ಹೂಡಿಕೆದಾರರು ನಿಧನ ಹೊಂದಿದರೆ ಮ್ಯೂಚುವಲ್‌ ಫಂಡ್‌ ಹೂಡಿಕೆ ಏನಾಗುತ್ತದೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಯೋಜನೆಗಳು ಸಾಮಾನ್ಯವಾಗಿ ಪಕ್ವತೆ ಅವಧಿಯನ್ನು ಹೊಂದಿರುವುದಿಲ್ಲ. ಕ್ಲೋಸ್ ಎಂಡೆಡ್‌ ಇಎಲ್‌ಎಸ್‌ಎಸ್‌ ಅಥವಾ ಇತರ ಕ್ಲೋಸ್ ಎಂಡೆಡ್‌ ಸ್ಕೀಮ್‌ಗಳಾದ ಎಫ್‌ಎಂಪಿಗಳಲ್ಲಿ ಪಕ್ವತೆ ಅವಧಿಇರುತ್ತದೆ. ಇನ್ನು ಎಸ್‌ಐಪಿಯಲ್ಲೂ ನಿಯತವಾಗಿ ಹೂಡಿಕೆ ಮಾಡಬೇಕಾದ ಟರ್ಮ್‌(ಅವಧಿ) ಇರುತ್ತದೆ. ಎಸ್‌ಐಪಿ ಟರ್ಮ್‌ ಮುಗಿಯುವುದಕ್ಕೂಮೊದಲೇ ಅಥವಾ ಕ್ಲೋಸ್ ಎಂಡೆಡ್‌ ಸ್ಕೀಮ್‌  ಪಕ್ವವಾಗುವುದಕ್ಕೂ ಮೊದಲು ಹೂಡಿಕೆ ದಾರರು ನಿಧನರಾದರೆ, ಈ ಸ್ಕೀಮ್‌ನ ನಾಮಿನಿ, ಜಂಟಿ ಖಾತೆಯಾಗಿದ್ದರೆ ಜೀವಂತ ಇರುವವರು ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಗಳು ಕ್ಲೇಮ್‌ನ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಟ್ರಾನ್ಸ್‌ಮಿಶನ್‌ ಎಂದು ಕರೆಯಲಾಗುತ್ತದೆ. ಟ್ರಾನ್ಸ್‌ಮಿಶನ್‌ಗೆ ವಿನಂತಿ ಮಾಡಲು, ಮೊದಲನೆಯದಾಗಿ ನಿಮ್ಮ ಮ್ಯೂಚುವಲ್‌ ಫಂಡ್‌ ಬಗ್ಗೆ ತಿಳಿವಳಿಕೆ ಹೊಂದಿರಬೇಕಾಗುತ್ತದೆ. ಇಲ್ಲವಾದರೆ ಅದು ಕ್ಲೇಮ್‌ ಮಾಡದಂತೆಯೇ ಉಳಿದುಹೋಗುತ್ತದೆ.

ಹೀಗಾಗಿ, ಯಾವುದೇ ಇತರ ಹೂಡಿಕೆಯಂತೆಯೇ ಮ್ಯೂಚುವಲ್‌ ಫಂಡ್‌ ಹೂಡಿಕೆಗಳಿಗೂ ನಾಮಿನಿ ಅನ್ನು ಸೇರಿಸುವುದು ಮತ್ತು ನಾಮಿನಿಗೆ ಈ ಬಗ್ಗೆ ಮಾಹಿತಿ ನೀಡಿರುವುದನ್ನು ಶಿಫಾರಸುಮಾಡಲಾಗಿದೆ. ನೀವು ಜಂಟಿ ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯಲ್ಲಿ ನಮೂದಿಸಿದ ಬದುಕುಳಿದವರು (ಸರ್ವೈವರ್) ಟ್ರಾನ್ಸ್‌ಮಿಶನ್‌ಗೆ ಕ್ಲೇಮ್‌ ಮಾಡಬಹುದು. ಆದರೆ ನೀವು ನಿಮ್ಮ ಫಾಲಿಯೋದಲ್ಲಿ ನಾಮಿನಿಗಳನ್ನು ನಮೂದಿಸಿಲ್ಲದಿದ್ದರೆ ಅಥವಾ ಜಂಟಿಖಾತೆದಾರರನ್ನು ಹೊಂದಿಲ್ಲದಿದ್ದರೂ ನಿಮ್ಮ ಕಾನೂನು ಉತ್ತರಾಧಿಕಾರಿಗಳು ಎಲ್ಲ ಅಗತ್ಯ ದಾಖಲೆಗಳು ಮತ್ತು ಮರಣ ಪ್ರಮಾಣ ಪತ್ರ ಸೇರಿದಂತೆ ಇತರ ಸಾಕ್ಷಿಗಳನ್ನು ಸಲ್ಲಿಸಿ ಟ್ರಾನ್ಸ್‌ಮಿಶನ್‌ಗೆ ಕ್ಲೇಮ್‌ ಮಾಡಬಹುದು. ಟ್ರಾನ್ಸ್‌ಮಿಶನ್‌ಗಾಗಿ ವಿನಂತಿ ಸಲ್ಲಿಸುವ ವ್ಯಕ್ತಿಗಳು ಕೆವೈಸಿ ನೋಂದಣಿ ಮಾಡಿರಬೇಕು.

434
ನಾನು ಹೂಡಿಕೆ ಮಾಡಲು ಸಿದ್ಧ