ಹೈಬ್ರಿಡ್ ಫಂಡ್‌ ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಾವು ಊಟದ ಬಗ್ಗೆ ಮಾಡುವ ಆಯ್ಕೆಯು ನಮ್ಮ ಬಳಿ ಇರುವ ಸಮಯ, ಸನ್ನಿವೇಶ ಮತ್ತು ನಮ್ಮ ಮನಸ್ಥಿತಿಯನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ನಾವು ಅವಸರದಲ್ಲಿದ್ದರೆ, ಅಂದರೆ ಕಚೇರಿ ಸಮಯದಲ್ಲಿ ಊಟ ಅಥವಾ ಬಸ್‌/ರೈಲು ಹತ್ತುವುದಕ್ಕೂ ಮೊದಲು ಆಹಾರ ಸೇವನೆ ಮಾಡುವುದಾದರೆ ನಾವು ಕಾಂಬೋ ಮೀಲ್‌ ಅನ್ನು ಪಡೆಯಬಹುದು. ಅಥವಾ ಕಾಂಬೋ ಮೀಲ್‌ ಜನಪ್ರಿಯ ಎಂದು ನಮಗೆ ತಿಳಿದಿದ್ದರೆ ಮೆನು ನೋಡಲು ಹೋಗುವುದೇ ಇಲ್ಲ. ಐಷಾರಾಮಿ ಊಟ ಎಂದರೆ ಮೆನುವಿನಲ್ಲಿ ಪ್ರತಿ ಐಟಂಗಳನ್ನು ಪ್ರತ್ಯೇಕವಾಗಿ ನಮಗೆ ಬೇಕಾದಷ್ಟು ಆರ್ಡರ್ ಮಾಡುವುದಾಗಿದೆ.

ಇದೇ ರೀತಿ, ಮ್ಯೂಚುವಲ್‌ ಫಂಡ್‌ನಲ್ಲಿ ಒಬ್ಬ ಹೂಡಿಕೆದಾರರು ವಿವಿಧ ಸ್ಕೀಮ್‌ಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಬಹುದು ಮತ್ತು ಹೂಡಿಕೆ ಮಾಡಬಹುದು. ಉದಾಹರಣೆಗೆ ಈಕ್ವಿಟಿ ಫಂಡ್‌, ಡೆಟ್ ಫಂಡ್‌, ಗೋಲ್ಡ್ ಫಂಡ್‌, ಲಿಕ್ವಿಡ್ ಫಂಡ್‌ ಇತ್ಯಾದಿ. ಇದೇ ಸಮಯದಲ್ಲಿ, ಕಾಂಬೋ ಮೀಲ್‌ ರೀತಿಯ ಸ್ಕೀಮ್‌ಗಳೂ ಇವೆ. ಇದನ್ನು ಹೈಬ್ರಿಡ್ ಸ್ಕೀಮ್‌ಗಳು ಎಂದು ಕರೆಯಲಾಗುತ್ತದೆ. ಈ ಹೈಬ್ರಿಡ್‌ ಸ್ಕೀಮ್‌ಗಳನ್ನು ಬ್ಯಾಲೆನ್ಸ್‌ಡ್‌ ಫಂಡ್‌ಗಳು ಎಂದು ಕರೆಯಲಾಗುತ್ತದೆ. ಎರಡು ಅಥವಾ ಹೆಚ್ಚು ಅಸೆಟ್‌ ವಿಭಾಗಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಿಂದಾಗಿ ಎರಡರ ಲಾಭವನ್ನೂ ಹೂಡಿಕೆದಾರರು ಪಡೆಯಬಹುದು. ಭಾರತದ ಮ್ಯೂಚುವಲ್‌ ಫಂಡ್‌ ಉದ್ಯಮದಲ್ಲಿ ವಿವಿಧ ರೀತಿಯ ಹೈಬ್ರಿಡ್‌ ಫಂಡ್‌ಗಳಿವೆ. ಎರಡು ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಸ್ಕೀಮ್‌ಗಳಿವೆ. ಉದಾ., ಈಕ್ವಿಟಿ ಮತ್ತು ಡೆಟ್ ಅಥವಾ ಡೆಟ್ ಮತ್ತು ಗೋಲ್ಡ್‌. ಈಕ್ವಿಟಿ, ಡೆಟ್ ಮತ್ತು ಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಸ್ಕೀಮ್‌ಗಳೂ ಇವೆ. ಆದಾಗ್ಯೂ, ಬಹುತೇಕ ಜನಪ್ರಿಯ ಹೈಬ್ರಿಡ್‌ ಸ್ಕೀಮ್‌ಗಳು ಈಕ್ವಿಟಿ ಮತ್ತು ಡೆಟ್ ಅಸೆಟ್‌ಗಳಲ್ಲಿ ಹೂಡಿಕೆ ಮಾಡುತ್ತವೆ,

ವಿಭಿನ್ನ ವಿಧದ ಹೈಬ್ರಿಡ್‌ ಫಂಡ್‌ಗಳು ವಿಭಿನ್ನ ಸ್ವತ್ತು ನಿಯೋಜನೆ ತಂತ್ರಗಳನ್ನು ಹೊಂದಿರುತ್ತವೆ. ನೀವು ಹೂಡಿಕೆ ಮಾಡುವುದಕ್ಕೂ ಮೊದಲು ನಿಮ್ಮ ಉದ್ದೇಶ ಸ್ಪಷ್ಟವಾಗಿರುವುದನ್ನು ನೋಡಿಕೊಳ್ಳಿ.

435
ನಾನು ಹೂಡಿಕೆ ಮಾಡಲು ಸಿದ್ಧ