ಗುರಿ ಇಲ್ಲದೆಯೇ ನಾನು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಆರಂಭಿಸಬಹುದೇ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕಾಲಾನಂತರದಲ್ಲಿ ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸಲು ಮ್ಯೂಚುವಲ್ ಫಂಡ್ಗಳು ಸಹಾಯ ಮಾಡುತ್ತವೆ. ಹಾಗಾದರೆ, ನಿಮ್ಮ ಮನಸಿನಲ್ಲಿ ನಿರ್ದಿಷ್ಟ ಗುರಿ ಇದ್ದಾಗ ಮಾತ್ರವೇ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕು, ಇಲ್ಲವಾದರೆ ಹೂಡಿಕೆ ಮಾಡಬಾರದು ಎಂದು ಅರ್ಥವೇ? ಇಲ್ಲ! ಹಣಕಾಸು ಗುರಿಗಳು ಇಲ್ಲದಿದ್ದರೂ, ತನ್ನ ಉಳಿತಾಯವನ್ನು ಬೆಳೆಸಲು ಬಯಸುವ ಮತ್ತು ಮುಂದೊಂದು ದಿನ ಗುರಿ ನಿರ್ಧಾರವಾದಾಗ ಸಿದ್ಧವಾಗಿರಬೇಕು ಎಂದು ಬಯಸುವ ಎಲ್ಲರಿಗೂ ಇದು ಒಂದು ಉತ್ತಮ ಆಯ್ಕೆ.

ಎಲ್ಲ ಸಮಯದಲ್ಲೂ ತಮ್ಮ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವವರೇ ಉತ್ತಮ ಕ್ರೀಡಾಳು ಆಗಬಲ್ಲರು. ಅವರು ಬೆಳಕಿಗೆ ಬರುವುದಕ್ಕೂ ಸಾಕಷ್ಟು ಮೊದಲೇ ಸಿದ್ಧತೆ ನಡೆದಿರುತ್ತದೆ. ಅವರು ಸಿದ್ಧತೆ ಆರಂಭಿಸಿದಾಗ, ಅವರು ತಕ್ಷಣವೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟ ಆಡಿ ಗೆಲುವು ಸಾಧಿಸುತ್ತೇನೆ ಎಂಬಂತಹ ದೊಡ್ಡ ಗುರಿಯನ್ನು ಹೊಂದಿಲ್ಲದೇ ಇರಬಹುದು. ಅವಕಾಶ ಉಂಟಾದಾಗ, ಉದಾಹರಣೆಗೆ ಶಾಲೆ, ಕಾಲೇಜು ಅಥವಾ ರಾಜ್ಯ ಮತ್ತು ರಾಷ್ಟ್ರಿಯ ಮಟ್ಟದಲ್ಲಿ ತಂಡದ ಆಯ್ಕೆಯ ಸಮಯದಲ್ಲಿ, ಅವರು ಈ ಹಿಂದೆ ಉತ್ತಮ ಸಿದ್ಧತೆ ಮಾಡಿದ್ದರಿಂದಾಗಿಯೇ ತಂಡಕ್ಕೆ ಸೇರಲು ಅವರಿಗೆ ಸಾಧ್ಯವಾಗುತ್ತದೆ.

ಇದು ಜೀವನದ ಹಣಕಾಸು ಗುರಿಗಳ ವಿಚಾರದಲ್ಲೂ ನಡೆಯುತ್ತದೆ. ನೀವು ಕೆಲಸ ಮಾಡಲು ಆರಂಭಿಸಿದಾಗ, ನಿಮ್ಮ ಮಾಸಿಕ ವೆಚ್ಚಗಳನ್ನು ಪೂರೈಸುವುದನ್ನು ಹೊರತುಪಡಿಸಿ ನೀವು ಯಾವುದೇ ಗುರಿಗಳನ್ನು ಹೊಂದಿಲ್ಲದಿರಬಹುದು. ಆದರೆ, ನೀವು ಗಳಿಕೆ ಆರಂಭಿಸಿದ ಸಮಯದಿಂದಲೇ ಹೂಡಿಕೆ ಆರಂಭಿಸುವುದು ಉತ್ತಮ. ಯಾಕೆಂದರೆ, ಜೀವನದಲ್ಲಿ ನೀವು ಮುಂದೆ ಸಾಗಿದಂತೆ, ನಿಮಗಾಗಲೀ ಅಥವಾ ನಿಮ್ಮ ಕುಟುಂಬಕ್ಕಾಗಲೀ ಗುರಿಗಳು ಹುಟ್ಟಿಕೊಳ್ಳುತ್ತವೆ. ಗುರಿ ನಿಮ್ಮ ಮನಸಿನಲ್ಲಿಲ್ಲದಿದ್ದಾಗ ಹೂಡಿಕೆ ಮಾಡುವುದರಿಂದ, ಜೀವನದಲ್ಲಿ ಎದುರಾಗಬಹುದಾದ ವಿವಿಧ ಹಣಕಾಸು ಬೇಡಿಕೆಗಳನ್ನು ಎದುರಿಸಲು ನೀವು ಉತ್ತಮವಾಗಿ ಸಿದ್ಧವಾಗಿರುತ್ತೀರಿ. ಅದಕ್ಕಿಂತ ಹೆಚ್ಚಾಗಿ, ಹೂಡಿಕೆ ವಿಚಾರಕ್ಕೆ ಬಂದಾಗ ನೀವು ಹೆಚ್ಚು ಶಿಸ್ತುಬದ್ಧವಾಗಿರುತ್ತೀರಿ. ನಿಧಿಯನ್ನು ರೂಪಿಸಲು ಸಮಯ ಮತ್ತು ಸಹನೆ ಬೇಕಾಗುತ್ತದೆ ಹಾಗೂ ಬೇಗ ಆರಂಭಿಸಿದಷ್ಟೂ ಯಾವುದೇ ಹಣಕಾಸು ಬೇಡಿಕೆಯನ್ನು ನಿರ್ವಹಿಸಲು ಉತ್ತಮ ಅವಕಾಶ ನಿಮಗೆ ಇರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ