ಮ್ಯೂಚುವಲ್‌ ಫಂಡ್‌ಗಳಲ್ಲಿ ತೆರಿಗೆ ನಿಯಮಗಳು ಮತ್ತು ಅದರ ಪರಿಣಾಮಗಳು ಯಾವುವು?

ಮ್ಯೂಚುವಲ್‌ ಫಂಡ್‌ಗಳಲ್ಲಿ ತೆರಿಗೆ ನಿಯಮಗಳು ಮತ್ತು ಅದರ ಪರಿಣಾಮಗಳು ಯಾವುವು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಹೂಡಿಕೆಗಳು ಕ್ಯಾಪಿಟಲ್ ಗೇನ್ಸ್‌ ತೆರಿಗೆಗೆ ಒಳಪಟ್ಟಿರುತ್ತವೆ. ಇದನ್ನು ನಾವು ಮಾಡಿದ ಲಾಭದ ಮೇಲೆ ಪಾವತಿ ಮಾಡಲಾಗುತ್ತದೆ ಮತ್ತು ಇದಕ್ಕಾಗಿ ನಮ್ಮ ಮ್ಯೂಚುವಲ್‌ ಫಂಡ್ ಹೋಲ್ಡಿಂಗ್‌ಗಳನ್ನು (ಯೂನಿಟ್‌ಗಳನ್ನು) ರಿಡೀಮ್ / ಮಾರಾಟ ಮಾಡಲಾಗುತ್ತದೆ. ಗಳಿಕೆ ಎಂಬುದು ಮಾರಾಟದ ಮತ್ತು ಖರೀದಿಯ (ಮಾರಾಟ ಬೆಲೆ ಮತ್ತು ಖರೀದಿ ಬೆಲೆ) ದಿನದಂದು ಸ್ಕೀಮ್‌ನ ನೆಟ್‌ ಅಸೆಟ್ ವ್ಯಾಲ್ಯೂ (ಎನ್‌ಎವಿ) ಮಧ್ಯದ ವ್ಯತ್ಯಾಸವಾಗಿರುತ್ತದೆ. ಕ್ಯಾಪಿಟಲ್ ಗೇನ್ಸ್‌ ತೆರಿಗೆಯನ್ನು ಹೋಲ್ಡಿಂಗ್‌ ಅವಧಿಯನ್ನು ಅಧರಿಸಿ ವರ್ಗೀಕರಿಸಲಾಗಿದೆ. ಈಕ್ವಿಟಿ ಫಂಡ್‌ಗಳಿಗೆ (ಶೇ. 65  ಕ್ಕೂ ಹೆಚ್ಚು ಈಕ್ವಿಟಿ ಎಕ್ಸ್‌ಪೋಶರ್ ಹೊಂದಿರುವ ಫಂಡ್‌ಗಳಿಗೆ) ಒಂದು ಅಥವಾ ಹೆಚ್ಚು ವರ್ಷದ ಹೋಲ್ಡಿಂಗ್ ಅವಧಿಯನ್ನು ದೀರ್ಘಕಾಲೀನ ಎಂದು ಕರೆಯಲಾಗಿದೆ ಮತ್ತು ಇದು ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್‌ (ಎಲ್‌ಟಿಸಿಜಿ) ತೆರಿಗೆಗೆ ಒಳಪಡುತ್ತದೆ.

ಹಣಕಾಸು ವರ್ಷದಲ್ಲಿ ಸಂಚಿತ ಬಂಡವಾಳ ಗಳಿಕೆಯು 1 ಲಕ್ಷ ರೂ.ಗಿಂತ ಹೆಚ್ಚಾದರೆ ಈಕ್ವಿಟಿ ಫಂಡ್‌ಗಳ ಮೇಲೆ 10% ಎಲ್‌ಟಿಸಿಜಿ ತೆರಿಗೆಯನ್ನು ಅನ್ವಯಿಸಲಾಗುತ್ತದೆ. ಹಣಕಾಸು ಯೋಜನೆಯನ್ನು ಮಾಡುವಾಗ 1 ಲಕ್ಷ ರೂ.ವರೆಗೆ ನಿಮ್ಮ ಗಳಿಕೆಗೆ ತೆರಿಗೆ ವಿಧಿಸಲಾಗುವುದಿಲ್ಲ ಎಂಬುದನ್ನು ನೆನಪಿಡಿ. 2018 ಜನವರಿ 31 ರ ನಂತರ ಮಾಡಿದ ಎಲ್ಲ ಹೂಡಿಕೆಗಳಿಗೆ ಇದು ಅನ್ವಯ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹೋಲ್ಡಿಂಗ್ಸ್‌ಗೆ ಲಾಭಗಳಿಗೆ ಈಕ್ವಿಟಿ ಫಂಡ್‌ಗಳ ಮೇಲೆ ಶೇ. 15 ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್ (ಎಸ್‌ಟಿಸಿಜಿ) ವಿಧಿಸಲಾಗುತ್ತದೆ.

ಈಕ್ವಿಟಿ ಹೊರತಾದ ಫಂಡ್‌ಗಳ ವಿಚಾರದಲ್ಲಿ 3 ವರ್ಷಗಳು ಅಥವಾ ಹೆಚ್ಚು ಅವಧಿಯ ಹೋಲ್ಡಿಂಗ್‌ ಅವಧಿಯನ್ನು ದೀರ್ಘಕಾಲ ಎಂದು ಕರೆಯಲಾಗುತ್ತದೆ ಮತ್ತು ಇಂತಹ ಹೋಲ್ಡಿಂಗ್ಸ್ ಮೇಲೆ ಇಂಡೆಕ್ಸೇಶನ್‌ ನಂತರ ಅಂದರೆ, ಕ್ಯಾಪಿಟಲ್‌ ಗೇನ್ಸ್‌ ಲೆಕ್ಕಾಚಾರ ಮಾಡುವಾಗ ಹಣದುಬ್ಬರಕ್ಕೆ ಮುಮ್ಮುಖವಾಗಿ ಖರೀದಿ ಬೆಲೆಯನ್ನು ಹೊಂದಿಸಿದ ನಂತರ ಶೇ. 20 ಎಲ್‌ಟಿಸಿಜಿ ತೆರಿಗೆ ವಿಧಿಸಲಾಗುತ್ತದೆ. 3 ವರ್ಷಗಳಿಗೂ ಕಡಿಮೆ ಅವಧಿಯ ಹೋಲ್ಡಿಂಗ್ಸ್‌ ಮೇಲೆ ಲಾಭಗಳು ಎಸ್‌ಟಿಸಿಜಿ ತೆರಿಗೆಗೆ ಒಳಪಡುತ್ತವೆ. ಇದು ಗರಿಷ್ಠ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಗರಿಷ್ಠ ತೆರಿಗೆ ಸ್ಲ್ಯಾಬ್‌ ಆಗಿರುತ್ತದೆ.

441
ನಾನು ಹೂಡಿಕೆ ಮಾಡಲು ಸಿದ್ಧ