ಡೆಟ್ ಫಂಡ್ಗಳು ರಿಸ್ಕ್ನಿಂದ ಮುಕ್ತವಾಗಿವೆಯೇ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಡೆಟ್ ಫಂಡ್ಗಳು ಷೇರುಗಳ ಮೇಲೆ ಹೂಡಿಕೆ ಮಾಡದಿರುವುದರಿಂದ ರಿಸ್ಕ್ ಹೊಂದಿರುವುದಿಲ್ಲ ಎಂಬುದು ತಪ್ಪು ಕಲ್ಪನೆಯಾಗಿದೆ. ಈಕ್ವಿಟಿ ಫಂಡ್ಗಳಿಗೆ ಹೋಲಿಸಿದರೆ ಡೆಟ್ ಫಂಡ್ಗಳು ಕಡಿಮೆ ರಿಸ್ಕ್ ಹೊಂದಿರುತ್ತವೆ ಎಂಬುದು ನಿಜ. ಆದರೆ ಅದರ್ಥ ನಿಮ್ಮ ಹಣವನ್ನು ಅವು ಎಂದೂ ಕಳೆಯುವುದಿಲ್ಲ ಎಂಬ ಗ್ಯಾರಂಟಿಯನ್ನು ಡೆಟ್ ಫಂಡ್ಗಳು ನೀಡುವುದಿಲ್ಲ. ಡೆಟ್ ಫಂಡ್ಗಳು ಡೆಟ್ ಮತ್ತು ಹಣ ಮಾರುಕಟ್ಟೆ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಈಕ್ವಿಟಿ ಫಂಡ್ಗಳಿಗಿಂತ ವಿಭಿನ್ನ ರೀತಿಯ ರಿಸ್ಕ್ಗೆ ಇವು ತೆರೆದುಕೊಂಡಿರುತ್ತವೆ. 

ಬಡ್ಡಿ ದರ ರಿಸ್ಕ್, ಕ್ರೆಡಿಟ್ ರಿಸ್ಕ್ ಮತ್ತು ಲಿಕ್ವಿಡಿಟಿ ರಿಸ್ಕ್ಗಳಗೆ ಡೆಟ್ ಫಂಡ್ಗಳು ತೆರೆದುಕೊಂಡಿದ್ದು, ನಮಗೆಲ್ಲರಿಗೂ ತಿಳಿದಿರುವ ಷೇರು ಮಾರುಕಟ್ಟೆ ರಿಸ್ಕ್ಗಿಂತ ಇವು ವಿಭಿನ್ನವಾಗಿವೆ. ಈ ರಿಸ್ಕ್ಗಳನ್ನು ದೈನಂದಿನ ಷೇರು ಮಾರುಕಟ್ಟೆ ರಿಸ್ಕ್ರೀತಿ ಪರಿಗಣಿಸಬೇಕಿಲ್ಲ. ಆದರೆ ಇವುಗಳನ್ನು ಸಂಪೂರ್ಣ ನಿರ್ಲಕ್ಷಿಸಲೂ ಆಗದು.

ಬಡ್ಡಿ ದರದಲ್ಲಿ ಉಂಟಾಗುವ ಬದಲಾವಣೆಗಳಿಂದ ಬಡ್ಡಿ ದರ ರಿಸ್ಕ್ ಕಂಡುಬರುತ್ತದೆ. ಇದು ಡೆಟ್ ಫಂಡ್ಹೂಡಿಕೆ ಮಾಡಿರುವ ಬಾಂಡ್ಗಳ ಬೆಲೆಯ ಮೇಲೆ ಬಾಧಿಸುತ್ತದೆ. ಡೆಟ್ ಫಂಡ್ ಹೂಡಿಕೆ ಮಾಡಿದ ಬಾಂಡ್ಗಳ ಯಾವುದೇ ಕಂಪನಿಗಳಲ್ಲಿ ಹಣಕಾಸು ವಿಪತ್ತು ಇದ್ದಲ್ಲಿ ಕ್ರೆಡಿಟ್ ರಿಸ್ಕ್ ಕಂಡುಬರುತ್ತದೆ. ಯಾಕೆಂದರೆ, ಇದರಿಂದಾಗಿ ಈ ಬಾಂಡ್ಗಳ ಬಡ್ಡಿ ಮತ್ತು ಅಸಲು ಪಾವತಿ ಬಾಕಿಯು ವಿಪರೀತ ಅನಿಶ್ಚಿತವಾಗುತ್ತವೆ. ಅಷ್ಟೇನೂ ಹೆಚ್ಚಾಗಿ ವ್ಯಾಪಾರವಾಗದ ಡೆಟ್ ಸೆಕ್ಯುರಿಟಿಗಳಲ್ಲಿ ಲಿಕ್ವಿಡಿಟಿ ರಿಸ್ಕ್ ಕಂಡುಬರುತ್ತದೆ. ಇದರಿಂದಾಗಿ, ಅನಿರೀಕ್ಷಿತ ಸನ್ನಿವೇಶಗಳಲ್ಲಿ ನಷ್ಟದಲ್ಲಿ ಇದರ ಪೋರ್ಟ್ಫೋಲಿಯೋದಲ್ಲಿನ ಸೆಕ್ಯುರಿಟಿಗಳನ್ನು ಮಾರಾಟ ಮಾಡುವ ಸನ್ನಿವೇಶ ಉಂಟಾಗುತ್ತದೆ. ಹೀಗಾಗಿ, ಡೆಟ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿ ಈಕ್ವಿಟಿ ಫಂಡ್ಗಿಂತ ಕಡಿಮೆ ರಿಸ್ಕ್ ಹೊಂದಿರುತ್ತವೆ. ಆದರೆ, ರಿಸ್ಕ್ನಿಂದ ಮುಕ್ತವಾಗಿರುವುದಿಲ್ಲ.

436
ನಾನು ಹೂಡಿಕೆ ಮಾಡಲು ಸಿದ್ಧ