ನಾನು SIP ಮೂಲಕ ELSS ನಲ್ಲಿ ಹೂಡಿಕೆ ಮಾಡಬೇಕು ಅಥವಾ ಸಗಟು ಮೊತ್ತವನ್ನು ಹೂಡಿಕೆ ಮಾಡಬೇಕೇ?

ನಾನು SIP ಮೂಲಕ ELSS ನಲ್ಲಿ ಹೂಡಿಕೆ ಮಾಡಬೇಕು ಅಥವಾ ಸಗಟು ಮೊತ್ತವನ್ನು ಹೂಡಿಕೆ ಮಾಡಬೇಕೇ? zoom-icon
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಯಾವಾಗ ಮತ್ತು ಯಾಕೆ ನೀವು ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ಆಧರಿಸಿ SIP ಅಥವಾ ಸಗಟು ರೂಪದಲ್ಲಿ ELSS ನಲ್ಲಿ ಹೂಡಿಕೆ ಮಾಡಬೇಕೇ ಎಂಬುದು ನಿರ್ಧಾರವಾಗುತ್ತದೆ. ಹಣಕಾಸು ವರ್ಷದ ಕೊನೆಯಲ್ಲಿ ನೀವು ತೆರಿಗೆ ಉಳಿತಾಯ ಮಾಡಲು ಎದುರು ನೋಡುತ್ತಿದ್ದರೆ, ಸಗಟು ರೂಪದಲ್ಲಿ ಹೂಡಿಕೆ ಮಾಡುವುದು ಮಾತ್ರ ನಿಮ್ಮ ಆಯ್ಕೆಯಾಗಿರುತ್ತದೆ. ಆದರೆ, ಹಣಕಾಸು ವರ್ಷದ ಆರಂಭದಲ್ಲಿ ನೀವು ಹೂಡಿಕೆ ಮಾಡುತ್ತಿದ್ದರೆ, ನೀವು ಸಗಟು ರೂಪದಲ್ಲಿ ಅಥವಾ SIP ಮೂಲಕ ಹೂಡಿಕೆ ಮಾಡಬಹುದು. ELSS ತೆರಿಗೆ ಪ್ರಯೋಜನವನ್ನು ಒದಗಿಸುತ್ತದೆ ಮತ್ತು ಈಕ್ವಿಟಿಗಳ ಬೆಳವಣಿಗೆ ಸಾಧ್ಯತೆಯನ್ನೂ ಹೊಂದಿರುತ್ತದೆ.

ELSS ನಲ್ಲಿ SIP  ಮೂಲಕ ಹೂಡಿಕೆ ಮಾಡುವುದು ಎರಡು ಪ್ರಯೋಜನಗಳನ್ನು ಹೊಂದಿರುತ್ತದೆ. ಮೊದಲು, ನಿಮ್ಮ ಹೂಡಿಕೆಯನ್ನು ವರ್ಷದ ಹಲವು ಸಮಯದಲ್ಲಿ ಮಾಡುವುದರಿಂದ ರಿಸ್ಕ್ ಕಡಿಮೆಯಾಗುತ್ತದೆ. ಎರಡನೆಯದಾಗಿ, ಒಂದು ಸಮಯದಲ್ಲಿ ಸಗಟು ರೂಪದಲ್ಲಿ ಹೂಡಿಕೆ ಮಾಡುವುದಕ್ಕೆ ಹೋಲಿಸಿದರೆ ವರ್ಷಪೂರ್ತಿ ವಿವಿಧ ಎನ್ಎವಿಯಲ್ಲಿ ನೀವು ಯೂನಿಟ್ಗಳನ್ನು ಪಡೆಯುವುದರಿಂದ ಉತ್ತಮ ಸರಾಸರಿಯನ್ನು ರೂಪಾಯಿ ವೆಚ್ಚ ಸರಾಸರಿ ಮಾಡುವ ಮೂಲಕ ಪಡೆಯುತ್ತೀರಿ. ಮೂರನೆಯದಾಗಿ, ನಿಯತವಾಗಿ ಸಣ್ಣ ಮೊತ್ತದ ಹೂಡಿಕೆ ಮಾಡುವುದರಿಂದ ನಿಮ್ಮ ಜೇಬಿಗೆ ಭಾರವಾಗುವುದಿಲ್ಲ. ಆದರೆ, ಸಗಟು ಹೂಡಿಕೆಯಲ್ಲಿ ಹೀಗಾಗುತ್ತದೆ. ಆದರೆ, ELSS ಗೆ ನೀವು ಹೂಡಿಕೆ ಮಾಡಲು ಬಯಸಿದ ಮೊತ್ತದಷ್ಟೇ, ನೀವು ವರ್ಷಪೂರ್ತಿ ಮಾಡುವ ಹೂಡಿಕೆಯ ಮೊತ್ತವೂ ಆಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ELSS ಫಂಡ್ಗಳು 3 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿರುವುದರಿಂದ, ಸಗಟು ರೂಪದ ಹೂಡಿಕೆಯಲ್ಲಿ ನೀವು ಇಂದು ಹೂಡಿಕೆ ಮಾಡುತ್ತೀರಿ ಎಂದಾದರೆ, 3 ವರ್ಷಗಳ ನಂತರವೇ ಹಣ ಹಿಂಪಡೆಯಬಹುದು. ಲಾಕ್ ಇನ್ ಅವಧಿಯು ಪ್ರತಿ SIP ಮೊತ್ತದ ಮೇಲೂ ಅನ್ವಯಿಸುತ್ತದೆ. 12 ತಿಂಗಳುಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತವನ್ನು ನೀವು ಹಿಂಪಡೆಯಲು ಬಯಸಿದರೆ, SIP ಹೂಡಿಕೆ 3 ವರ್ಷಗಳನ್ನು ಮುಗಿಸಿದ ನಂತರ ನೀವು ನಿರೀಕ್ಷಿಸಬೇಕಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ