ಓವರ್ನೈಟ್ಫಂಡ್ಗಳು ಎಂದರೆ ಯಾವುದು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಓವರ್ನೈಟ್ಫಂಡ್ಗಳನ್ನು ಎಲ್ಲ ಮ್ಯೂಚುವಲ್ಫಂಡ್ಗಳ ಪೈಕಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ನೀವು ಮ್ಯೂಚುವಲ್ಫಂಡ್ಸ್ಗೆ ಹೊಸಬರಾಗಿದ್ದರೆ, ಅದಕ್ಕೆ ಪೂರ್ತಿಯಾಗಿ ಇಳಿಯುವುದಕ್ಕೂ ಮೊದಲು ಪ್ರಯೋಗ ಮಾಡಬೇಕು ಎಂದಾದರೆ, ಓವರ್ನೈಟ್ಫಂಡ್ಗಳು ನಿಮಗೆ ಸೂಕ್ತ. 

ಓವರ್ನೈಟ್ಫಂಡ್ಗಳು ಓಪನ್ಎಂಡೆಡ್ಡೆಟ್ ಸ್ಕೀಮ್ನ ವಿಧವಾಗಿದೆ. ಇದು ಮರುದಿನ ಪಕ್ವವಾಗುವ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಅಂದರೆ, ಪೋರ್ಟ್ಫೋಲಿಯೋದಲ್ಲಿನ ಸೆಕ್ಯುರಿಟಿಗಳು ಪ್ರತಿ ದಿನ ಮೆಚ್ಯೂರ್ ಆಗುತ್ತವೆ ಮತ್ತು ಮರುದಿನವೇ ಪಕ್ವವಾಗುವ ಪೋರ್ಟ್ಫೋಲಿಯೋಗೆ ಹೊಸ ಸೆಕ್ಯುರಿಟಿಗಳನ್ನು ಫಂಡ್ ಮ್ಯಾನೇಜರ್ ಖರಿದಿ ಮಾಡುತ್ತಾರೆ. ಈ ಫಂಡ್ಗಳಲ್ಲಿನ ಸೆಕ್ಯುರಿಟಿಗಳು ಮರುದಿನವೇ ಪಕ್ವವಾಗುವುದರಿಂದ, ಇತರ ಡೆಟ್ ಫಂಡ್ಗಳಲ್ಲಿರುವಂತೆ ಬಡ್ಡಿ ದರ ರಿಸ್ಕ್ ಅಥವಾ ಡೀಫಾಲ್ಟ್ರಿಸ್ಕ್ಗೆ ಈ ಫಂಡ್ಗಳು ತೆರೆದುಕೊಳ್ಳುವುದಿಲ್ಲ. ಈ ಪ್ರೊಫೈಲ್ಕಡಿಮೆ ರಿಸ್ಕ್ ಹೊಂದಿದ್ದು, ಕಡಿಮೆ ರಿಟರ್ನ್ಅನ್ನೂ ನೀಡುತ್ತವೆ.

ದೊಡ್ಡ ಮೊತ್ತವನ್ನ ಬೇರೊಂದು ಕಡೆಗೆ ಹಾಕುವುದಕ್ಕೂ ಮೊದಲು ಅಲ್ಪಕಾಲದವರೆಗೆ ಇಟ್ಟುಕೊಳ್ಳುವ ಅಗತ್ಯ ಇರುವ ಬ್ಯುಸಿನೆಸ್ಮೆನ್ ಅಥವಾ ಉದ್ಯಮಿಗಳಿಗೆ ಓವರ್ನೈಟ್ಫಂಡ್ಗಳು ಸೂಕ್ತವಾಗಿವೆ. ಚಾಲ್ತಿ ಬ್ಯಾಂಕ್ಖಾತೆಯನ್ನು ಹಾಗೆಯೇ ಬಿಡುವುದರ ಬದಲು ಹೆಚ್ಚುವರಿ ಹಣವನ್ನು ಓವರ್ನೈಟ್ಫಂಡ್ನಲ್ಲಿ ಸ್ವಲ್ಪ ದಿನದ ಮಟ್ಟಿಗಾದರೂ ಹೂಡಿಕೆ ಮಾಡಿ, ಸ್ವಲ್ಪ ರಿಟರ್ನ್ಗಳಿಸುವುದು ಉತ್ತಮ.  ತುರ್ತು ಅಗತ್ಯಕ್ಕೆ ಒಂದಷ್ಟು ಹಣವನ್ನು ತೆಗೆದಿಡಲು ನೀವು ಬಯಸಿದರೆ, ತುರ್ತು ನಿಧಿಯನ್ನು ರೂಪಿಸಲು ಕೂಡಾ ಇದು ಸೂಕ್ತ. ಕೈಗೆ ಸುಲಭವಾಗಿ ಸಿಗುವಂತಿದ್ದರೂ ನಿಮ್ಮ ಹೂಡಿಕೆಗೆ ರಿಟರ್ನ್ಸ್ಸಿಗುತ್ತಿರುತ್ತದೆ. ಯಾಕೆಂದರೆ, ಈ ಫಂಡ್ಗಳು ಅತ್ಯಧಿಕ ಲಿಕ್ವಿಡಿಟಿಯನ್ನು ಒದಗಿಸುತ್ತವೆ.

436
ನಾನು ಹೂಡಿಕೆ ಮಾಡಲು ಸಿದ್ಧ