ಹಣಕಾಸು ಗುರಿಗಳನ್ನು ಪೂರೈಸಲು ಈ ಹೂಡಿಕೆಗಳು ಸಾಕಷ್ಟು ಸುರಕ್ಷಿತವಲ್ಲವೇ?

ಹಣಕಾಸು ಗುರಿಗಳನ್ನು ಪೂರೈಸಲು ಈ ಹೂಡಿಕೆಗಳು ಸಾಕಷ್ಟು ಸುರಕ್ಷಿತವಲ್ಲವೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸಾಮಾನ್ಯ ವೆಚ್ಚಗಳು ಮತ್ತು ವಿವಿಧ ಹಣಕಾಸು ಗುರಿಗಳ ವೆಚ್ಚವು ಕಾಲಾನಂತರದಲ್ಲಿ ಹೆಚ್ಚುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಣದುಬ್ಬರವು ವರ್ಷಕ್ಕೆ ಶೇ. 6 ರಲ್ಲಿದ್ದರೆ, ಅಂದಾಜು 12 ವರ್ಷಗಳಲ್ಲಿ ಗುರಿಯನ್ನು ತಲುಪುವ ವೆಚ್ಚವು ದುಪ್ಪಟ್ಟಾಗುತ್ತದೆ. ಆದರೆ, ಹಣದುಬ್ಬರವು ಶೇ. 7 ರಲ್ಲಿದ್ದರೆ, ಸಾಮಾನ್ಯವಾಗಿ ಹತ್ತು ವರ್ಷಕ್ಕೆ ದುಪ್ಪಟ್ಟಾಗುತ್ತದೆ.

ಈಗ ಹಣದುಬ್ಬರವು ಶೇ. 7 ರಲ್ಲಿದ್ದಾಗ, ನೀವು ಅಸಲು ಮೊತ್ತದ ಸಂಪೂರ್ಣ ಸುರಕ್ಷತೆಯನ್ನು ಬಯಸುತ್ತೀರಿ. ಆ ಹಣದುಬ್ಬರಕ್ಕೆ ಅತ್ಯಂತ ಹತ್ತಿರದ ರಿಟರ್ನ್ಸ್ ನೀಡುವ ಕಡೆಗಳಲ್ಲಿ ನೀವು ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಯ ಮೇಲೆ ತೆರಿಗೆಗಳು ಮತ್ತು ತೆರಿಗೆ ನಂತರದ ನಿಮ್ಮ ಹೂಡಿಕೆಯ ಮೇಲೆ ರಿಟರ್ನ್ಸ್ಗಳು ಹಣದುಬ್ಬರಕ್ಕಿಂತ ಕಡಿಮೆ ಇರುತ್ತದೆ.

ನಾವು ಕೆಲವು ಸರಳ ಅಂಕಿಸಂಖ್ಯೆಗಳನ್ನು ನೋಡೋಣ:

ಹಣದುಬ್ಬರವು ಶೇ. 7 ರದ್ದು. ನೀವು ರೂ. 100 ರಲ್ಲಿ ಏನನ್ನಾದರೂ ಈ ವರ್ಷ ಖರೀದಿ ಮಾಡುತ್ತೀರಿ ಎಂದಿಟ್ಟುಕೊಳ್ಳಿ, ನಿಮಗೆ ಇದೇ ಸಾಮಗ್ರಿಯನ್ನು ಖರೀದಿ ಮಾಡಲು ಮುಂದಿನ ವರ್ಷ 107 ರೂ. ಬೇಕಾಗುತ್ತದೆ. ಇದೇ ಸಾಮಗ್ರಿಯನ್ನು ಮತ್ತೊಂದು ವರ್ಷದ ನಂತರ ಖರೀದಿ ಮಾಡಲು ರರೂ. 114.49 ಬೇಕಾಗುತ್ತದೆ. ಅಂದಹಾಗೆ ಈ ಎರಡೂ ವರ್ಷಗಳಲ್ಲಿ ಹಣದುಬ್ಬರ ಒಂದೇ ರೀತಿ ಇದ್ದಾಗ ಈ ಲೆಕ್ಕಾಚಾರ ಅನ್ವಯವಾಗುತ್ತದೆ.

ಇದೇ ಸಮಯದಲ್ಲಿ ನಿಮಗೆ ಶೇ.6 ರಷ್ಟು ವಾರ್ಷಿಕ ರಿಟರ್ನ್ಸ್ ನೀಡುವ ಸುರಕ್ಷಿತ ವಿಧಾನದಲ್ಲಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ 100 ರೂ. 106 ರೂ. ಆಗಿ ಬೆಳೆಯುತ್ತದೆ ಇದು ಈ ಮೇಲೆ ಅಗತ್ಯವಿರುವ ಮೊತ್ತಕ್ಕಿಂತ 1 ರೂ. ಕಡಿಮೆ ಎಂಬುದನ್ನು ನೀವು ಗಮನಿಸಬಹುದು. ಎರಡು ವರ್ಷಗಳ ನಂತರ, ಈ ಮೊತ್ತವು ರೂ. 112.36 ಆಗುತ್ತದೆ. ಇದು ನಿಮಗೆ ಆ ಸಾಮಗ್ರಿಯನ್ನು ಖರೀದಿ ಮಾಡಲು ಅಗತ್ಯವಿರುವುದಕ್ಕಿಂತ ಕಡಿಮೆ ಆಗಿರುತ್ತದೆ. ಎಡಬದಿಯ ಕೋಷ್ಟಕದಲ್ಲಿ ಹೂಡಿಕೆಯ ಮೌಲ್ಯ, ಗುರಿಯ ವೆಚ್ಚ ಮತ್ತು ವರ್ಷಗಳು ಕಳೆದಂತೆ ಅವುಗಳಲ್ಲಿರುವ ಅಂತರದ ಅಂದಾಜನ್ನು ತೋರಿಸುತ್ತದೆ.

ಹೀಗಾಗಿ, ಕೇವಲ ಉಳಿತಾಯ ಮಾಡುವುದಷ್ಟೇ ಅಲ್ಲ, ಹೂಡಿಕೆ ಮಾಡುವುದೂ ಅತ್ಯಂತ ಮುಖ್ಯವಾಗಿರುತ್ತದೆ.

439
ನಾನು ಹೂಡಿಕೆ ಮಾಡಲು ಸಿದ್ಧ