ಮ್ಯೂಚುವಲ್ ಫಂಡ್‌ಗಳನ್ನು ಟ್ರೇಲಿಂಗ್ ಮತ್ತು ರೋಲಿಂಗ್ ರಿಟರ್ನ್ಸ್‌ ಎಂದರೇನು?

ಮ್ಯೂಚುವಲ್ ಫಂಡ್‌ಗಳನ್ನು ಟ್ರೇಲಿಂಗ್ ಮತ್ತು ರೋಲಿಂಗ್ ರಿಟರ್ನ್ಸ್‌ ಎಂದರೇನು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆಯನ್ನು ಸಾಮಾನ್ಯವಾಗಿ ರಿಟರ್ನ್ಸ್ ಅಥವಾ ಕಾರ್ಯಕ್ಷಮತೆ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ. ಮ್ಯೂಚುವಲ್ ಫಂಡ್‌ಗಳನ್ನು ಮೌಲ್ಯೀಕರಿಸಲು ಬಳಸಲಾಗುವ ಎರಡು ಅತ್ಯಂತ ಪ್ರಮುಖ ಕಾರ್ಯಕ್ಷಮತೆ ಮಾನದಂಡಗಳೆಂದರೆ:

(ಎ) ಟ್ರೇಲಿಂಗ್ ರಿಟರ್ನ್ಸ್‌
(ಬಿ) ರೋಲಿಂಗ್ ರಿಟರ್ನ್ಸ್‌

ಹೀಗಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ ರಿಟರ್ನ್ಸ್ ಅನ್ನು ಲೆಕ್ಕಾಚಾರ ಮಾಡಲು ವಿಶಾಲವಾಗಿ ಬಳಸುವ ಎರಡು ವಿಧಾನಗಳ ಹಿಂದಿನ ಪರಿಕಲ್ಪನೆಗಳನ್ನು ಮತ್ತು ಅವುಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ನಾವು ಅರ್ಥ ಮಾಡಿಕೊಳ್ಳೋಣ. ಸ್ಕೀಮ್ ಅದರ ಬೆಂಚ್‌ಮಾರ್ಕ್‌ಗೆ ಹೋಲಿಕೆ ಮಾಡಿದಾಗ ಸ್ಕೀಮ್‌ ಪ್ರಕಾರ ಹೆಚ್ಚು ಕಾರ್‍ಯಕ್ಷಮತೆ ಹೊಂದಿರುತ್ತದೆ ಅಥವಾ ಕಡಿಮೆ ಕಾರ್ಯಕ್ಷಮತೆ ಹೊಂದಿರುತ್ತದೆ ಎಂದು ಸ್ಕೀಮ್‌ನ ರಿಟರ್ನ್ಸ್‌ ಅನ್ನು ಲೆಕ್ಕ ಮಾಡುತ್ತದೆ.

ಟ್ರೇಲಿಂಗ್ ರಿಟರ್ನ್ಸ್‌:
ಎರಡು ನಿರ್ದಿಷ್ಟ ದಿನಾಂಕಗಳ ಮಧ್ಯೆ ಒಂದು ಫಂಡ್ ಹೇಗೆ ಕಾರ್ಯನಿರ್ವಹಿಸಿದೆ ಎಂಬುದನ್ನು ಅಳೆಯುವುದಕ್ಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಟ್ರೇಲಿಂಗ್ ರಿಟರ್ನ್ಸ್‌ ಎಂಬುದು ಒಂದು ವಿಧಾನವಾಗಿದೆ. ಟ್ರೇಲಿಂಗ್ ರಿಟರ್ನ್ಸ್ ಅನ್ನು ಸಾಮಾನ್ಯವಾಗಿ “ಪಾಯಿಂಟ್‌ ಟು ಪಾಯಿಂಟ್‌” ರಿಟರ್ನ್ಸ್ ಎಂದೂ ಕರೆಯಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ಫಂಡ್‌ನ ಪರ್ಫಾರ್ಮೆನ್ಸ್‌ನ ಸಂಕ್ಷಿಪ್ತ ಅವಲೋಕನವನ್ನು ಅವು ನೀಡುತ್ತವೆ. ಇವುಗಳನ್ನು ವಿವಿಧ ಕಾಲಾವಧಿಯಲ್ಲಿ ಲೆಕ್ಕ ಮಾಡಬಹುದು. ಉದಾಹರಣೆಗೆ, ಈ ದಿನಾಂಕದಿಂದ ಹಿಂದಿನ ಒಂದು ವರ್ಷದವರೆಗೆ (ವೈಟಿಡಿ), ಒಂದು ವರ್ಷ, ಮೂರು ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಲೆಕ್ಕ ಮಾಡಬಹುದು ಅಥವಾ ಫಂಡ್‌ನ ಆರಂಭದಿಂದ ಈ ದಿನದವರೆಗಿನ ಅವಧಿಯಲ್ಲೂ ಲೆಕ್ಕ ಮಾಡಬಹುದು.  

ರೋಲಿಂಗ್ ರಿಟರ್ನ್ಸ್‌:
ರೋಲಿಂಗ್ ರಿಟರ್ನ್ಸ್ ಅನ್ನು ಸಾಮಾನ್ಯವಾಗಿ “ರೋಲಿಂಗ್ ಪೀರಿಯಡ್ ರಿಟರ್ನ್ಸ್” ಅಥವಾ “ರೋಲಿಂಗ್ ಟೈಮ್ ಪೀರಿಯಡ್ಸ್” ಎಂದೂ ಕರೆಯಲಾಗುತ್ತದೆ. ನಿರ್ದಿಷ್ಟ ವರ್ಷದ ಕೊನೆಯಲ್ಲಿ, ನಿರ್ದಿಷ್ಟ ಕಾಲಾವಧಿಯಲ್ಲಿ ಲೆಕ್ಕ ಮಾಡಿದ ಸರಾಸರಿ ವಾರ್ಷಿಕಗೊಳಿಸಿದ ರಿಟರ್ನ್ಸ್ ಅನ್ನು ಇದು ಸೂಚಿಸುತ್ತದೆ. ಹೂಡಿಕೆದಾರರ ಹಿಡುವಳಿ ಅವಧಿಯ ನಿಜವಾದ ಅನುಭವಗಳನ್ನು ಪ್ರತಿಬಿಂಬಿಸುವ, ಕಾಲಾನಂತರದಲ್ಲಿ ಮ್ಯೂಚುಯಲ್ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಮೌಲ್ಯಮಾಪನ ಮಾಡುವ ಅಮೂಲ್ಯವಾದ ವಿಧಾನವನ್ನು ಅವರು ನೀಡುತ್ತಾರೆ. ಪೋರ್ಟ್‌ಫೋಲಿಯೊ ಅಥವಾ ಫಂಡ್‌ನ ರೋಲಿಂಗ್ ರಿಟರ್ನ್ಸ್ ಮೌಲ್ಯಮಾಪನವು ಅದರ ಇತಿಹಾಸದಲ್ಲಿ ವಿಭಿನ್ನ ಸಮಯದ ಮಧ್ಯಂತರಗಳಲ್ಲಿ ಸುಗಮವಾದ ಕಾರ್ಯಕ್ಷಮತೆಯ ದೃಷ್ಟಿಕೋನವನ್ನು ಒದಗಿಸುತ್ತದೆ.

ಮ್ಯೂಚುವಲ್ ಫಂಡ್‌ಗಳ ರೋಲಿಂಗ್ ರಿಟರ್ನ್ಸ್‌ ಅನ್ನು ಲೆಕ್ಕ ಮಾಡಲು, ವಿವಿಧ ಓವರ್‌ಲ್ಯಾಪ್ ಆಗುವ ಕಾಲಾವಧಿಯಲ್ಲಿ ನೀವು ಫಂಡ್‌ನ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿ ದಿನ, ಪ್ರತಿ ವಾರ ಅಥವಾ ತಿಂಗಳಿನ ಕಾಲಾವಧಿಯಲ್ಲಿ ಇದನ್ನು ಮಾಡಬೇಕಾಗುತ್ತದೆ ಮತ್ತು ಈ ಪ್ರತಿ ಅವಧಿಗೂ ಸರಾಸರಿ ವಾರ್ಷಿಕಗೊಳಿಸಿದ ರಿಟರ್ನ್ಸ್‌ ಅನ್ನು ಲೆಕ್ಕ ಮಾಡಬೇಕಾಗುತ್ತದೆ. 

ಅಂತಿಮವಾಗಿ, ಟ್ರೇಲಿಂಗ್ ರಿಟರ್ನ್ಸ್‌ ಎಂಬುದು ನಿರ್ದಿಷ್ಟ ಅವಧಿಗೆ ಫಂಡ್‌ ಈ ಹಿಂದೆ ಹೇಗೆ ಕಾರ್ಯನಿರ್ವಹಿಸಿತ್ತು ಎಂಬುದನ್ನು ಅಳೆಯುತ್ತದೆ ಮತ್ತು ರೋಲಿಂಗ್ ರಿಟರ್ನ್ಸ್‌ ಎಂಬುದು ವಿವಿಧ ಓವರ್‌ಲ್ಯಾಪ್ ಆದ ಕಾಲಾವಧಿಯಲ್ಲಿ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವ ಮೂಲಕ ಇನ್ನಷ್ಟು ಡೈನಾಮಿಕ್ ಆದ ದೃಷ್ಟಿಕೋನವನ್ನು ಒದಗಿಸುತ್ತದೆ. ಈ ಮೆಟ್ರಿಕ್‌ಗಳು ಹೂಡಿಕೆದಾರರಿಗೆ ಫಂಡ್‌ನ ಸ್ಥಿರತೆ ಮತ್ತು ಮ್ಯೂಚುಯಲ್ ಫಂಡ್‌ನ ಭವಿಷ್ಯದ ಆದಾಯದ ಸಾಮರ್ಥ್ಯವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.

ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

285
ನಾನು ಹೂಡಿಕೆ ಮಾಡಲು ಸಿದ್ಧ