ಮ್ಯೂಚುವಲ್‌ ಫಂಡ್‌ ಕಂಪನಿಯು ಮುಚ್ಚಿದಾಗ / ಮಾರಾಟವಾದಾಗ ಏನಾಗುತ್ತದೆ?

ಮ್ಯೂಚುವಲ್‌ ಫಂಡ್‌ ಕಂಪನಿಯು   ಮುಚ್ಚಿದಾಗ / ಮಾರಾಟವಾದಾಗ ಏನಾಗುತ್ತದೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಕಂಪನಿಯು ಮುಚ್ಚಿದಾಗ ಅಥವಾ ಮಾರಾಟವಾದಾಗ ಯಾವುದೇ ಪ್ರಸ್ತುತ ಹೂಡಿಕೆದಾರರು ಗಮನಿಸಬೇಕಾದ ಗಂಭೀರ ಅಂಶವಾಗಿದೆ. ಮ್ಯೂಚುವಲ್‌ ಫಂಡ್‌ಗಳನ್ನು ಸೆಬಿ ನಿಯಂತ್ರಿಸುತ್ತಿರುವುದರಿಂದ ಇಂತಹವುಗಳು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್‌ ಕಂಪನಿಯು  ಮುಚ್ಚುತ್ತಿದ್ದರೆ, ಫಂಡ್‌ನ ಟ್ರಸ್ಟಿಗಳು ಮುಚ್ಚಲು ಅನುಮತಿಗಾಗಿ ಸೆಬಿಯನ್ನು ಸಂಪರ್ಕಿಸಬೇಕು ಅಥವಾ ಸೆಬಿಯೇ ಮುಚ್ಚುವಂತೆ ಫಂಡ್‌ಗೆ ನಿರ್ದೇಶಿಸುತ್ತದೆ. ಇಂತಹ ಪ್ರಕರಣಗಳಲ್ಲಿ, ಮುಚ್ಚುವುದಕ್ಕೂ ಮುನ್ನ ಕೊನೆಯದಾಗಿ ಲಭ್ಯವಿರುವ ನಿವ್ವಳ ಸ್ವತ್ತುಮೌಲ್ಯವನ್ನು ಆಧರಿಸಿ ಎಲ್ಲ ಹೂಡಿಕೆದಾರರಿಗೆ ಅವರ ಹೂಡಿಕೆಯನ್ನು ವಾಪಸುಮಾಡಬೇಕು.

ಇನ್ನೊಂದು ಫಂಡ್‌ ಹೌಸ್‌ ಈ ಮ್ಯೂಚುವಲ್‌ ಫಂಡ್‌ ಅನ್ನುಖರೀದಿಮಾಡಿದರೆ, ಸಾಮಾನ್ಯವಾಗಿ ಎರಡು ಆಯ್ಕೆಗಳು ಇರುತ್ತವೆ. ಒಂದನೆಯದೆಂದರೆ, ನಿರ್ವಹಣೆ ಮಾಡುತ್ತಿರುವ ಹೊಸ ಫಂಡ್‌ ಹೌಸ್‌ ಯಾವುದೇ ಆಗಿದ್ದರೂ ಸ್ಕೀಮ್‌ಗಳು ಮೂಲ ಮಾದರಿಯಲ್ಲೇ ಮುಂದುವರಿಯುತ್ತವೆ. ಅಥವಾ ಖರೀದಿ ಮಾಡಿದ ಸ್ಕೀಮ್‌ಗಳನ್ನು ಹೊಸ ಫಂಡ್‌ ಹೌಸ್‌ನ ಸ್ಕೀಮ್‌ಗಳಲ್ಲಿ ವಿಲೀನ ಮಾಡಲಾಗುತ್ತದೆ. ಸ್ಕೀಮ್‌ ಮಟ್ಟದ ವಿಲೀನವೂ ಸೇರಿದಂತೆ ಎಲ್ಲ ವಿಲೀನ ಮತ್ತು ಸ್ವಾಧೀನಗಳಿಗೂ  ಅಸೆಟ್ಮ್ಯಾನೇಜ್‌ಮೆಂಟ್ಕಂಪನಿಗೂ (ಎಎಂಸಿ) ಸೆಬಿ ಅನುಮತಿ ಅಗತ್ಯವಿದೆ.

ಇಂತಹ ಎಲ್ಲ ಪ್ರಕರಣಗಳಲ್ಲೂ, ಹೂಡಿಕೆದಾರರಿಗೆ ಯಾವುದೇ ಲೋಡ್ಅನ್ನು ವಿಧಿಸದೇ ಸ್ಕೀಮ್‌ನಿಂದ ಹೊರಹೋಗುವ ಆಯ್ಕೆಯನ್ನು ನೀಡಲಾಗುತ್ತದೆ. ಹೂಡಿಕೆದಾರರು ಅಥವಾ ಫಂಡ್‌ ಹೌಸ್‌ನಿಂದ ಯಾವುದೇ ಕ್ರಮವೂ ಎಂದಿಗೂ ಆಗಿನ ನಿವ್ವಳ ಸ್ವತ್ತುಮೌಲ್ಯವನ್ನು ಆಧರಿಸಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ