ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೀವು ELSS ನಲ್ಲಿ ಹೂಡಿಕೆ ಮಾಡಬೇಕೆ?

ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೀವು ELSS ನಲ್ಲಿ ಹೂಡಿಕೆ ಮಾಡಬೇಕೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

2020 ಏಪ್ರಿಲ್1 ರಿಂದ ಜಾರಿಗೆ ಬಂದ ಹೊಸ ತೆರಿಗೆ ವ್ಯವಸ್ಥೆಯು ಕೆಲವು ವಿನಾಯಿತಿಗಳನ್ನು ನಿರಾಕರಿಸಿ ಕಡಿಮೆ ತೆರಿಗೆ ದರವನ್ನು ಪಡೆಯುವುದು ಮತ್ತು ವಿನಾಯಿತಿಗಳನ್ನು ಪಡೆದು ಹೆಚ್ಚಿನ ತೆರಿಗೆ. ದರಗಳನ್ನು ಪಡೆಯುವುದರ (ಹಳೆಯ ತೆರಿಗೆ ವ್ಯವಸ್ಥೆ) ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ವೈಯಕ್ತಿಕ ಮತ್ತು ಅವಿಭಕ್ತ ಕುಟುಂಬದ ತೆರಿಗೆದಾರರಿಗೆ ನೀಡುತ್ತದೆ. ಎಲ್ಲರಿಗೂ ಹೊಸ ತೆರಿಗೆ ವ್ಯವಸ್ಥೆ ಹೊಂದದಿರಬಹುದು. ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮಾಡುವ ತೆರಿಗೆ ಉಳಿತಾಯಗಳನ್ನು ತೆರಿಗೆದಾರರು ಪರಿಶೀಲಿಸಬೇಕು.

ಮನೆ ಅಥವಾ ಶೈಕ್ಷಣಿಕ ಸಾಲ, ತೆರಿಗೆ ಕಳೆಯಬಹುದಾದ ಜೀವ ವಿಮೆ ಪಾಲಿಸಿಗಳು, 15 ಲಕ್ಷಕ್ಕಿಂತ ಹೆಚ್ಚು ಸಂಬಳ ಹೊಂದಿರುವವರು ಅಥವಾ ವಿನಾಯಿತಿಗಳ ಮೂಲಕ ಭಾರಿ ಉಳಿತಾಯ ಮಾಡುವ ತೆರಿಗೆದಾರರಿಗೆ ಹಳೆಯ ತೆರಿಗೆ ವ್ಯವಸ್ಥೆ ಹೆಚ್ಚು ಹೊಂದಿಕೆಯಾಗಬಹುದು. ಹೀಗಾಗಿ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಉಳಿತಾಯ ಮಾಡಲು ಈ ತೆರಿಗೆದಾರರು ELSS ಅನ್ನು ಬಳಸಬಹುದು. ಹಳೆಯ ತೆರಿಗೆ ವ್ಯವಸ್ಥೆಯಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ವರ್ಷದ ಕೊನೆಯಲ್ಲಿ ಭಾರಿ ಸಂಖ್ಯೆಯ ಕಾಗದ ಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಆದರೆ, ಹಳೆಯ ತೆರಿಗೆ ವ್ಯವಸ್ಥೆಯು ನಿಮಗೆ ಪ್ರಮುಖ ಹೂಡಿಕೆ ಮತ್ತು ಉಳಿತಾಯ ನಿರ್ಧಾರಗಳನ್ನು ಮಾಡಲು ಅನುವು ಮಾಡುತ್ತದೆ. ELSS, ಪಿಂಚಣಿ ಯೋಜನೆ ಅಥವಾ ಪಿಪಿಎಫ್ಆಗಲಿ ಈ ಹೂಡಿಕೆ ಅಥವಾ ಉಳಿತಾಯವನ್ನು ವಾರ್ಷಿಕ ರೂಪದಲ್ಲಿ ಮಾಡುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಕೆಲವು ತೆರಿಗೆದಾರರು ಈಗಾಗಲೇ ELSS ನಲ್ಲಿ SIP ಗಳನ್ನು ಹೊಂದಿರಬಹುದು. ತಮ್ಮ SIPಗಳನ್ನು ನಿಲ್ಲಿಸುವುದಕ್ಕೂ ಮೊದಲು ಎರಡೂ ವ್ಯವಸ್ಥೆಯಲ್ಲಿರುವ ತೆರಿಗೆ ಪ್ರಯೋಜನವನ್ನು ಅವರು ಮೌಲೀಕರಿಸಬೇಕು.

ಯಾವ ತೆರಿಗೆ ವ್ಯವಸ್ಥೆಯು ನಿಮಗೆ ಹೆಚ್ಚು ತೆರಿಗೆ ಉಳಿತಾಯಕ್ಕೆ ಸಹಾಯ ಮಾಡಬಲ್ಲದು ಎಂಬುದು ನಿಮ್ಮ ಆದಾಯ ಮತ್ತು ಸಂಬಳದ ಶೈಲಿಯನ್ನು ಅವಲಂಬಿಸಿರುತ್ತದೆ. ಎರಡೂ ತೆರಿಗೆ ವ್ಯವಸ್ಥೆಯಲ್ಲಿ ನಿಮ್ಮ ತೆರಿಗೆ ಬಾಧ್ಯತೆಯನ್ನು ಲೆಕ್ಕಾಚಾರ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ನೀವು ತೆರಿಗೆ ಸಲಹೆಗಾರರ ಸಲಹೆ ಪಡೆಯಬೇಕು. ನಿಮಗೆ ತೆರಿಗೆ ಉಳಿತಾಯ ಮಾಡಲು ಸಹಾಯ ಮಾಡುವುದರ ಜೊತೆಗೆ, ಈಕ್ವಿಟಿಗಳ ಬೆಳವಣಿಗೆ ಅನುಕೂಲವನ್ನೂ ಒದಗಿಸುವ ELSS ನಲ್ಲಿ ಹೂಡಿಕೆ ಮುಂದುವರಿಸುವ ನಿಮ್ಮ ನಿರ್ಧಾರದ ಬಗ್ಗೆ ಮಾರ್ಗದರ್ಶನವನ್ನು ಇಂತಹ ಹೋಲಿಕೆಯು ನೀಡಬಲ್ಲದು. ನಿಮಗೆ ಹೊಸ ತೆರಿಗೆ ವ್ಯವಸ್ಥೆಯು ಉತ್ತಮವಾಗಿ ಹೊಂದಿದರೂ, ಸಂಪತ್ತು ರಚನೆ ಉದ್ದೇಶದಿಂದ ELSS ನಲ್ಲಿ ಹೂಡಿಕೆ ಮಾಡಲು ಪರಿಗಣಿಸಬಹುದು. ಚಂಚಲ ಮಾರುಕಟ್ಟೆಯಲ್ಲಿ ಹಣ ಹಿಂಪಡೆಯಬೇಕು ಎಂದು ಮನಸಾಗುವ ವ್ಯಕ್ತಿ ನೀವಾಗಿದ್ದರೆ, ಹಣ ಹಿಂಪಡೆಯದೇ ನಿರೀಕ್ಷೆ ಮಾಡುವುದಕ್ಕಾಗಿ ಮತ್ತು ಅಲ್ಪಕಾಲದ ಚಂಚಲ ಮಾರುಕಟ್ಟೆಯ ಸನ್ನಿವೇಶವನ್ನು ದಾಟಲು ಲಾಕ್ ಇನ್ ಅವಧಿ ಸಹಾಯ ಮಾಡುತ್ತದೆ. ELSS ಫಂಡ್ಗಳು 3 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿರುವುದರಿಂದ, ಸಗಟು ರೂಪದಲ್ಲಿ ನೀವು ಇಂದು ಹೂಡಿಕೆ ಮಾಡಿದರೆ 3 ವರ್ಷಗಳ ನಂತರ ಮಾತ್ರವೇ ನೀವು ನಿಮ್ಮ ಹಣವನ್ನು ಹಿಂಪಡೆಯಬಹುದಾಗಿದೆ. ಪ್ರತಿ SIP ಪಾವತಿಗೆ ಲಾಕ್ ಇನ್ ಅವಧಿ ಅನ್ವಯಿಸುತ್ತದೆ. 12 ತಿಂಗಳುಗಳಲ್ಲಿ ನೀವು ಹೂಡಿಕೆ ಮಾಡಿದ ಒಟ್ಟು ಮೊತ್ತವನ್ನು ಹಿಂಪಡೆಯಲು ನೀವು ಬಯಸಿದರೆ, ಕೊನೆಯ SIP ಕಂತು 3 ವರ್ಷಗಳನ್ನು ಪೂರೈಸುವವರೆಗೂ ನೀವು ನಿರೀಕ್ಷಿಸಬೇಕಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ