ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಎಷ್ಟು ಸಮಯ ಬೇಕು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೂಡಿಕೆ ವಿಧವನ್ನು ಆಯ್ಕೆ ಮಾಡುವುದಕ್ಕೂ ಮೊದಲು ಆಯ್ಕೆ ಮಾಡಬೇಕಿರುವ ಒಂದು ಪ್ರಮುಖ ಅಂಶವೆಂದರೆ “ಕಾಲಾವಧಿ“. ಅಂದರೆ ಎಷ್ಟು ದಿನಗಳು, ತಿಂಗಳುಗಳು ಅಥವಾ ವರ್ಷಗಳವರೆಗೆ ಹೂಡಿಕೆದಾರರು ಹೂಡಿಕೆ ಮಾಡಿರಬೇಕು ಎಂಬುದಾಗಿದೆ.

ಯಾಕೆ ಇದು ಇಷ್ಟು ಪ್ರಮುಖವಾಗಿದೆ?

ಎಲ್ಲ ಹೂಡಿಕೆಗಳನ್ನೂ ಹಣಕಾಸು ಅಥವಾ ಹೂಡಿಕೆ ಯೋಜನೆಯ ಪ್ರಕಾರ ಮಾಡಬೇಕು. ಇಂತಹ ಪ್ಲಾನ್‌ಗಳು ಸಾಮಾನ್ಯವಾಗಿ ನಮ್ಮ ಒಂದು ಹಣಕಾಸು ಉದ್ದೇಶವನ್ನು ಪೂರೈಸುವುದಕ್ಕಾಗಿ ಎಷ್ಟು ಕಾಲ ಹೂಡಿಕೆ ಮಾಡಬೇಕು ಎಂಬುದನ್ನೂ ಒಳಗೊಂಡಿರುತ್ತದೆ.

ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಈಗಷ್ಟೇ ರೂ. 50 ಲಕ್ಷ ಲಾಭ ಮಾಡಿದ ಹೂಡಿಕೆದಾರರ ಸನ್ನಿವೇಶವನ್ನು ನೋಡೋಣ. ಹಣವನ್ನು ಏನು ಮಾಡಬೇಕು ಎಂದು ನಿರ್ಧರಿಸುವುದಕ್ಕೂ ಮೊದಲು ಅವರು ಹೂಡಿಕೆಗೆ ಸುರಕ್ಷಿತ ವಿಧಾನವನ್ನು ಹುಡುಕುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಸೂಕ್ತವಾದ ಸ್ಕೀಮ್‌ ಎಂದರೆ ಲಿಕ್ವಿಡ್ ಫಂಡ್ ಆಗಿರುತ್ತದೆ. ಇದನ್ನು ಉತ್ತಮವಾಗಿ ಬಂಡವಾಳ ರಕ್ಷಣೆ ಸಂಭಾವ್ಯತೆಯ ಜೊತೆಗೆ ಲಿಕ್ವಿಡಿಟಿಗಾಗಿ ಇದನ್ನು ವಿನ್ಯಾಸ ಮಾಡಲಾಗಿದೆ. ನಿರ್ಧಾರ ಮಾಡುತ್ತಿದ್ದ ಹಾಗೆಯೇ ಯಾವಾಗ ಬೇಕಾದರೂ ಅವರು ರಿಡೀಮ್ ಮಾಡಿಕೊಳ್ಳಬಹುದು.

ಹೀಗಾಗಿ ಎಷ್ಟು ಕಾಲದವರೆಗೆ ಹೂಡಿಕೆ ಮಾಡಿರಬೇಕು ಎಂಬುದು ಹೂಡಿಕೆ ಉದ್ದೇಶವನ್ನು ಆಧರಿಸಿರುತ್ತದೆ. ಹೂಡಿಕೆದಾರರು ಹಣಕಾಸು ತಜ್ಞರೊಂದಿಗೆ ಅಂದರೆ, ಹೂಡಿಕೆ ಸಲಹೆಗಾರರು ಅಥವಾ ಎಂಎಫ್ ವಿತರಕರೊಂದಿಗೆ ನಿಯತಕಾಲಿಕವಾಗಿ ಹೂಡಿಕೆಯ ಸ್ಥಿತಿ ಮತ್ತು ಪ್ರಗತಿಯನ್ನು  ಪರಿಶೀಲಿಸಬೇಕಾಗುತ್ತದೆ. ಇಂತಹ ಮರುಪರಿಶೀಲನೆಯ ವೇಳೆ ರಿಡೀಮ್‌, ಬದಲಾವಣೆ, ಹೂಡಿಕೆ ಅಥವಾ ಹಾಗೆಯೇ ಬಿಡುವ ನಿರ್ಧಾರಗಳನ್ನು ಮಾಡಲಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ