದೆ. ಉತ್ತಮ ಕೌಶಲವನ್ನು ಹೊಂದಿರುವ, ಉತ್ತಮ ಪ್ರಕ್ರಿಯೆಯನ್ನು ಅನುಸರಿಸುವ ಮತ್ತು ಸೂಕ್ತ ಅನುಭವವನ್ನು ಹೊಂದಿರುವ ತಂಡವು ಉತ್ತಮ ಕಾರ್ಯಕ್ಷಮತೆ ತೋರುತ್ತದೆ.

ಆದಾಗ್ಯೂ, ವಾಸ್ತವಿಕ ಸಮಯದ ಕಾಲಮಾನಗಳಲ್ಲಿ ಕಾರ್ಯಕ್ಷಮತೆಯನ್ನು ಅಳೆಯುವುದು ಮುಖ್ಯವಾಗಿದೆ - ಈಕ್ವಿಟಿ ಫಂಡ್ ಗಳಿಗೆ ದೀರ್ಘಾವಧಿ, ಹೈಬ್ರಿಡ್ ಫಂಡ್ ಗಳಿಗೆ ಮಧ್ಯಮಾವಧಿ ಅಥವಾ ಲಿಕ್ವಿಡ್ ಫಂಡ್ ಗಳಿಗೆ ಬಹಳ ಅಲ್ಪಾವಧಿ. 

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ. 

436
ನಾನು ಹೂಡಿಕೆ ಮಾಡಲು ಸಿದ್ಧ