ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಯಾವ ಯಾವ ರೀತಿಯ ವೆಚ್ಚ ಇರುತ್ತವೆ?

ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಯಾವ ಯಾವ ರೀತಿಯ ವೆಚ್ಚ ಇರುತ್ತವೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹಲವು ಸೇವೆಗಳನ್ನು ಹೂಡಿಕೆದಾರರಿಗೆ ಒದಗಿಸುವಲ್ಲಿ ಹಲವು ಸಂಗತಿಗಳು ಒಳಗೊಂಡಿರುತ್ತವೆ. ಈ ಮೂಲಕ ಆತ/ಆಕೆ ತನ್ನ ಹಣಕಾಸಿನ ಗುರಿಗಳನ್ನು ಸಾಧಿಸಬಹುದು.

ಈ ಎಲ್ಲ ಅಂಶಗಳಿಗೂ ಅವು ಒದಗಿಸುವ ಸೇವೆಗಳಿಗೆ ಸೂಕ್ತ ಸಂಭಾವನೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ, ಪ್ರತಿ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗೂ ಶುಲ್ಕ ವಿಧಿಸಲಾಗುತ್ತದೆ. ಇದು ಒಟ್ಟು ಸ್ಕೀಮ್‌ನ ಒಟ್ಟು ಬಂಡವಾಳದ ಶೇಕಡಾವಾರು ರೂಪದಲ್ಲಿರುತ್ತದೆ. ಸೆಬಿ ಈ ನಿಟ್ಟಿನಲ್ಲಿ ಒಂದಷ್ಟು ಮಿತಿ ವಿಧಿಸಿದ್ದು, ಇದಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ವಿಧಿಸಿದ ಶುಲ್ಕಕ್ಕಿಂತ ವೆಚ್ಚವಾಗುವ ಶುಲ್ಕ ಹೆಚ್ಚಿದ್ದರೂ ಮ್ಯೂಚುವಲ್‌ ಫಂಡ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವಂತಿರುವುದಿಲ್ಲ. ಈ ಮೇಲೆ ಹೇಳಿದ ಸೆಬಿ ನಿಯಮಾವಳಿಗಳ ಪ್ರಕಾರ, ಫಂಡ್‌ನ ಗಾತ್ರ ಬೆಳೆದಂತೆ ಅಸೆಟ್ಸ್ ಅಂಡರ್ ಮ್ಯಾನೇಜ್‌ಮೆಂಟ್ ವಿಧಿಸುವ ಶೇಕಡಾವಾರು ಶುಲ್ಕವು ಕಡಿಮೆಯಾಗುತ್ತದೆ.

ನೀವು ಹೂಡಿಕೆ ಮಾಡಲು ಬಯಸಿದ ಪ್ರತಿ ಸ್ಕೀಮ್‌ಗೆ ಗರಿಷ್ಠ ಅನುಮತಿಸಿದ ಎಕ್ಸ್‌ಪೆನ್ಸ್‌ ರೇಶಿಯೋ ಎಷ್ಟು ಎಂಬುದನ್ನು ಕೊಡುಗೆ ದಾಖಲೆಯಲ್ಲಿ ವಿವರಿಸಲಾಗಿರುತ್ತದೆ. ಮಾಸಿಕ ಫ್ಯಾಕ್ಟ್‌ಶೀಟ್ ಮತ್ತು ಅರೆ ವಾರ್ಷಿಕ ಕಡ್ಡಾಯ ಬಹಿರಂಗಗೊಳಿಸುವಿಕೆಯಲ್ಲಿ ಪ್ರತಿ ಸ್ಕೀಮ್‌ಗೆ ವಿಧಿಸಲಾಗುವ ವಾಸ್ತವ ವೆಚ್ಚವನ್ನು ನೀವು ನೋಡಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ