ಡೆಟ್ ಫಂಡ್‌ಗಳು ನಿಯತ ಆದಾಯವನ್ನು ನೀಡುತ್ತದೆಯೇ?

ಡೆಟ್ ಫಂಡ್‌ಗಳು ನಿಯತ ಆದಾಯವನ್ನು ನೀಡುತ್ತದೆಯೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಡೆಟ್‌ ಫಂಡ್‌ಗಳು ತಮ್ಮ ಹೂಡಿಕೆದಾರರ ಹಣವನ್ನು ಬಡ್ಡಿ ನೀಡುವ ಸೆಕ್ಯುರಿಟಿಗಳಾದ ಬಾಂಡ್‌ಗಳು, ಕಾರ್ಪೊರೇಟ್‌ ಡೆಪಾಸಿಟ್‌ಗಳು, ಜಿ-ಸೆಕ್‌ಗಳು, ಹಣದ ಮಾರುಕಟ್ಟೆ ಹೂಡಿಕೆಗಳು ಇತ್ಯಾದಿಯಲ್ಲಿ ಹೂಡಿಕೆ ಮಾಡುತ್ತವೆ. ಬಾಂಡ್‌ ಹೂಡಿಕೆದಾರರಿಗೆ ನಿಯತ ಬಡ್ಡಿಯನ್ನು ಪಾವತಿ ಮಾಡಲು (ಕೂಪನ್‌ಗಳು) ಬಾಂಡ್‌ ವಿತರಕರ ಬಾಧ್ಯತೆಯನ್ನು ಹೊಂದಿರುವ ಪ್ರಮಾಣಪತ್ರಗಳಂತೆ ಈ ಬಾಂಡ್‌ಗಳು ಕೆಲಸ ಮಾಡುತ್ತವೆ. ಈ ಮೂಲಕ ಡೆಟ್ ಫಂಡ್‌ಗಳು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಇರುವ ಸೆಕ್ಯುರಿಟಿಗಳಿಂತಹ ನಿಯತ ಬಡ್ಡಿ ಆದಾಯವನ್ನು ಗಳಿಸುತ್ತವೆ. ತನ್ನ ಬಾಂಡ್ ಪೋರ್ಟ್‌ಫೋಲಿಯೋದಿಂದ ಡೆಟ್‌ ಫಂಡ್‌ ಮೂಲಕ ಗಳಿಸುವ ಬಡ್ಡಿಯನ್ನು ಹೂಡಿಕೆದಾರರಿಗೆ ವಿತರಿಸಲಾಗುತ್ತದೆ ಅಥವಾ ಫಂಡ್‌ಗೆ ಸಂಚಯಗೊಳಿಸಲಾಗುತ್ತದೆ. ಅಂದರೆ, ಫಂಡ್‌ ಅಸೆಟ್‌ಗಳಿಗೆ ಸೇರಿಸಲಾಗುತ್ತದೆ. ಇದರಿಂದ ಎನ್‌ಎವಿ ಹೆಚ್ಚಳವಾಗುತ್ತದೆ. ಪೋರ್ಟ್‌ಫೋಲಿಯೋದಲ್ಲರುವ ಸ್ಟಾಕ್‌ಗಳು ಮಾಡುವ ಡಿವಿಡೆಂಡ್ ವಿತರಣೆಯ ಮೇಲೆ ಈಕ್ವಿಟಿ ಫಂಡ್‌ಗಳು ಅವಲಂಬಿಸಿರುತ್ತವೆ. ಆದರೆ, ತಮ್ಮ ಪೋರ್ಟ್‌ಫೋಲಿಯೋದಿಂದ ನಿಯತ ಬಡ್ಡಿ ಆದಾಯವನ್ನು ಡೆಟ್ ಫಂಡ್‌ಗಳು ಹೊಂದಿರುತ್ತವೆ.

ನಿಮ್ಮ ಡೆಟ್ ಫಂಡ್‌ಗಳಿಂದ ನಿಯತ ಆದಾಯವನ್ನು ಪಡೆಯಲು ನೀವು ಬಯಸಿದರೆ  ನೀವು ಡಿವಿಡೆಂಡ್ ಪಾವತಿ ಆಯ್ಕೆಯನ್ನು ಪಡೆಯಬಹುದು. ಈ ಆಯ್ಕೆಯನ್ನು ಡಿವಿಡೆಂಡ್ ಪಾವತಿ ಎಂದು ಕರೆಯಲಾಗಿದ್ದು, ಇದು ತನ್ನ ಪೋರ್ಟ್‌ಫೋಲಿಯೋದ ಮೇಲೆ ಗಳಿಸಿದ ಬಡ್ಡಿ ಆದಾಯ ಮತ್ತು ಇತರ ಬಂಡವಾಳದ ಮೇಲಿನ ಗಳಿಕೆಯನ್ನು ವಿತರಿಸುತ್ತದೆ. ಬಡ್ಡಿ ನೀಡುವ ಸೆಕ್ಯುರಿಟಿಗಳನ್ನು ಡೆಟ್ ಫಂಡ್‌ಗಳ ಪೋರ್ಟ್‌ಫೋಲಿಯೋ ಒಳಗೊಂಡಿದ್ದರೂ, ಡಿವಿಡೆಂಡ್ ವಿತರಣೆ ಖಚಿತವಾಗಿರುವುದಿಲ್ಲ ಮತ್ತು ಈಕ್ವಿಟಿ ಮ್ಯೂಚುವಲ್‌ ಫಂಡ್‌ನಷ್ಟು ಅನಿಶ್ಚಿತತೆ ಇಲ್ಲದಿದ್ದರೂ, ಡಿವಿಡೆಂಡ್‌ಗಳ ಪಾವತಿ ಗ್ಯಾರಂಟಿ ನೀಡುವುದಿಲ್ಲ. ವಿತರಿಸಬಹುದಾದ ಹೆಚ್ಚುವರಿ ಇದ್ದಾಗ ಮಾತ್ರ ಡಿವಿಡೆಂಡ್‌ಗಳನ್ನು ಪಾವತಿ ಮಾಡಲಾಗುತ್ತದೆ. ವಿತರಿಸಬಹುದಾದ ಹೆಚ್ಚುವರಿಯ ಬಗ್ಗೆ ಮಾತನಾಡುವುದಾದರೆ, ಇದರಿಂದ ಬರುವ ಆದಾಯ ನಿಯತವಾಗಿರುವುದಿಲ್ಲ.

442
ನಾನು ಹೂಡಿಕೆ ಮಾಡಲು ಸಿದ್ಧ