ಅಪ್ರಾಪ್ತರಿಂದ ವಯಸ್ಕ ಎಂದು ಹೂಡಿಕೆದಾರರ ಸ್ಥಿತಿಯನ್ನು ಬದಲಿಸುವ ಪ್ರಕ್ರಿಯೆ ಯಾವುದು?

ಅಪ್ರಾಪ್ತರಿಂದ ವಯಸ್ಕ ಎಂದು ಹೂಡಿಕೆದಾರರ ಸ್ಥಿತಿಯನ್ನು ಬದಲಿಸುವ ಪ್ರಕ್ರಿಯೆ ಯಾವುದು? zoom-icon

ಅಪ್ರಾಪ್ತ ವಯಸ್ಕರು ತಮ್ಮ ಪಾಲಕರು/ಪೋಷಕರ ಮೂಲಕ ಮ್ಯೂಚುವಲ್‌ಫಂಡ್ಸ್ ಅನ್ನು ಹೂಡಿಕೆ ಮಾಡಬಹುದು. ಈ ಸಂದರ್ಭದಲ್ಲಿ ಅಪ್ರಾಪ್ತರು ಮೊದಲ ಮತ್ತು ಏಕೈಕ ಖಾತೆದಾರರಾಗಿದ್ದಾರೆ ಮತ್ತು ಅವರನ್ನು ನೈಸರ್ಗಿಕ ಪೋಷಕರು (ತಂದೆ/ತಾಯಿ) ಅಥವಾ ಕಾನೂನಾತ್ಮಕ ಪೋಷಕರು (ಕೋರ್ಟ್ ‌ನೇಮಿಸಿದ) ಪ್ರತಿನಿಧಿಸುತ್ತಾರೆ. ನೈಸರ್ಗಿಕ ಪೋಷಕರ ಪ್ರತಿನಿಧಿತ್ವ ಹೊಂದಿರುವವರು 18 ವರ್ಷಗಳಿಗೆ ಪ್ರೌಢರಾಗುತ್ತಾರೆ ಮತ್ತು ಕಾನೂನಾತ್ಮಕ ಪೋಷಕರ ಪ್ರತಿನಿಧಿತ್ವ ಹೊಂದಿರುವವರು 21 ವರ್ಷಗಳಲ್ಲಿ ಪ್ರೌಢರಾಗುತ್ತಾರೆ. 

ಅಪ್ರಾಪ್ತರು ಪ್ರಾಪ್ತ ವಯಸ್ಕರಾದ ನಂತರ, ಅಪ್ರಾಪ್ತರಿಂದ ವಯಸ್ಕ ಖಾತೆಗೆ ಖಾತೆಯ ಸ್ಟೇಟಸ್‌ಅನ್ನು ಬದಲಿಸುವಂತೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ ಖಾತೆಯಲ್ಲಿನ ಎಲ್ಲ ನಂತರದ ವಹಿವಾಟುಗಳನ್ನು (ಎಸ್ಐಪಿ/ಎಸ್‌ಡಬ್ಲ್ಯೂಪಿ/ಎಸ್‌ಟಿಪಿ) ಅಮಾನತುಗೊಳಿಸಲಾಗುತ್ತದೆ. ಸಾಮಾನ್ಯವಾಗಿ, ಮೊದಲೇ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮ್ಯೂಚುವಲ್‌ಫಂಡ್‌ಗಳು ಪೋಷಕರು ಮತ್ತು ಅಪ್ರಾಪ್ತರಿಗೆ ನೋಟಿಸ್ ನೀಡುತ್ತದೆ. ಬ್ಯಾಂಕ್ ಅಧಿಕಾರಿಯ ಸಹಿ ಹಾಗೂ ಅಪ್ರಾಪ್ತರ ಸಹಿ ಹೊಂದಿರುವ ಅರ್ಜಿಯನ್ನು ವಯಸ್ಕರ ಸ್ಥಿತಿಗೆ ಬದಲಿಸುವಂತೆ ಪೋಷಕರು ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಖಾತೆ ನೋಂದಣಿ ನಮೂನೆ ಮತ್ತು ಅಪ್ರಾಪ್ತರ ಕೆವೈಸಿಯನ್ನು ಕೂಡ ಅರ್ಜಿಯ ಜೊತೆಗೆ ಸಲ್ಲಿಸಬೇಕು.

ತೆರಿಗೆ ಬಾಧ್ಯತೆಗಳನ್ನು ಇನ್ನು ಖಾತೆದಾರರೇ (ವಯಸ್ಕರು) ಭರಿಸಬೇಕಾಗುತ್ತದೆ. ಮಗು ಅಪ್ರಾಪ್ತನಾಗಿರುವವರೆಗೂ, ಮಕ್ಕಳ ಖಾತೆಯಿಂದ ಗಳಿಸಿದ ಎಲ್ಲ ಆದಾಯ ಮತ್ತು ಗಳಿಕೆಗಳೂ ಪಾಲಕರು/ಪೋಷಕರ ಆದಾಯಕ್ಕೆ ಒಳಪಟ್ಟಿರುತ್ತದೆ ಮತ್ತು ಅನ್ವಯಿಕ ತೆರಿಗೆಗಳನ್ನು ಪಾಲಕರು/ಪೋಷಕರು ಭರಿಸುತ್ತಾರೆ. ಅಪ್ರಾಪ್ತರು ವಯಸ್ಕರಾದ ವರ್ಷದಲ್ಲಿ, ಅವರನ್ನು ಪ್ರತ್ಯೇಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಆ ವರ್ಷದಲ್ಲಿ ಎಷ್ಟು ತಿಂಗಳುಗಳಿಗೆ ವಯಸ್ಕರಾಗಿದ್ದಾರೆಯೋ ಅಷ್ಟು ತಿಂಗಳುಗಳಿಗೆ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

434

ಮ್ಯೂಚುವಲ್‌ ಫಂಡ್‌ ಸೂಕ್ತವೇ??