ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು?

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ಗಳನ್ನು ಓಪನ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದು ವರ್ಗೀಕರಿಸಬಹುದು. ಅವೆರಡರ ಮಧ್ಯೆ ವ್ಯತ್ಯಾಸ ಏನಿದೆ? ನೋಡೋಣ.

1)    ಅವು ಯಾವುವು?

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು?
ಯಾವುದೇ ಸಮಯದಲ್ಲಿ ಹೂಡಿಕೆದಾರರು ಯುನಿಟ್‌ಗಳನ್ನು ಖರೀದಿಸಿ, ಮಾರಾಟ ಮಾಡಲು ಓಪನ್ ಎಂಡೆಡ್‌ ಮ್ಯೂಚವಲ್‌ ಫಂಡ್‌ಗಳ ವಿಭಾಗವು ಅನುವು ಮಾಡುತ್ತದೆ. ಒಮ್ಮೆ ಹೊಸ ಫಂಡ್ ಆಫರ್ ಮುಕ್ತಾಯವಾದ ನಂತರ, ಕೆಲವೇ ದಿನಗಳಲ್ಲಿ ಹೂಡಿಕೆಯನ್ನು ಒಪ್ಪಿಕೊಳ್ಳಲು ಫಂಡ್ ಆರಂಭಿಸುತ್ತದೆ. ಹೀಗಾಗಿ, ಯಾವುದೇ ಸಮಯದಲ್ಲಿ ಹೂಡಿಕೆದಾರರು ಸ್ಕೀಮ್‌ ಮಾಹಿತಿ ದಾಖಲೆಯ ಪ್ರಕಾರ ಸ್ಕೀಮ್‌ನ ಯುನಿಟ್‌ಗಳಲ್ಲಿ ಹೂಡಿಕೆ ಆರಂಭಿಸಬಹುದು. 


ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಯಾವುವು?

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕ್ಲೋಸ್-ಎಂಡೆಡ್ ಫಂಡ್ಗಳನ್ನು ಮುಕ್ತಾಯ ದಿನಾಂಕ ಅಥವಾ ಸ್ಥಿರ ಅವಧಿಯನ್ನು ಹೊಂದಿರುವ ಮ್ಯೂಚುಯಲ್ ಫಂಡ್ಗಳು ಎಂದು ವ್ಯಾಖ್ಯಾನಿಸುತ್ತದೆ.  ಈ ಮ್ಯೂಚುವಲ್ ಫಂಡ್‌ಗಳ ಸ್ಕೀಮ್ ಅನ್ನು ಆರಂಭಿಸಿದಾಗ ನಿರ್ದಿಷ್ಟಪಡಿಸಿದ ಅವಧಿಗೆ ಸಬ್‌ಸ್ಕ್ರಿಪ್ಷನ್‌ಗೆ ಲಭ್ಯವಿರುತ್ತದೆ ಮತ್ತು ಹೂಡಿಕೆ ಅವಧಿಯ ಕೊನೆಯಲ್ಲಿ ರಿಡೀಮ್ ಮಾಡಬಹುದಾಗಿದೆ.


2)    ಅವು ಹೇಗೆ ಕೆಲಸ ಮಾಡುತ್ತವೆ?

ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳು 

ಎಲ್ಲ ಮ್ಯೂಚುವಲ್‌ ಫಂಡ್‌ಗಳನ್ನು ನ್ಯೂ ಫಂಡ್ ಆಫರ್‌ (ಎನ್‌ಎಫ್‌ಒ) ಮೂಲಕ ಮಾರ್ಕೆಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತದೆ. ಸಾಮಾನ್ಯವಾಗಿ, ಗರಿಷ್ಠ 15 ದಿನಗಳವರೆಗೆ ಎನ್‌ಎಫ್ಒ ತೆರೆದಿರುತ್ತದೆ. ಎನ್‌ಎಫ್‌ಒ ಮಾಡಿದ ನಂತರ, ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಹೂಡಿಕೆಯನ್ನು ಆರಂಭಿಸಬಹುದು.

ನೀವು ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ, ನೆಟ್ ಅಸೆಟ್ ವ್ಯಾಲ್ಯೂದಲ್ಲಿ ನೀವು ಯುನಿಟ್‌ಗಳನ್ನು ಖರೀದಿ ಅಥವಾ ಮಾರಾಟ ಮಾಡಬೇಕಿರುತ್ತದೆ. ಫಂಡ್ ಹೂಡಿಕೆ ಮಾಡಿದ ಎಲ್ಲ ಸೆಕ್ಯುರಿಟಿಗಳ ಮಾರ್ಕೆಟ್ ಮೌಲ್ಯವೇ ಎನ್‌ಎವಿ. ಸೆಕ್ಯುರಿಟಿಗಳ ಮಾರ್ಕೆಟ್ ವ್ಯಾಲ್ಯೂ ಆಧರಿಸಿ ಎನ್‌ಎವಿ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಈ ಮ್ಯೂಚುವಲ್ ಫಂಡ್‌ಗಳು ಎಷ್ಟು ಯುನಿಟ್‌ಗಳನ್ನು ತೆರೆಯಬಹುದು ಎಂಬುದಕ್ಕೆ ಯಾವುದೇ ಮಿತಿ ಇಲ್ಲ ಹಾಗೂ ಪಕ್ವತೆ ಅವಧಿಯೂ ಇರುವುದಿಲ್ಲ.

ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳನ್ನು ಪ್ರೊಫೆಷನಲ್ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಇವರು ಫಂಡ್‌ನ ಉದ್ದೇಶ ಮತ್ತು ಆಫರ್ ದಾಖಲೆಗಳನ್ನು ಆಧರಿಸಿ ಹೂಡಿಕೆ ನಿರ್ಧಾರಗಳನ್ನು ಮಾಡುತ್ತಾರೆ. ಸ್ಕೀಮ್‌ ಮಾಹಿತಿ ದಾಖಲೆಯ ಪ್ರಕಾರ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು (ಎಸ್‌ಐಪಿ), ಒಟ್ಟಾರೆ ಮೊತ್ತ ಅಥವಾ ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್‌ಗಳು (ಎಸ್‌ಟಿಪಿ) ಮೂಲಕ ನೀವು ಈ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು

ನ್ಯೂ ಆಫರ್ ಫಂಡ್ (ಎನ್‌ಎಫ್ಒ) ಎಂಬುದು ಒಂದು ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯಿಂದ (ಎಎಂಸಿ) ಹೊಸ ಸ್ಕೀಮ್ ಅನ್ನು ಪ್ರಾರಂಭಿಸಿದಾಗ ಮಾಡಲಾಗುವ ಮೊದಲ ಬಾರಿಯ ಸಬ್‌ಸ್ಕ್ರಿಪ್ಷನ್ ಆಫರ್ ಆಗಿರುತ್ತದೆ. ಕ್ಲೋಸ್ ಎಂಡೆಡ್‌ ಫಂಡ್‌ಗಳಿಗೂ ಇದು ಹಾಗೆಯೇ ಇರುತ್ತದೆ. ಎನ್‌ಎಫ್‌ಒ ಆರಂಭಿಸಿದ ನಂತರ, ನಿರ್ದಿಷ್ಟಪಡಿಸಿದ ಬೆಲೆಗೆ ಮ್ಯೂಚುವಲ್ ಫಂಡ್‌ನ ಯುನಿಟ್‌ಗಳನ್ನು ಹೂಡಿಕೆದಾರರು ಖರೀದಿ ಮಾಡಬಹುದು. ಎನ್‌ಎಫ್‌ಒ ಮುಗಿದ ನಂತರ, ಫಂಡ್‌ನಲ್ಲಿ ಹೊಸ ಹೂಡಿಕೆದಾರರು ಹೂಡಿಕೆ ಮಾಡಲು ಸಾಧ್ಯವಿಲ್ಲ. ಆದರೆ, ಹೂಡಿಕೆದಾರರು ಹೂಡಿಕೆ ಮಾಡುವುದಕ್ಕಾಗಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮ್ಯೂಚುವಲ್ ಫಂಡ್‌ ಅನ್ನು ಎಎಂಸಿ ಲಿಸ್ಟ್ ಮಾಡಬಹುದು. 

ಹೂಡಿಕೆದಾರರಾಗಿ, ಪಕ್ವತೆಯವರೆಗೆ ಹೂಡಿಕೆಯನ್ನು ಇಟ್ಟುಕೊಳ್ಳಲು ನೀವು ಆಯ್ಕೆ ಮಾಡಬಹುದು. ಫಂಡ್ ದ್ರವೀಕರಣಗೊಂಡಾಗ, ಎನ್‌ಎವಿ ಪ್ರಕಾರ ನಿಮಗೆ ಪಾವತಿ ಮಾಡಲಾಗುತ್ತದೆ.  ಪರ್ಯಾಯವಾಗಿ, ನಿಮಗೆ ಹಣಕಾಸಿನ ತುರ್ತು ಅಗತ್ಯವಿದ್ದರೆ, ಸ್ಕೀಮ್ ಮಾಹಿತಿ ದಾಖಲೆಯ ಪ್ರಕಾರ ಸೆಕೆಂಡರಿ ಮಾರ್ಕೆಟ್‌ನಲ್ಲಿ ನಿಮ್ಮ ಯುನಿಟ್‌ಗಳನ್ನು ಮಾರಾಟ ಮಾಡಬಹುದು. ಔಟ್‌ಫ್ಲೋಗಳ ಹೆದರಿಕೆ ಇಲ್ಲದೇ ಫಂಡ್‌ಗಳನ್ನು ನಿಯೋಜಿಸುವ ಅನುಕೂಲವನ್ನು ಕ್ಲೋಸ್ ಎಂಡೆಡ್‌ ಫಂಡ್‌ಗಳು ಫಂಡ್ ಮ್ಯಾನೇಜರ್‌ಗಳಿಗೆ ನೀಡುತ್ತವೆ.

3)    ಅವುಗಳ ಅನುಕೂಲಗಳೇನು? 

ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳ ಪ್ರಯೋಜನಗಳು

ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ನೀವು ನಿರ್ಧಾರ ಮಾಡಿದರೆ, ನೀವು ತಿಳಿದುಕೊಳ್ಳಬೇಕಿರುವ ಅನುಕೂಲಗಳು ಇಲ್ಲಿವೆ:

1.  ದ್ರವ್ಯತೆ 
ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳು ದ್ರವ್ಯವಾಗಿವೆ. ಏಕೆಂದರೆ, ನೀವು ಕೆಲಸದ ದಿನದಲ್ಲಿ ಯಾವುದೇ ದಿನವೂ ಕೂಡ ಯುನಿಟ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ನಿಮ್ಮ ಹೂಡಿಕೆಯನ್ನು ನೀವು ಯಾವಾಗ ದ್ರವೀಕರಿಸಬಹುದು ಎಂಬುದಕ್ಕೆ ಯಾವುದೇ ನಿರ್ಬಂಧಗಳು ಇಲ್ಲ. 

2.  ಪಾರದರ್ಶಕತೆ 
ಓಪನ್ ಎಂಡೆಂಡ್ ಮ್ಯೂಚುವಲ್ ಫಂಡ್‌ಗಳು ತಮ್ಮ ದಾಖಲೆಗಳಲ್ಲಿ ಪಾರದರ್ಶಕವಾಗಿರುತ್ತವೆ. ಯಾವ ಸೆಕ್ಯುರಿಟಿಗಳಲ್ಲಿ ಅವು ಹೂಡಿಕೆ ಮಾಡಿವೆ, ಅವುಗಳ ಹಿಂದಿನ ಇತಿಹಾಸ ಏನು ಮತ್ತು ಫಂಡ್ ಮ್ಯಾನೇಜರ್‌ಗಳ ಕಾರ್ಯನಿರ್ವಹಣೆ ಹೇಗಿದೆ ಹಾಗೂ ಇತರ ಸಂಗತಿಗಳನ್ನು ನೀವು ನೋಡಬಹುದು. ಇದರಿಂದ ಹೂಡಿಕೆ ನಿರ್ಧಾರ ಮಾಡುವುದು ನಿಮಗೆ ತುಂಬಾ ಸುಲಭವಾಗುತ್ತದೆ. ಆದರೆ, ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದ ಕಾರ್ಯಕ್ಷಮತೆಗೆ ಯಾವುದೇ ಗ್ಯಾರಂಟಿ ನೀಡುವುದಿಲ್ಲವಾದ್ದರಿಂದ, ನಿಮ್ಮ ಹೂಡಿಕೆಯನ್ನು ನಿಯತವಾಗಿ ಪರಿಶೀಲಿಸುವುದು ಮತ್ತು ಟ್ರ್ಯಾಕ್‌ ಮಾಡುವುದು ಅತ್ಯಂತ ಮುಖ್ಯವಾಗಿದೆ..

3.  ಸಿಸ್ಟಮ್ಯಾಟಿಕ್ ಆಯ್ಕೆಗಳು 
ಒಟ್ಟಾರೆ ಮೊತ್ತ, ಎಸ್‌ಐಪಿ ಅಥವಾ ಎಸ್‌ಟಿಪಿ ಮೂಲಕ ಓಪನ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು. ನಿಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿ ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಈ ಆಯ್ಕೆಗಳು ಅನುಕೂಲ ಮಾಡಿಕೊಡುತ್ತವೆ. 

4. ವೃತ್ತಿಪರ ನಿರ್ವಹಣೆ 
ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಣೆ ಮಾಡುತ್ತಾರೆ. ಇದರಿಂದಾಗಿ, ತಮ್ಮ ಪೋರ್ಟ್‌ಫೋಲಿಯೋವನ್ನು ಸಕ್ರಿಯವಾಗಿ ನಿರ್ವಹಣೆ ಮಾಡದವರಿಗೆ ಇದು ಸೂಕ್ತವಾಗಿರುತ್ತದೆ. ಮಾರುಕಟ್ಟೆ ಸನ್ನಿವೇಶ, ಸಂಶೋಧನೆ ಮತ್ತು ಸ್ಕೀಮ್ ಆಫರ್ ದಾಖಲೆಯನ್ನು ಆಧರಿಸಿ ಹೂಡಿಕೆ ನಿರ್ಧಾರಗಳನ್ನು ಫಂಡ್ ಮ್ಯಾನೇಜರ್‌ಗಳು ಮಾಡುತ್ತಾರೆ. ಇದರಿಂದ ಎಲ್ಲ ಸಮಯದಲ್ಲೂ ಮಾರುಕಟ್ಟೆಯ ಮೇಲ್ವಿಚಾರಣೆ ಮಾಡುವ ಸಂಕಷ್ಟ ನಿಮಗೆ ತಪ್ಪುತ್ತದೆ. 

ಕ್ಲೋಸ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳ ಪ್ರಯೋಜನಗಳು

ಸುಲಭ ಲಿಕ್ವಿಡಿಟಿ, ಪಾರದರ್ಶಕತೆ ಮತ್ತು ಹೂಡಿಕೆಯ ಫ್ಲೆಕ್ಸಿಬಿಲಿಟಿಯಂತಹ ಅನುಕೂಲಗಳನ್ನು ಓಪನ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಒದಗಿಸುತ್ತವೆಯಾದರೂ, ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಅನುಕೂಲಗಳನ್ನೂ ಹೊಂದಿವೆ.

1. ಸ್ಥಿರತೆ
ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಹೆಚ್ಚು ಸ್ಥಿರ ಎಂದು ಪರಿಗಣಿಸಲ್ಪಟ್ಟಿವೆ. ಏಕೆಂದರೆ, ಅವುಗಳನ್ನು ಎನ್‌ಎಫ್‌ಒ ಕೊನೆಯಾದಾಗ ಲಿಕ್ವಿಡೇಟ್ ಮಾಡಬಹುದಾಗಿದೆ. ಈ ವೈಶಿಷ್ಟ್ಯವು ಫಂಡ್‌ ಮ್ಯಾನೇಜರ್‌ಗಳಿಗೆ ಸ್ಥಿರವಾದ ಅಸೆಟ್ ಬೇಸ್ ನೀಡುತ್ತದೆ. ಹೀಗಾಗಿ, ಸರಿಯಾದ ಹೂಡಿಕೆ ಕಾರ್ಯತಂತ್ರವನ್ನು ರೂಪಿಸಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ. ಪಕ್ವತೆಯವರೆಗೆ ಕನಿಷ್ಠ ರಿಡೆಂಪ್ಷನ್‌ಗಳನ್ನು ಮಾಡುವುದಿಲ್ಲ ಅಥವಾ ರಿಡೆಂಪ್ಷನ್‌ಗಳನ್ನು ಮಾಡುವುದೇ ಇಲ್ಲವಾದ್ದರಿಂದ ಲಿಕ್ವಿಡಿಟಿ ನಿರ್ವಹಣೆ ಮಾಡುವುದು ಕೂಡಾ ತುಂಬಾ ಸುಲಭವಾಗಿರುತ್ತದೆ.

2. ದೊಡ್ಡ ಮೊತ್ತ ಹರಿವಿನಿಂದ ರಕ್ಷಣೆ 
ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಹೊಂದಿರುವ ಇನ್ನೊಂದು ಅನುಕೂಲವೆಂದರೆ, ಫಂಡ್‌ನ ಮೌಲ್ಯದಲ್ಲಿ ಗಮನಾರ್ಹ ವ್ಯತ್ಯಯಗಳು ಇರುವುದಿಲ್ಲ. ಏಕೆಂದರೆ, ಲಾಕ್ ಇನ್ ಅವಧಿಯಲ್ಲಿ ಯಾವುದೇ ಒಳಹರಿವು ಅಥವಾ ಹೊರಹರಿವು ಇರುವುದಿಲ್ಲ.  ಇದನ್ನು ಧನಾತ್ಮಕ ದೃಷ್ಟಿಕೋನದಲ್ಲಿ ನೋಡುವುದಾದರೆ, ಕನಿಷ್ಠ ರಿಡೆಂಪ್ಷನ್ ಒತ್ತಡ ಇರುವುದರಿಂದಾಗಿ ಎಫ್‌ಎಂ ತನ್ನ ಹೂಡಿಕೆ ಕಾರ್ಯತಂತ್ರವನ್ನು ಸುಸ್ಥಿರವಾಗಿರಿಸಿಕೊಳ್ಳಬಹುದು.

3. ವೃತ್ತಿಪರ ನಿರ್ವಹಣೆ
ಕ್ಲೋಸ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳನ್ನು ಕೂಡಾ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ. ಲಾಕ್ ಇನ್ ಅವಧಿ ಇರುವುದರಿಂದ, ಲಿಕ್ವಿಡಿಟಿ ನಿರ್ವಹಣೆ ಮಾಡುವುದರ ಬದಲಿಗೆ ಫಂಡ್‌ನ ಪರ್ಫಾರ್ಮೆನ್ಸ್‌ ಹೆಚ್ಚಳ ಮಾಡುವುದಕ್ಕೆ ಫಂಡ್ ಮ್ಯಾನೇಜರ್‌ಗಳು ಹೂಡಿಕೆ ತಂತ್ರವನ್ನು ನಿರ್ವಹಿಸಬಹುದು. ವಿಷಯ ಮತ್ತು ವಿವರಣೆಯ ಮಧ್ಯೆ ವ್ಯತ್ಯಾಸ.

ಓಪನ್ ಎಂಡೆಡ್‌ ಮತ್ತು ಕ್ಲೋಸ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳ ಪೈಕಿ ಆಯ್ಕೆ ಮಾಡುವುದು ಹೇಗೆ? 

ಓಪನ್ ಎಂಡೆಡ್ ಮತ್ತು ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡುವಾಗ ಹಲವು ಅಂಶಗಳನ್ನು ನೀವು ಪರಿಗಣಿಸಬೇಕಿದೆ: 

1. ಲಿಕ್ವಿಡಿಟಿ
ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಲಿಕ್ವಿಡ್ ಆಗಿವೆ. ಏಕೆಂದರೆ, ನೀವು ಬಯಸಿದ ಯಾವುದೇ ಸಮಯದಲ್ಲಿ ಯುನಿಟ್‌ಗಳನ್ನು ಖರೀದಿ ಮಾಡಬಹುದು ಅಥವಾ ಮಾರಾಟ ಮಾಡಬಹುದು. ಕ್ಲೋಸ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳನ್ನು ಎಕ್ಸ್‌ಚೇಂಜ್‌ನಲ್ಲಿ ಮಾರಾಟ ಮಾಡಬಹುದು. ಆದರೆ, ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಷ್ಟು ಲಿಕ್ವಿಡಿಟಿಯನ್ನು ಇದು ಹೊಂದಿಲ್ಲದಿರಬಹುದು. 

2.  ಶುಲ್ಕಗಳು 
ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳ ಬೆಲೆ ಹೆಚ್ಚಿರಬಹುದು ಮತ್ತು ಅಧಿಕ ಶುಲ್ಕವನ್ನು ಹೊಂದಿರಬಹುದು. ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಸಾಮಾನ್ಯವಾಗಿ ಕಡಿಮೆ ಫೀ ಹೊಂದಿರುತ್ತವೆ. ಇದು ನಿಮಗೆ ಪ್ರಮುಖ ಅಂಶವಾಗಿದ್ದರೆ, ಹೂಡಿಕೆ ಮಾಡುವುದಕ್ಕೂ ಮೊದಲು ಶುಲ್ಕವನ್ನು ಹೋಲಿಸಿ ನೋಡಿಕೊಳ್ಳಿ. 

3. ಹೂಡಿಕೆ ವ್ಯಾಪ್ತಿ 
ಓಪನ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ವ್ಯಾಪ್ತಿಯು ಹೂಡಿಕೆದಾರರ ಆದ್ಯತೆ ಮತ್ತು ಹಣಕಾಸಿನ ಗುರಿಗಳನ್ನು ಅವಲಂಬಿಸಿರುತ್ತದೆ. ಕ್ಲೋಸ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳು ನಿರ್ದಿಷ್ಟ ಗುರಿಗಳನ್ನು ಹೊಂದಿರುವ ಮತ್ತು ಅಲ್ಪಾವಧಿಯಲ್ಲಿ ಮಾರಾಟ ಮಾಡಬಯಸುವ ಹೂಡಿಕೆದಾರರಿಗೆ ಹೊಂದುತ್ತವೆ.

4. ಫ್ಲೆಕ್ಸಿಬಿಲಿಟಿ (ಹೊಂದಿಕೊಳ್ಳುವಿಕೆ) 
ಒಟ್ಟಾರೆ ಹೂಡಿಕೆ ಅಥವಾ ಎಸ್‌ಐಪಿ ಮೂಲಕ ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು. ಆದರೆ, ಕ್ಲೋಸ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳು ಸೀಮಿತ ಹೂಡಿಕೆ ಅವಧಿಯನ್ನು ಹೊಂದಿರುವುದರಿಂದ, ಎಸ್‌ಐಪಿಗಳ ಮೂಲಕ ಇದರಲ್ಲಿ ನೀವು ಹೂಡಿಕೆ ಮಾಡಲಾಗದು. ಕೇವಲ ಒಂದು ಬಾರಿಯ ಹೂಡಿಕೆಯನ್ನು ಮಾತ್ರ ಮಾಡಬಹುದಾಗಿದೆ. 

ಹೀಗಾಗಿ, ಹೂಡಿಕೆಯಲ್ಲಿ ಹೆಚ್ಚು ಫ್ಲೆಕ್ಸಿಬಿಲಿಟಿ ನಿಮಗೆ ಬೇಕಾಗಿದ್ದಲ್ಲಿ, ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳಿಗಿಂತ ಹೆಚ್ಚು ಲಿಕ್ವಿಡಿಟಿಯು ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಎಂದಿನಂತೆ, ಯಾವುದೇ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ನೀವು ನಿಮ್ಮ ಹೂಡಿಕೆಯನ್ನು ಮಾಡಿದ್ದೀರಿ, ನಿಮ್ಮ ಹೂಡಿಕೆ ಉದ್ದೇಶಗಳನ್ನು ಮತ್ತು ರಿಸ್ಕ್‌ ಪ್ರೊಫೈಲ್‌ ಅನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಸ್ಕೀಮ್‌ನ ರಿಸ್ಕೋ ಮೀಟರ್ ಅನ್ನು ನೋಡಿ. ಇದು ನಿಮಗೆ ಮಾರ್ಕೆಟ್‌ನಲ್ಲಿನ ಇತರ ಸ್ಕೀಮ್‌ಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ ಹೂಡಿಕೆ ಎಷ್ಟು ರಿಸ್ಕ್‌ ಹೊಂದಿದೆ ಎಂಬುದನ್ನು ಹೇಳುತ್ತದೆ. ಬೆಂಚ್‌ಮಾರ್ಕ್ ರಿಸ್ಕೋಮೀಟರ್ ಅನ್ನು ಪರಿಶೀಲಿಸುವುದು ಮತ್ತು ನೀವು ಪರಿಗಣಿಸಿರುವ ಹೂಡಿಕೆಯ ಜೊತೆಗೆ ಹೋಲಿಕೆ ಮಾಡುವುದು ಕೂಡ ಸಹಾಯಕವಾಗಿರಬಹುದು. ಇದು ಹೆಚ್ಚು ಮಾಹಿತಿಯುಕ್ತ ನಿರ್ಧಾರವನ್ನು ಮಾಡಲು ಸಹಾಯ ಮಾಡಬಹುದು. 

ನೀವು ಓಪನ್ ಎಂಡೆಡ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲಿ ಅಥವಾ ಕ್ಲೋಸ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಿ, ಸ್ಕೀಮ್‌ಗೆ ಸಂಬಂಧಿಸಿದ ಎಲ್ಲ ಆಫರ್ ದಾಖಲೆಗಳನ್ನು ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಯಾವುದೇ ಸ್ಪಷ್ಟನೆಗಳು ಅಗತ್ಯವಿದ್ದರೆ ನಿಮ್ಮ ಹಣಕಾಸು ಸಲಹೆಗಾರರ ಸಲಹೆ ಪಡೆಯಿರಿ.  

ಹಕ್ಕು ನಿರಾಕರಣೆ

ಮ್ಯೂಚುವಲ್ ಫಂಡ್ ಯೋಜನೆಗಳ ವಿವಿಧ ವರ್ಗಗಳ ಬಗ್ಗೆ ಎಎಂಎಫ್ಐ (AMFI) ವೆಬ್ ಸೈಟ್ ನಲ್ಲಿ ಪ್ರಸಾರವಾದ ಮಾಹಿತಿಯು ಮ್ಯೂಚುವಲ್ ಫಂಡ್ ಗಳ ಬಗ್ಗೆ ಜಾಗೃತಿ ಮೂಡಿಸಲು ಹಣಕಾಸು ಉತ್ಪನ್ನ ವರ್ಗವಾಗಿ ಜಾಗೃತಿ ಮೂಡಿಸಲು ಹೊರತು ಮಾರಾಟ ಪ್ರಚಾರ ಅಥವಾ ವ್ಯವಹಾರದ ಕೋರಿಕೆಗಾಗಿ ಅಲ್ಲ. 

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಆಂತರಿಕ ಮೂಲಗಳು ಮತ್ತು ವಿಶ್ವಾಸಾರ್ಹವೆಂದು ನಂಬಲಾದ ಇತರ ಮೂರನೇ ಪಕ್ಷದ ಮೂಲಗಳ ಆಧಾರದ ಮೇಲೆ ಎಎಂಎಫ್ಐ ನಲ್ಲಿನ ವಿಷಯವನ್ನು ಸಿದ್ಧಪಡಿಸಿದೆ. ಆದಾಗ್ಯೂ, ಅಂತಹ ಮಾಹಿತಿಯ ನಿಖರತೆಯನ್ನು ಎಎಂಎಫ್ಐ ಖಾತರಿಪಡಿಸುವುದಿಲ್ಲ, ಅದರ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಂತಹ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಖಾತರಿಪಡಿಸುವುದಿಲ್ಲ. 

ಇಲ್ಲಿರುವ ವಿಷಯವು ವೈಯಕ್ತಿಕ ಹೂಡಿಕೆದಾರರ ಉದ್ದೇಶಗಳು, ಅಪಾಯದ ಸಾಧ್ಯತೆ ಅಥವಾ ಹಣಕಾಸಿನ ಅಗತ್ಯಗಳು ಅಥವಾ ಸಂದರ್ಭಗಳು ಅಥವಾ ಇಲ್ಲಿ ವಿವರಿಸಿದ ಮ್ಯೂಚುವಲ್ ಫಂಡ್ ಉತ್ಪನ್ನಗಳ ಸೂಕ್ತತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಹೂಡಿಕೆದಾರರು ಈ ನಿಟ್ಟಿನಲ್ಲಿ ಹೂಡಿಕೆ ಸಲಹೆಗಾಗಿ ತಮ್ಮ ವೃತ್ತಿಪರ ಹೂಡಿಕೆ ಸಲಹೆಗಾರ/ ಸಮಾಲೋಚಕ/ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ಮ್ಯೂಚುವಲ್ ಫಂಡ್ ಯೋಜನೆಯು ಠೇವಣಿ ಉತ್ಪನ್ನವಲ್ಲ ಮತ್ತು ಇದು ಮ್ಯೂಚುವಲ್ ಫಂಡ್ ಅಥವಾ ಅದರ ಎಎಂಸಿ (AMC) ಯಿಂದ ಬಾಧ್ಯತೆ ಅಥವಾ ಖಾತರಿ ಅಥವಾ ವಿಮೆಯಾಗಿಲ್ಲ. ಅಂತರ್ಗತ ಹೂಡಿಕೆಗಳ ಸ್ವರೂಪದಿಂದಾಗಿ, ಮ್ಯೂಚುವಲ್ ಫಂಡ್ ಉತ್ಪನ್ನದ ಆದಾಯ ಅಥವಾ ಸಂಭಾವ್ಯ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ. ಐತಿಹಾಸಿಕ ಕಾರ್ಯಕ್ಷಮತೆಯನ್ನು ಪ್ರಸ್ತುತಪಡಿಸಿದಾಗ, ಸಂಪೂರ್ಣವಾಗಿ ಉಲ್ಲೇಖ ಉದ್ದೇಶಗಳಿಗಾಗಿ ಮತ್ತು ಭವಿಷ್ಯದ ಫಲಿತಾಂಶಗಳ ಖಾತರಿಯಲ್ಲ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

285
ನಾನು ಹೂಡಿಕೆ ಮಾಡಲು ಸಿದ್ಧ