ಡಿವಿಡೆಂಡ್ ವಿತರಣೆ ತೆರಿಗೆ ಎಂದರೇನು?

ಡಿವಿಡೆಂಡ್ ವಿತರಣೆ ತೆರಿಗೆ ಎಂದರೇನು?
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳಿಂದ ಡಿವಿಡೆಂಡ್‌ಗಳು ಹೂಡಿಕೆದಾರರ ಕೈಯಲ್ಲಿ  ತೆರಿಗೆ ರಹಿತವಾಗಿರುತ್ತವೆ. ಆದರೆ ಮೂಲದಲ್ಲಿ ಡಿವಿಡೆಂಡ್‌ ವಿತರಣೆ ತೆರಿಗೆಗೆ (ಡಿಡಿಟಿ) ಒಳಪಟ್ಟಿರುತ್ತದೆ. ಸ್ಕೀಮ್ ಪಾವತಿ ಮಾಡಿದ ಸ್ಕೀಮ್‌ಗಳು ಹೂಡಿಕೆದಾರರಿಗೆ ಲಭ್ಯವಿರುವ ವಿತರಿಸಬಹುದಾದ ಹೆಚ್ಚುವರಿ ಮೊತ್ತವನ್ನು ಕಡಿಮೆ ಮಾಡುತ್ತದೆ. ಸದ್ಯ ಈಕ್ವಿಟಿ ಆಧಾರಿತ ಸ್ಕೀಮ್‌ಗಳು (ಈಕ್ವಿಟಿಗಳಿಗೆ 65% ನಿಯೋಜನೆ ಹೊಂದಿರುವ ಸ್ಕೀಮ್‌ಗಳು) 10% ಡಿಡಿಟಿಗೆ ಒಳಪಟ್ಟಿವೆ. ಇದರ ಜೊತೆಗೆ 12% ಸರ್‌ಚಾರ್ಜ್‌ ಮತ್ತು 4% ಸೆಸ್‌ ಕೂಡ ಇರುತ್ತವೆ. ಭಾರತೀಯ ನಿವಾಸಿಗಳು, ಎನ್‌ಆರ್‌ಐಗಳು ಅಥವಾ ದೇಶೀಯ ಕಂಪನಿಗಳು ಸೇರಿದಂತೆ ಎಲ್ಲ ರೀತಿಯ ಹೂಡಿಕೆದಾರರಿಗೆ 11.648% ಡಿಡಿಟಿ ಅನ್ವಯಿಸುತ್ತದೆ. ಈಕ್ವಿಟಿ ಹೊರತಾದ ಸ್ಕೀಮ್‌ಗಳಿಗೆ 25% ಡಿಡಿಟಿ ಅನ್ವಯವಾಗುತ್ತದೆ ಮತ್ತು ಇದರ ಜೊತೆಗೆ 12% ಸರ್‌ಚಾರ್ಜ್‌ ಮತ್ತು 4% ಸೆಸ್‌ ಕೂಡ ಇರುತ್ತದೆ. ಹೀಗಾಗಿ ಭಾರತೀಯರು ಮತ್ತು ಎನ್‌ಆರ್‌ಐಗಳಿಬ್ಬರಿಗೂ 29.12% ಡಿಡಿಟಿ ಅನ್ವಯಿಸುತ್ತದೆ.

ಇನ್‌ಫ್ರಾಸ್ಟ್ರಕ್ಚರ್ ಡೆಟ್‌ ಫಂಡ್‌ಗಳು ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುತ್ತವೆ. ಇವು ಭಾರತೀಯ ನಿವಾಸಿಗಳಿಎಗ 25% ಡಿಡಿಟಿ ಮತ್ತು ಎನ್‌ಆರ್‌ಐಗಳಿಗೆ 5% ಡಿಡಿಟಿ ಹೊಂದಿದ್ದು, ತಲಾ 29.12% ಮತ್ತು 5.824% ಡಿಡಿಟಿ ಹೊಂದಿರುತ್ತವೆ.

ಸ್ಕೀಮ್‌ ಮಾಡಿದ ಲಾಭದಿಂದ ಡಿವಿಡೆಂಡ್‌ಗಳನ್ನು ವಿತರಿಸಲಾಗುವುದರಿಂದ, ಹೆಚ್ಚಿನ ಡಿಡಿಟಿ ಇಂದಾಗಿ ಹೂಡಿಕೆದಾರರಿಗೆ ತೆರಿಗೆ ನಂತರ ಡಿವಿಡೆಂಡ್‌ ಲಭ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮ್ಯೂಚುವಲ್‌ ಫಂಡ್‌ ಹೂಡಿಕೆಯಿಂದ ನೀವು ಆದಾಯದ ಮೂಲವನ್ನಾಗಿ ಡಿವಿಡೆಂಡ್‌ಗಳನ್ನು ನೋಡುತ್ತಿಲ್ಲ ಎಂದಾದರೆ ಗ್ರೋತ್ ಆಯ್ಕೆಯನ್ನು ಬಳಸುವುದು ಅತ್ಯಂತ ಸೂಕ್ತವಾಗಿದೆ. ನಿಮಗೆ ನಿಯತ ನಗದು ಹರಿವು ಅಗತ್ಯವಿದ್ದರೆ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್‌ ಪ್ಲಾನ್ (ಎಸ್‌ಡಬ್ಲ್ಯೂಪಿ) ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ