ಇಟಿಎಫ್‌ನ ಮಿತಿಗಳು ಯಾವುವು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇಟಿಎಫ್‌ಗಳು ಪ್ಯಾಸಿವ್ ಹೂಡಿಕೆ ವಿಧಾನಗಳಾಗಿವೆ. ಇವು ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತವೆ ಮತ್ತು ಷೇರುಗಳಂತೆಯೇ ಎಕ್ಸ್‌ಚೇಂಜ್‌ಗಳಲ್ಲಿ ಟ್ರೇಡ್ ಮಾಡುತ್ತವೆ. ಆದರೆ, ಬ್ರೋಕರ್ ಮೂಲಕ ಎಕ್ಸ್‌ಚೇಂಜ್‌ನಿಂದಲೇ ಇಟಿಎಫ್‌ಗಳನ್ನು ಖರೀದಿ ಮತ್ತು ಮಾರಾಟ ಮಾಡಬೇಕು. ಇಟಿಎಫ್‌ಗಳನ್ನು ಟ್ರೇಡ್ ಮಾಡಲು ನೀವು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು ಮತ್ತು ಪ್ರತಿ ವಹಿವಾಟಿಗೂ ಬ್ರೋಕರ್‌ಗೆ ಕಮಿಷನ್‌ ನೀಡಬೇಕಾಗುತ್ತದೆ. ನೈಜ ಸಮಯದ ಟ್ರೆಡಿಂಗ್‌ನ ಲಾಭ ಮಾಡಿಕೊಳ್ಳಲು ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಕಾಲ ಸರಿದಂತೆ ಕಮಿಷನ್ ವೆಚ್ಚವು ನಿಮ್ಮ ರಿಟರ್ನ್ಸ್ ಅನ್ನು ಕಡಿಮೆ ಮಾಡಬಹುದು. 

ಎರಡನೆಯದಾಗಿ, ರೂಪಾಯಿ ವೆಚ್ಚ ಸರಾಸರಿ ಮಾಡುವ ಲಾಭವನ್ನು ಇಟಿಎಫ್‌ಗಳು ಒದಗಿಸುವುದಿಲ್ಲ. ಇದು ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಲಭ್ಯವಿರುತ್ತವೆ. ಇಟಿಎಫ್‌ಗಳಲ್ಲಿ ನೀವು ನಿಯತ ಹೂಡಿಕೆ ಮಾಡಲು ಬಯಸಿದರೆ, ಪ್ರತಿ ವಹಿವಾಟಿನಲ್ಲೂ ನೀವು ಕಮಿಷನ್ ವೆಚ್ಚವನ್ನು ಭರಿಸಬೇಕಾಗುತ್ತದೆ. ಇಟಿಎಫ್‌ಗಳು ಗ್ರೋತ್ ಮತ್ತು ಡಿವಿಡೆಂಡ್ ರೀತಿಯ ಆಯ್ಕೆಯನ್ನು ಒದಗಿಸುವುದಿಲ್ಲ. ಹೂಡಿಕೆದಾರರು ತಮ್ಮ ಹಣಕಾಸು ಗುರಿಗಳಿಗೆ ಸೂಕ್ತವಾದ ಆಯ್ಕೆಯನ್ನು ಮಾಡಬೇಕಿದೆ. ಉದಾಹರಣೆಗೆ, ನಿಯತ ಆದಾಯವನ್ನು ಬಯಸುವ ನಿವೃತ್ತರ ಅಗತ್ಯವನ್ನು ಅಥವಾ ನಿಯತ ಆಧಾರದಲ್ಲಿ ಡಿವಿಡೆಂಡ್ ಬಯಸುವ ವ್ಯಕ್ತಿಗಳ ಅಗತ್ಯವನ್ನು ಇಟಿಎಫ್‌ ಪೂರೈಸುವುದಿಲ್ಲ.

ಕೆಲವು ಇಟಿಎಫ್‌ಗಳು ಸ್ಥಾಪಿತ ಅಥವಾ ವಲಯವಾರಿ ಆಗಿರುತ್ತದೆ ಮತ್ತು ಇವುಗಳ ಟ್ರೇಡ್ ಕಡಿಮೆ ಇರುತ್ತದೆ. ಇಟಿಎಫ್‌ಗಳಲ್ಲಿ ವಹಿವಾಟು ಮಾಡುವಾಗ ಬಿಡ್‌/ಆಸ್ಕ್ (ಎನ್‌ಎವಿ ಇಂದ ಇಟಿಎಫ್‌ನ ಪ್ರಸ್ತುತ ಬೆಲೆಯ ಮಧ್ಯದ ವ್ಯತ್ಯಾಸ) ಮಧ್ಯೆ ವ್ಯಾಪಕ ಅಂತರ ಇರುವುದನ್ನು ಹೂಡಿಕೆದಾರರು ಗಮನಿಸಬಹುದು. ಇಟಿಎಫ್‌ಗಳು ಇಂಟ್ರಾಡೇ ಟ್ರೇಡಿಂಗ್ ಅವಕಾಶಗಳನ್ನು ಒದಗಿಸುತ್ತದೆ. ಇವು ಅಲ್ಪಕಾಲದಲ್ಲಿ ಉತ್ತಮವಾಗಿರಬಹುದು. ಇವು ದೀರ್ಘಕಾಲಿಕ ಹಣಕಾಸು ಯೋಜನೆಗೆ ಸೂಕ್ತವೂ ಆಗಿರಬಹುದು. 

436
ನಾನು ಹೂಡಿಕೆ ಮಾಡಲು ಸಿದ್ಧ