ಮ್ಯೂಚುಯಲ್ ಫಂಡ್ ಕಾರ್ಯಕ್ಷಮತೆಯನ್ನು ಒಬ್ಬರು ಹೇಗೆ ಟ್ರ್ಯಾಕ್ ಮಾಡಬಹುದು?

ಮ್ಯೂಚುಯಲ್ ಫಂಡ್ ಕಾರ್ಯಕ್ಷಮತೆಯನ್ನು ಒಬ್ಬರು ಹೇಗೆ ಟ್ರ್ಯಾಕ್ ಮಾಡಬಹುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಈ ಡಿಜಿಟಲ್‌ ಮತ್ತು ಮಾಹಿತಿ ಯುಗದಲ್ಲಿ, ಹೂಡಿಕೆ ಮತ್ತು ಪೋರ್ಟ್‌ಫೋಲಿಯೋ ಕಾರ್ಯಕ್ಷಮತೆಯ ಟ್ರ್ಯಾಕ್‌ ಮಾಡುವುದು ಸುಲಭವಾಗಿದೆ. ಮ್ಯೂಚುಯಲ್ ಫಂಡ್ ವಿತರಕರು ಅಥವಾ ಹೂಡಿಕೆ ಸಲಹೆಗಾರರಂತಹ ಹಣಕಾಸು ತಜ್ಞರು ನಿಮ್ಮ ಹಣಕಾಸಿನ ಪ್ರಯಾಣದಲ್ಲಿ ಭರಿಸಲಾಗದ ಪಾಲುದಾರರಾಗಿದ್ದಾರೆ, ಹೂಡಿಕೆದಾರರು ತಮ್ಮ ಸ್ವಂತ ಹೂಡಿಕೆಗಳ ಬಗ್ಗೆ ಸ್ವಲ್ಪ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿಂತಿಸಬೇಡಿ, ನೀವು ಸ್ಪ್ರೆಡ್‌ಶೀಟ್‌ಗಳು ಮತ್ತು ಗ್ರಾಫ್‌ಗಳನ್ನು ಬಿಡಿಸಿಕೊಂಡು ಕುಳಿತುಕೊಳ್ಳುವ ಅಗತ್ಯವಿರುವುದಿಲ್ಲ.

ಸಲಹೆಗಾರರು ಅಥವಾ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿದ ಎಲ್ಲರೂ ಸಾಮಾನ್ಯವಾಗಿ ಪೋರ್ಟ್‌ಫೋಲಿಯೋ ಮತ್ತು ಸ್ಕೀಮ್‌ ಕಾರ್ಯಕ್ಷಮತೆಯನ್ನು ಟ್ರ್ಯಾಕ್‌ ಮಾಡುವ ಅಪ್‌ಡೇಟ್‌ಗಳು ಮತ್ತು ರಿವ್ಯೂ ಸ್ಟೇಟ್‌ಮೆಂಟ್‌ಗಳನ್ನು ಪಡೆಯುತ್ತಾರೆ. ಇಂತಹ ಸ್ಟೇಟ್‌ಮೆಂಟ್‌ಗಳು ಇಲ್ಲದಿದ್ದರೂ, ಸ್ಕೀಮ್‌ ಕಾರ್ಯಕ್ಷಮತೆಯ ಟ್ರ್ಯಾಕ್‌ ಮಾಡುವ ಹಲವು ವೆಬ್‌ಸೈಟ್‌ಗಳು ಮತ್ತು ಮೊಬೈಲ್‌ ಆಪ್‌ಗಳು ಇವೆ. ಇಂತಹ ಕೆಲವು ಸೈಟ್‌ಗಳನ್ನು ಕಸ್ಟಮೈಸ್ ಮಾಡಿ ನಿರ್ದಿಷ್ಟ ಪೋರ್ಟ್‌ಫೋಲಿಯೋವನ್ನು ಟ್ರ್ಯಾಕ್‌ ಮಾಡಬಹುದು. ಜನಪ್ರಿಯ ವಾಣಿಜ್ಯ ದಿನಪತ್ರಿಕೆಗಳು ಕೂಡ ಮ್ಯೂಚವಲ್‌ ಫಂಡ್‌ಗಳನ್ನು ನಿಯತವಾಗಿ ಪರಿಶೀಲಿಸುತ್ತವೆ ಮತ್ತು ವರದಿ ಮಾಡುತ್ತವೆ.

ಇದರ ಜೊತೆಗೆ, ಫಂಡ್‌ ಫ್ಯಾಕ್ಟ್‌ ಶೀಟ್ ಬಳಸಿ ನಿಮ್ಮ ಹೂಡಿಕೆಯನ್ನು ನೀವು ಟ್ರ್ಯಾಕ್ ಮಾಡಬಹುದು. ಇದು ಪ್ರಾಥಮಿಕ ಒಂದು ಪುಟದ ದಾಖಲೆಯಾಗಿದ್ದು, ಮ್ಯೂಚುವಲ್‌ ಫಂಡ್‌ ಸ್ಕೀಮ್‌ನ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ಜೊತೆಗೆ ಸ್ಕೀಮ್‌ನ ಕಾರ್ಯಕ್ಷಮತೆ ಮತ್ತು ಪೋರ್ಟ್‌ಫೋಲಿಯೋದ ಮಾಹಿತಿಯನ್ನೂ ಒಳಗೊಂಡಿರುತ್ತದೆ ಮತ್ತು ಪ್ರತಿ ಮ್ಯೂಚುವಲ್‌ ಫಂಡ್‌ ಕೂಡ ಪ್ರತಿ ತಿಂಗಳು ಪ್ರಕಟಿಸುತ್ತದೆ. ಇದು ರಿಪೋರ್ಟ್‌ ಕಾರ್ಡ್‌ ರೀತಿ ಇದ್ದು, ಸ್ಕೀಮ್‌ನ ಆರೋಗ್ಯವನ್ನು ಸೂಚಿಸುತ್ತದೆ.

ಫ್ಯಾಕ್ಟ್‌ ಶೀಟ್‌ನಲ್ಲಿ ಏನಿರುತ್ತದೆ ಎಂಬುದನ್ನು ಎಡಭಾಗದಲ್ಲಿರುವ ಇನ್ಫೋಗ್ರಾಫಿಕ್‌ ತೋರಿಸುತ್ತದೆ.

439
ನಾನು ಹೂಡಿಕೆ ಮಾಡಲು ಸಿದ್ಧ