ಒಂದು ಮ್ಯೂಚುವಲ್‌ ಫಂಡ್ ಸ್ಕೀಮ್‌ ಬಳಸಿ ವಿವಿಧ ಸ್ವತ್ತು ವರ್ಗಗಳಲ್ಲಿ ಹೂಡಿಕೆ ಮಾಡಬಹುದೇ?

ಒಂದು ಮ್ಯೂಚುವಲ್‌ ಫಂಡ್ ಸ್ಕೀಮ್‌ ಬಳಸಿ ವಿವಿಧ ಸ್ವತ್ತು ವರ್ಗಗಳಲ್ಲಿ ಹೂಡಿಕೆ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು ಅಸೆಟ್ ವಿಭಾಗದಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಸ್ಪೆಷಲಿಸ್ಟ್ ಬೌಲರುಗಳು ಅಥವಾ ಬ್ಯಾಟ್ಸ್‌ಮನ್‌ ರೀತಿ ಆಗಿರುತ್ತದೆ. ಹೈಬ್ರಿಡ್ ಫಂಡ್‌ಗಳು ಎಂದು ಕರೆಯಲಾಗುವ ಇತರ ಕೆಲವು ಸ್ಕೀಮ್‌ಗಳು ಒಂದಕ್ಕಿಂತ ಹೆಚ್ಚು ಸ್ವತ್ತು ವಿಭಾಗಗಳಲ್ಲಿ ಹೂಡಿಕೆ ಮಾಡುತ್ತವೆ. ಅಂದರೆ ಕೆಲವು ಈಕ್ವಿಟಿಯಲ್ಲಿ ಮತ್ತು ಡೆಟ್‌ನಲ್ಲಿ ಎರಡರಲ್ಲೂ ಹೂಡಿಕೆ ಮಾಡುತ್ತವೆ. ಈಕ್ವಿಟಿ ಮತ್ತು ಡೆಟ್‌ ಹೊರತಾಗಿ ಕೆಲವರು ಚಿನ್ನದಲ್ಲೂ ಹೂಡಿಕೆ ಮಾಡಬಹುದು.

ಕ್ರಿಕೆಟ್‌ನಲ್ಲಿ ನಾವು, ಉತ್ತಮ ಕೌಶಲ್ಯವನ್ನು ಆಧರಿಸಿ ಬ್ಯಾಟಿಂಗ್ ಆಲ್‌ ರೌಂಡರ್‌ಗಳು ಮತ್ತು ಬೌಲಿಂಗ್ ಆಲ್‌ ರೌಂಡರ್‌ಗಳನ್ನು ನೋಡುತ್ತೇವೆ. ಇದೇ ರೀತಿ, ಇನ್ನೊಂದಕ್ಕೆ ಹೋಲಿಸಿದರೆ ಒಂದು ಸ್ವತ್ತು ವಿಭಾಗದಲ್ಲಿ ಭಾರಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳೂ ಇವೆ.

ಅತ್ಯಂತ ಹಳೆಯ ವಿಭಾಗವೆಂದರೆ, ಈಕ್ವಿಟಿ ಮತ್ತು ಡೆಟ್‌ನಲ್ಲಿ ಹೂಡಿಕೆ ಮಾಡುವ ಬ್ಯಾಲೆನ್ಸ್‌ಡ್‌ ಫಂಡ್‌ ವಿಭಾಗವಾಗಿದೆ. ಈಕ್ವಿಟಿಗೆ ನಿಯೋಜನೆಯು ಸಾಮಾನ್ಯವಾಗಿ ಅಧಿಕವಾಗಿರುತ್ತದೆ (ಶೇ. 65 ಕ್ಕಿಂತ ಹೆಚ್ಚು) ಮತ್ತು ಉಳಿದವನ್ನು ಡೆಟ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ.

ಇನ್ನೊಂದು ಜನಪ್ರಿಯ ವಿಭಾಗವನ್ನು ಎಂಐಪಿ ಎಂದು ಕರೆಯಲಾಗುತ್ತದೆ. ಹೂಡಿಕೆದಾರರಿಗೆ ಮಾಸಿಕ (ಅಥವಾ ನಿಯತ) ಆದಾಯ ನೀಡುವ ಯೋಜನೆ ಇದಾಗಿದೆ. ಆದರೆ, ಇದರಲ್ಲಿ ನಿಯತ ಆದಾಯದ ಗ್ಯಾರಂಟಿ ಇರುವುದಿಲ್ಲ. ಈ ಸ್ಕೀಮ್‌ಗಳು ಪ್ರಾಥಮಿಕವಾಗಿ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ ನಿಯತ ಆದಾಯವನ್ನು ಜನರೇಟ್ ಮಾಡಬಹುದು. ಹಲವು ವರ್ಷಗಳಲ್ಲಿ ರಿಟರ್ನ್ಸ್ ಅನ್ನು ಹೆಚ್ಚಿಸಲು ಈಕ್ವಿಟಿಯಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ.

ಹೈಬ್ರಿಡ್‌ ಸ್ಕೀಮ್‌ನ ಇನ್ನೊಂದು ವೈವಿಧ್ಯವು ಈಕ್ವಿಟಿ , ಡೆಟ್ ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಿ ಒಂದೇ ಪೋರ್ಟ್‌ಫೋಲಿಯೋದ ಮೂರು ವಿಭಿನ್ನ ಸ್ವತ್ತು ವಿಭಾಗಗಳ ಅನುಕೂಲವನ್ನು ಪಡೆಯುತ್ತದೆ.

ಹೈಬ್ರಿಡ್ ಪೋರ್ಟ್‌ಫೋಲಿಯೋ ರಚಿಸಲು ವಿಭಿನ್ನ ಈಕ್ವಿಟಿ ಅಥವಾ ಡೆಟ್ ಅಥವಾ ಗೋಲ್ಡ್‌ ಫಂಡ್ ಸ್ಕೀಮ್‌ಗಳನ್ನು ಖರೀದಿ ಮಾಡುವ ಆಯ್ಕೆಯನ್ನು ಹೂಡಿಕೆದಾರರು ಹೊಂದಿರುತ್ತಾರೆ ಅಥವಾ ಇದಕ್ಕೆ ಪರ್ಯಾಯವಾಗಿ ಹೈಬ್ರಿಡ್ ಫಂಡ್ ಅನ್ನು ಖರೀದಿ ಮಾಡಬಹುದಾಗಿದೆ.

435
ನಾನು ಹೂಡಿಕೆ ಮಾಡಲು ಸಿದ್ಧ