ಹಣ ಹರಿದುಹೋಗಲು ಬಿಡಬೇಡಿ. ಬೆಳೆಯಲು ಬಿಡಿ!

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ವಿಭಿನ್ನ ರೀತಿಯ ಮ್ಯೂಚುವಲ್ ಫಂಡ್ ಸ್ಕೀಮ್ಗಳು ವಿಭಿನ್ನ ರೀತಿಯ ರಿಟರ್ನ್ಸ್ ಅನ್ನು ನೀಡುತ್ತವೆಯೇ?

ಯಾಕೆ ನಾವು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕು? ಹಲವು ಮ್ಯೂಚುವಲ್ ಫಂಡ್ಗಳು ಉತ್ತಮ ಸಾಧನೆ ಮಾಡುತ್ತಿಲ್ಲ ಎಂಬ ದೂರುಗಳನ್ನು ನಾವು ಕೇಳುತ್ತಿರುತ್ತೇವೆ. ಮ್ಯೂಚುವಲ್ ಫಂಡ್ಗಳು ಯಾವುದೇ ಗ್ಯಾರಂಟಿ ನೀಡುವುದೂ ಇಲ್ಲ. ಈ ಮಿತಿಗಳನ್ನು ಪರಿಗಣಿಸಿದಾಗ, ಒಬ್ಬ ವ್ಯಕ್ತಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಬೇಕು ಎಂಬುದಕ್ಕೆ ಯಾವುದಾದರೂ ಕಾರಣವಿದೆಯೇ? ಅವು ಉತ್ತಮ ಪರ್ಫಾರ್ಮ್ ಮಾಡುತ್ತವೆಯೇ?”

ಇದೇ ರೀತಿಯ ಪ್ರಶ್ನೆಗಳನ್ನು ಆಗಾಗ್ಗೆ ಮ್ಯೂಚುವಲ್ ಫಂಡ್ನಲ್ಲಿ ಈಗ ಹೂಡಿಕೆ ಮಾಡಿರುವವರೂ ಕೇಳುತ್ತಾರೆ.

ಬಹುತೇಕ ಪ್ರಕರಣಗಳಲ್ಲಿ ಪ್ರಶ್ನೆಗಳು ಹೀಗೆಯೇ ಇದ್ದರೂ, ಪ್ರಶ್ನೆಯ ಮೂಲ ಮತ್ತು ಯಾಕೆ ಈ ಪ್ರಶ್ನೆ ಉದ್ಭವಿಸಿತು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ.

ಒಂದು ಪ್ರಕರಣದಲ್ಲಿ, ಹೂಡಿಕೆದಾರರು ನಿರೀಕ್ಷಿಸಿದಷ್ಟು ರಿಟರ್ನ್ ಅನ್ನು ಹೂಡಿಕೆ ಮಾಡಿದ ಮೊತ್ತದ ಮೇಲೆ ನೀಡಿರಲಿಲ್ಲ. ಆದರೆ ಈ ಬಗ್ಗೆ ಶೋಧ ನಡೆಸಿದಾಗ, ಹೂಡಿಕೆದಾರ ಎರಡು ಸಂಪೂರ್ಣ ವಿಭಿನ್ನ ಸ್ಕೀಮ್ಗಳನ್ನು ಹೋಲಿಕೆ ಮಾಡುತ್ತಿದ್ದರು ಎಂದು ಕಂಡುಬಂತು. ಇದು ಒಂದು ರೀತಿಯಲ್ಲಿ ಸೇಬು ಹಣ್ಣುಗಳನ್ನು ಕಿತ್ತಳೆ ಹಣ್ಣಿನ ಜೊತೆ ಹೋಲಿಕೆ ಮಾಡಿದಂತೆ. ಸರಿಯಾದ ವಿಧಾನವೇ ಅಲ್ಲ.

ಇನ್ನೊಂದು ಪ್ರಕರಣದಲ್ಲಿ ಹೂಡಿಕೆದಾರರು ಒಟ್ಟಾರೆ ಮಾರುಕಟ್ಟೆಯೇ ಕುಸಿತದಲ್ಲಿರುವ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ದರು. ವ್ಯಕ್ತಿಯೊಬ್ಬ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡರೆ, ಆತ ಎಷ್ಟೇ ಉತ್ತಮ ಡ್ರೈವರ್ ಆಗಿದ್ದರೂ, ಕಾರು ಎಷ್ಟು ಉತ್ತಮವೇ ಆಗಿದ್ದರೂ ಬೇಗ ಹೋಗಲು ಸಾಧ್ಯವೇ ಇರುವುದಿಲ್ಲ. ಇದೇ ಸಂಗತಿಯು ಒಟ್ಟಾರೆ ಮಾರ್ಕೆಟ್ ಉತ್ತಮ ಸ್ಥಿತಿಯಲ್ಲಿಲ್ಲದಿದ್ದಾಗಲೂ ಆಗುತ್ತದೆ. ಇಂತಹ ಪ್ರಕರಣದಲ್ಲಿ, ಅಂದರೆ ಟ್ರಾಫಿಕ್ ಜಾಮ್ ಆಗಿದ್ದಾಗ, ದಟ್ಟಣೆ ಕಡಿಮೆಯಾಗುವವರೆಗೂ ಕಾಯುವುದೊಂದೇ ಉತ್ತಮ ವಿಧಾನ.

ಬಹುತೇಕ ಸನ್ನಿವೇಶಗಳಲ್ಲಿ, ನಾವು ನೋಡುವ ವಿಧಾನ ತಪ್ಪಾಗಿದ್ದರಿಂದಲೇ ಮ್ಯೂಚುವಲ್ ಫಂಡ್ ಉತ್ತಮ ಪರ್ಫಾರ್ಮ್ ಮಾಡುತ್ತಿಲ್ಲ ಎಂಬಂತೆ ಕಾಣಿಸುತ್ತಿರುತ್ತದೆ.

439
ನಾನು ಹೂಡಿಕೆ ಮಾಡಲು ಸಿದ್ಧ