ತೆರಿಗೆ ಉಳಿತಾಯ ಮಾಡುವ ಮ್ಯೂಚುವಲ್ಫಂಡ್ಗಳಲ್ಲಿ ಯಾರು ಹೂಡಿಕೆ ಮಾಡಬೇಕು?

ತೆರಿಗೆ ಉಳಿತಾಯ ಮಾಡುವ ಮ್ಯೂಚುವಲ್ಫಂಡ್ಗಳಲ್ಲಿ ಯಾರು  ಹೂಡಿಕೆ ಮಾಡಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ತೆರಿಗೆ ಉಳಿತಾಯದ ಮ್ಯೂಚುವಲ್ಫಂಡ್ಗಳು ಅಥವಾ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಗಳು  ವೈವಿಧ್ಯಮಯವಾದ ಈಕ್ವಿಟಿ ಫಂಡ್ಗಳಾಗಿದ್ದು, ಇವು ಆದಾಯ ತೆರಿಗೆ ಕಾಯ್ದೆ ವಿಭಾಗ 80ಸಿ ಅಡಿಯಲ್ಲಿ ತೆರಿಗೆ ಕಡಿತ ಪ್ರಯೋಜನಗಳನ್ನು ಒದಗಿಸುತ್ತವೆ. ಹೀಗಾಗಿ, ELSS ಫಂಡ್ಗಳು ಯಾವುದೇ ಈಕ್ವಿಟಿ ಆಧರಿತ ತೆರಿಗೆ ಉಳಿತಾಯ ಹೂಡಿಕೆಯ ರಿಸ್ಕ್ತೆಗೆದುಕೊಳ್ಳಲು ಬಯಸುವ ತೆರಿಗೆದಾರರಿಗೆ ಸೂಕ್ತವಾಗಿದೆ. ನೌಕರ ವರ್ಗಕ್ಕೆ ELSS ತುಂಬಾ ಸೂಕ್ತವಾಗಿದೆ. ಯಾಕೆಂದರೆ, ಅವರು ನಿಯತವಾದ ಆದಾಯ ಮೂಲವನ್ನು ಹೊಂದಿರುತ್ತಾರೆ ಮತ್ತು ಪ್ರತಿ ವರ್ಷವೂ ತೆರಿಗೆ ಉಳಿಸುವ ಹೂಡಿಕೆ ಮಾಡಬೇಕಿರುತ್ತದೆ. ಅಷ್ಟಕ್ಕೂ, ರೂಪಾಯಿ ವೆಚ್ಚ ಸರಾಸರಿ ಪ್ರಯೋಜನವನ್ನು ಪಡೆಯಲು ಮಾಸಿಕ ಆಧಾರದಲ್ಲಿ SIP ಮೂಲಕ ELSS ನಲ್ಲಿ ಅವರು ಆರಾಮವಾಗಿ ಹೂಡಿಕೆ ಮಾಡಬಹುದು.

ನೀವು ಯುವ ತೆರಿಗೆದಾರರಾಗಿದ್ದರೆ, ELSS ನಲ್ಲಿ ಹೂಡಿಕೆ ಮಾಡುವ ಎರಡು ರೀತಿಯ ಪ್ರಯೋಜನವನ್ನು ಪಡೆಯಿರಿ. ಉದಾ., 80 ಸಿ ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯುವುದು ಮತ್ತು ELSS ನಲ್ಲಿ ಪ್ರತಿ ವರ್ಷ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಈಕ್ವಿಟಿಗಳ ಪ್ರಗತಿ ಸಾಧ್ಯತೆಯ ಅನುಕೂಲ ಪಡೆಯುವುದು. ತೆರಿಗೆ ಉಳಿತಾಯ ಪ್ರಯೋಜನವನ್ನು ಪಡೆಯಲು ELSS ನಲ್ಲಿ ಹಳೆಯ ತೆರಿಗೆದಾರರೂ ಹೂಡಿಕೆ ಮಾಡಬಹುದಾಗಿದೆ. ELSS ನಲ್ಲಿರುವ ಈಕ್ವಿಟಿ ರಿಸ್ಕ್ಗೆ ದೀರ್ಘಕಾಲದವರೆಗೆ ಹೂಡಿಕೆ ಅಗತ್ಯವಿರುತ್ತದೆ. ಆದರೆ ಇವರಿಗೆ ದೀರ್ಘಕಾಲದ ಹೂಡಿಕೆ ಸಾಧ್ಯವಾಗದೇ ಇರಬಹುದು. ನೆನಪಿಡಿ, ELSS ಫಂಡ್ಗಳು 3 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿರುತ್ತದೆ. ನೀವು ಇಂದು ಹೂಡಿಕೆ ಮಾಡಿದರೆ, ಸಗಟು ಹೂಡಿಕೆಯಲ್ಲಿ 3 ವರ್ಷಗಳ ನಂತರವೇ ಹಣವನ್ನು ಹೊರತೆಗೆಯಲಾಗುತ್ತದೆ. ಪ್ರತಿ SIP ಪಾವತಿಗೂ ಲಾಕ್ ಇನ್ ಅವಧಿ ಅನ್ವಯವಾಗುತ್ತದೆ. 12 ತಿಂಗಳಲ್ಲಿ ನೀವು ಹೂಡಿಕೆ ಮಾಡಿದ ಒಟ್ಟು ಮೊತ್ತವನ್ನು ಹಿಂಪಡೆಯಲು ನೀವು ಬಯಸಿದರೆ, ಕೊನೆಯ SIP ಕಂತು 3 ವರ್ಷಗಳನ್ನು ಪೂರೈಸುವವರೆಗೂ ನೀವು ನಿರೀಕ್ಷಿಸಬೇಕಾಗುತ್ತದೆ. ಆದರೆ, ಇದು ಲಾಕ್ ಇನ್ಅವಧಿಯಲ್ಲಿ ಹಣವನ್ನು ಕೊಳೆಯಲು ಬಿಡುವುದಲ್ಲ. ಬದಲಿಗೆ, ELSS ನ ನಿಜವಾದ ಅನುಕೂಲವನ್ನು ನೋಡಲು ಅದರ ನಂತರವೂ ಹೂಡಿಕೆ ಇಟ್ಟುಕೊಳ್ಳಬಹುದು.

ನಿವೃತ್ತಿಗೆ ಸಮೀಪದಲ್ಲಿರುವ ವ್ಯಕ್ತಿಗಿಂತ ನಿವೃತ್ತಿಗೆ ಹೆಚ್ಚು ವರ್ಷಗಳು ಇರುವ ಯುವ ತೆರಿಗೆದಾರರು ELSS ನ ಎರಡೂ ಅನುಕೂಲವನ್ನು ಉತ್ತಮವಾಗಿ ಪಡೆಯಬಲ್ಲರು. ಆದರೆ, 5-7 ವರ್ಷಗಳ ನಿವೃತ್ತಿ ಬಾಕಿ ಇದ್ದಾಗಲೂ  ರಿಸ್ಕ್ ತೆಗೆದುಕೊಳ್ಳಲು ಬಯಸಿದರೆ ELSS ಆಯ್ಕೆಯಲ್ಲಿ ಹೂಡಿಕೆ ಮಾಡಬಹುದು. ಹೀಗಾಗಿ, ನಿಮ್ಮ ವಯಸ್ಸು, ರಿಸ್ಕ್ ತಾಳಿಕೊಳ್ಳುವ ಸಾಮರ್ಥ್ಯ ಮತ್ತು ಹಳೆಯ ತೆರಿಗೆ ವ್ಯವಸ್ಥೆ ನಿಮಗೆ ಸೂಕ್ತ ಎನಿಸುವ ಇತರ ಬಾಧ್ಯತೆಗಳಾದ ಮನೆ ಮತ್ತು ಶಿಕ್ಷಣ ಸಾಲಗಳನ್ನು ಆಧರಿಸಿ ELSS ನಲ್ಲಿ ನಿಮಗೆ ಆದ್ಯತೆಯ ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಯಾಗಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ