ಭವಿಷ್ಯವನ್ನು ರಕ್ಷಿಸಲು ಆರ್‌ಡಿಗಳು ಮತ್ತು ಎಫ್‌ಡಿಗಳು ಸಾಲುವುದಿಲ್ಲವೇ?

ಭವಿಷ್ಯವನ್ನು ರಕ್ಷಿಸಲು ಆರ್‌ಡಿಗಳು ಮತ್ತು ಎಫ್‌ಡಿಗಳು ಸಾಲುವುದಿಲ್ಲವೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ರಿಕರಿಂಗ್‌ ಡೆಪಾಸಿಟ್‌ಗಳು (ಆರ್‌ಡಿ) ಮತ್ತು ಫಿಕ್ಸೆಡ್‌ ಡೆಪಾಸಿಟ್‌ಗಳು (ಎಫ್‌ಡಿ) ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯ ಉಳಿತಾಯ ಸಲಕರಣೆಗಳಲ್ಲಿ ಒಂದಾಗಿದೆ. ಇವು ಸುರಕ್ಷಿತ ಮತ್ತು ಖಚಿತ ರಿಟರ್ನ್‌ ದರವನ್ನು ಒದಗಿಸುತ್ತವೆ.

ಇದು ಭವಿಷ್ಯದಿಂದ ಹೂಡಿಕೆದಾರರು ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ. ತನ್ನ ಬಂಡವಾಳ ಸುರಕ್ಷಿತವಾಗಿರಬೇಕು ಮತ್ತು ಸಕಾರಣವಾದ ಫಿಕ್ಸೆಡ್‌ ರಿಟರ್ನ್‌ ರೇಟ್‌ ಅನ್ನು ಗಳಿಸಲು ಹೂಡಿಕೆದಾರರು ಬಯಸಿದರೆ, ಹಣದುಬ್ಬರ ಮತ್ತು ತೆರಿಗೆ ಎಷ್ಟೇ ಆಗಿರಲಿ ಇವು ಉತ್ತಮ ವಿಧಾನಗಳಾಗಿರುತ್ತವೆ. ಆದರೆ, ಹಣದುಬ್ಬರ ಮತ್ತು ತೆರಿಗೆಗಳನ್ನು ಮೀರಿಯೂ ಹೂಡಿಕೆದಾರರು ಧನಾತ್ಮಕ ರಿಟರ್ನ್‌ ಅನ್ನು ಗಳಿಸಲು ಬಯಸಿದರೆ, ಆಗ ಇವು ಉತ್ತಮ ವಿಧಾನವಾಗಿರುವುದಿಲ್ಲ.

ಒಬ್ಬ ಹೂಡಿಕೆದಾರರಿಗೆ ಆರಂಭಿಸಲು ದೊಡ್ಡ ಮೊತ್ತದ ಹಣ ಬೇಕಾಗಿದ್ದರೆ ಮತ್ತು ಖರೀದಿ ಶಕ್ತಿಯ ವರ್ದನೆಯ ಬಗ್ಗೆ ಚಿಂತೆ ಇಲ್ಲದಿದ್ದರೆ, ಆಗ ಆರ್‌ಡಿ ಮತ್ತು ಎಫ್‌ಡಿಗಳು ಸುರಕ್ಷಿತ ಮತ್ತು ಉಪಯುಕ್ತ ಉಳಿತಾಯ ಹಾಗೂ ಆದಾಯ ಸೃಷ್ಟಿ ಆಯ್ಕೆಗಳಾಗಿರುತ್ತವೆ. ಅಸಲಿನ ಸುರಕ್ಷತೆ ಮತ್ತು ಸಮಯಕ್ಕೆ ಸರಿಯಾಗಿ ವಾಪಸು ಪಡೆಯುವುದು ಮತ್ತು ನಿರೀಕ್ಷಿತ ಆದಾಯದ ಬಗ್ಗೆ ಹೂಡಿಕೆದಾರರು ಹೆಚ್ಚು ಕಾಳಜಿ ಹೊಂದಿದ್ದರೆ ಅವರಿಗೆ ಎಫ್‌ಡಿ ಸೂಕ್ತವಾಗಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ