ಮಧ್ಯದಲ್ಲಿ ನೀವು ಎಸ್‌ಐಪಿ ಪಾವತಿಗಳನ್ನು ತಪ್ಪಿಸಿದರೆ ಏನಾಗುತ್ತದೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಸ್‌ಐಪಿ ಅವಧಿಯ ಮಧ್ಯದಲ್ಲಿ ಎಸ್‌ಐಪಿ ಪಾವತಿ ಮಾಡದೇ ಇದ್ದರೆ ಮ್ಯೂಚುವಲ್‌ ಫಂಡ್‌ ನಲ್ಲಿ ನಷ್ಟವಾಗುತ್ತದೆ ಎಂದು ಹಲವು ಹೂಡಿಕೆದಾರರು ಚಿಂತಿಸುತ್ತಾರೆ. ಇಂತಹ ಸನ್ನಿವೇಶವು ಹಲವು ಕಾರಣಗಳಿಂದ ಉಂಟಾಗಬಹುದು. ನೀವು ಯಾವುದಾದರೂ ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿರಬಹುದು ಅಥವಾ ನಿಮ್ಮ ಉದ್ಯೋಗ ಅಥವಾ ವಹಿವಾಟು ಆದಾಯದಲ್ಲಿ ಸಮಸ್ಯೆ ಅಥವಾ ಅನಿಶ್ಚಿತತೆ ಇರಬಹುದು. ಇಂತಹ ಸನ್ನಿವೇಶದಲ್ಲಿ ನೀವು ನಿಮ್ಮ ನಿಯತ ಎಸ್‌ಐಪಿ ಪಾವತಿಯನ್ನು ಮಾಡಲು ಸಾಧ್ಯವಾಗದೇ ಇರಬಹುದು. ಎಸ್‌ಐಪಿ ದೀರ್ಘಕಾಲದ ಹೂಡಿಕೆ ಆಯ್ಕೆಯಾಗಿದ್ದು, ಮಧ್ಯದಲ್ಲಿ ನೀವು ಕೆಲವು ಪಾವತಿಗಳನ್ನು ತಪ್ಪಿಸಿದರೂ ತೊಂದರೆ ಇಲ್ಲ. ವಿಮೆ ಪಾಲಿಸಿಯಲ್ಲಿ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಮಾಡದೇ ಇದ್ದರೆ, ಪಾಲಿಸಿ ನಿಷ್ಕ್ರಿಯವಾಗುತ್ತದೆ. ಆದರೆ ಇಲ್ಲಿ ನೀವು ಈವರೆಗೆ ಮಾಡಿದ ಹೂಡಿಕೆಯು ರಿಟರ್ನ್‌ ಪಡೆಯುತ್ತಿರುತ್ತದೆ ಮತ್ತು ಯಾವುದೇ ಸಮಯದಲ್ಲೂ ಇದನ್ನು ನೀವು ವಿತ್‌ಡ್ರಾ ಮಾಡಬಹುದು. ಆದರೆ, ನೀವು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸಂಪತ್ತು ಸಂಚಯವಾಗುತ್ತದೆ ಮತ್ತು ನಿಮ್ಮ ಎಸ್‌ಐಪಿಯಲ್ಲಿ ಪದೇಪದೇ ಪಾವತಿಯನ್ನು ತಪ್ಪಿಸಿದರೆ ನಿಮ್ಮ ಹಣಕಾಸು ಗುರಿಗಳನ್ನು ತಲುಪಲು ಸಾಧ್ಯವಾಗದೇ ಇರಬಹುದು.

ಎಸ್‌ಐಪಿ ಕಂತುಗಳ ಪಾವತಿ ಮಾಡದೇ ಇರುವುದಕ್ಕೆ ಮ್ಯೂಚುವಲ್ಫಂಡ್‌ಗಳು ದಂಡ ವಿಧಿಸುವುದಿಲ್ಲ. ಆದರೆ ಸತತ ಮೂರು ತಿಂಗಳಿಗೆ ನೀವು ಪಾವತಿ ಮಾಡಲು ವಿಫಲವಾದರೆ ನಿಮ್ಮ ಎಸ್‌ಐಪಿಅನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ. ಅಲ್ಲದೆ, ನಿಮ್ಮ ಬ್ಯಾಂಕ್‌  ಆಟೋ ಡೆಬಿಟ್ ಪಾವತಿಯನ್ನು ಅಗೌರವಿಸಿರುವುದಕ್ಕೆನಿಮಗೆ ದಂಡ ವಿಧಿಸುತ್ತದೆ. ಹೀಗಾಗಿ, ಭವಿಷ್ಯದಲ್ಲಿ ನೀವು ಹಣಕಾಸಿನ ಸಮಸ್ಯೆ ಎದುರಿಸುತ್ತೀರಿ ಎಂದು ತಿಳಿದಾಗ ಕನಿಷ್ಠ 30 ದಿನಗಳ ಮೊದಲೇ ವಿನಂತಿಯನ್ನು ಕಳುಹಿಸುವ ಮೂಲಕ ಎಸ್‌ಐಪಿಅನ್ನು ನಿಲ್ಲಿಸುವುದನ್ನು ಸಲಹೆ ಮಾಡಲಾಗಿದೆ. ಹಣಕಾಸು ಪರಿಸ್ಥಿತಿ ಅನುಕೂಲವಾದಾಗ ಪುನಃ ಹೊಸದಾಗಿ ಎಸ್‌ಐಪಿ ಆರಂಭಿಸಿ.

434
ನಾನು ಹೂಡಿಕೆ ಮಾಡಲು ಸಿದ್ಧ