ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಆರಂಭಿಸಲು ಸುಲಭವಾದ ವಿಧಾನ ಯಾವುದು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಬ್ಯಾಂಕ್ ಅಕೌಂಟ್ ತೆರೆಯಲು ಆರಂಭದಲ್ಲಿ ಕೆಲವು ಕಾಗದ ಪತ್ರಗಳು ಬೇಕಾಗುತ್ತವೆ. ನಂತರ ನೀವು ಕಿರಿಕಿರಿ ಇಲ್ಲದೇ ಎಲ್ಲ ಸೇವೆಗಳನ್ನೂ ಬಳಸಬಹುದು. ಅದೇ ರೀತಿ, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಯೂ ಇದೇ ಅನುಭವವನ್ನು ನೋಡಬಹುದು. ನಿಮ್ಮ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಆರಂಭಿಸುವ ಪ್ರಮುಖ ಆದ್ಯತೆಯು, ಪರಿಶೀಲನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಕೆವೈಸಿಯನ್ನು ಪೂರೈಸಬೇಕಾಗುತ್ತದೆ. ನಿಮ್ಮ ಕೆವೈಸಿ ಪೂರ್ಣಗೊಳಿಸಿದ ನಂತರ, ಯಾವುದೇ ಸಮಯದಲ್ಲಿ ಯಾವುದೇ ಮೊತ್ತಕ್ಕೆ ಯಾವುದೇ ಮ್ಯೂಚುವಲ್ ಫಂಡ್ನಲ್ಲಿ ನೀವು ಹೂಡಿಕೆ ಮಾಡಬಹುದು. 

ಕೆವೈಸಿಯು ಒಂದು ಬಾರಿಯ ಪ್ರಕ್ರಿಯೆಯಾಗಿದ್ದು, ಮ್ಯೂಚುವಲ್ ಫಂಡ್ಗಳ ಇಡೀ ಜಗತ್ತಿಗೆ ಕೀಲಿ ಇದ್ದಂತೆ. ಇದು ನಿಮ್ಮನ್ನು ಮ್ಯೂಚುವಲ್ ಫಂಡ್ಗಳ ಜಗತ್ತಿಗೆ ತೆರೆಯುತ್ತದೆ ಮತ್ತು ನಿಮ್ಮ ಕೆವೈಸಿ ಅನ್ನು ಪರಿಶೀಲಿಸಿದ ನಂತರ ನಿಮ್ಮ ಮನೆಯಿಂದಲೇ ಎಲ್ಲವನ್ನೂ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸಂಪೂರ್ಣವಾಗಿ ಆನ್ಲೈನ್ನಲ್ಲಿ ಮಾಡಬಹುದಾದ ಇ-ಕೆವೈಸಿ ಅನ್ನೂ ನೀವು ಮಾಡಿಕೊಳ್ಳಬಹುದು. ಆದರೆ, ಪ್ರತಿ ಫಂಡ್ ಹೌಸ್ಗೆ ನಿಮ್ಮ ಹೂಡಿಕೆಯನ್ನು ರೂ. 50,000 ಕ್ಕೆ ಇ-ಕೆವೈಸಿ ಮಿತಿಗೊಳಿಸುತ್ತದೆ. 

ಕೆವೈಸಿ ಪರಿಶೀಲನೆ ಮುಗಿಸಿದ ನಂತರ, ಡಿಸ್ಟ್ರಿಬ್ಯೂಟರ್ ಮೂಲಕ ಅಥವಾ ನೇರವಾಗಿ ಯಾವುದೇ ಮ್ಯೂಚುವಲ್ ಫಂಡ್ನಲ್ಲಿ ನೀವು ಸುಲಭವಾಗಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ನಲ್ಲಿ ರಿಡೆಂಪ್ಷನ್ ವಿನಂತಿಯನ್ನು ಸಲ್ಲಿಸುವ ಮೂಲಕ ಯಾವುದೇ ಸಮಯದಲ್ಲಿ ನೀವು ಹಣವನ್ನು ಹಿಂಪಡೆಯಬಹುದು ಮತ್ತು 3-4 ಕೆಲಸ ದಿನಗಳಲ್ಲಿ ನಿಮ್ಮ ಬ್ಯಾಂಕ್ಖಾತೆಗೆ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ. ಅಷ್ಟಕ್ಕೂ, ಎಸ್ಐಪಿ ಅಥವಾ ಸಗಟು ಮೊತ್ತದ ಮೂಲಕ ಹೂಡಿಕೆ ಮಾಡುವುದು, ಒಂದು ಸ್ಕೀಮ್ನಿಂದ ಇನ್ನೊಂದು ಸ್ಕೀಮ್ಗೆ ಬದಲಾವಣೆ ಮಾಡುವುದು, ಮಾರಾಟ ಮಾಡುವುದು ಸೇರಿದಂತೆ ಎಲ್ಲವನ್ನೂ ನಿಮ್ಮ ಮನೆಯಿಂದಲೇ ಮಾಡಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ