ಬೆಳವಣಿಗೆ ಮತ್ತು ಲಾಭಾಂಶ ಆಯ್ಕೆಗಳ ನಡುವಿನ ವ್ಯತ್ಯಾಸವೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ದೀರ್ಘಕಾಲದಲ್ಲಿ ಸಂಪತ್ತು ಸೃಷ್ಟಿ ಮಾಡುವ ಉದ್ದೇಶದಿಂದ ಕೆಲವು ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಅವರು ಹೂಡಿಕೆ ಆರಂಭಿಸುತ್ತಾರೆ. ಆದರೆ, ಇನ್ನೂ ಕೆಲವು ಹೂಡಿಕೆದಾರರು ತಮ್ಮ ನಿವೃತ್ತಿ ಸಮೀಪಿಸುತ್ತಿರುವಾಗ ಹೂಡಿಕೆ ಮಾಡುತ್ತಾರೆ ಅಥವಾ ನಿವೃತ್ತಿ ನಿಧಿಯನ್ನು ಹೂಡಿಕೆ ಮಾಡುತ್ತಾರೆ. ಇದು ಅವರಿಗೆ ನಿವೃತ್ತಿ ಜೀವನದ ಸಮಯದಲ್ಲಿ ಮತ್ತೊಂದು ಆದಾಯದ ಮೂಲವಾಗಿ ಕೆಲಸ ಮಾಡುತ್ತದೆ. ಈ ಎರಡು ವಿಭಿನ್ನ ಹೂಡಿಕೆ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ಎರಡು ಆಯ್ಕೆಗಳನ್ನು ಮ್ಯೂಚುವಲ್ ಫಂಡ್ಗಳು ಒದಗಿಸುತ್ತವೆ. 

ಬೆಳವಣಿಗೆ ಆಯ್ಕೆಯು, ಫಂಡ್ಗಳಿಸಿದ ಲಾಭವನ್ನು ಮರುಹೂಡಿಕೆ ಮಾಡಿ, ಇದರಲ್ಲಿ ಸೆಕ್ಯುರಿಟಿಗಳು ಇನ್ನಷ್ಟು ಬೆಳೆಯಲು ಮತ್ತು ಫಂಡ್ ಮೌಲ್ಯ ಹೆಚ್ಚಾಗಲು ಅನುವು ಮಾಡುತ್ತದೆ. ಬೆಳವಣಿಗೆ ಪ್ಲಾನ್ಹೆಚ್ಚು ಎನ್ಎವಿ ಹೊಂದಿದ್ದು, ಸೆಕ್ಯುರಿಟಿಗಳಿಂದ ಪಡೆದ ಪ್ರಯೋಜನಗಳನ್ನು ಸ್ಕೀಮ್ಗೆ ವಾಪಸು ಒದಗಿಸುವುದರಿಂದ, ಸಂಚಯದ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ.

ಡಿವಿಡೆಂಡ್ ಪ್ಲಾನ್ನಲ್ಲಿ ಫಂಡ್ಮಾಡಿದ ಲಾಭವನ್ನು ಡಿವಿಡೆಂಡ್ ರೂಪದಲ್ಲಿ, ಫಂಡ್ ಮ್ಯಾನೇಜರ್ನ ವಿವೇಚನೆಗೆ ಒಳಪಟ್ಟು ಕಾಲಕಾಲಕ್ಕೆ ವಿತರಿಸುತ್ತದೆ.  ಡಿವಿಡೆಂಡ್ ಪಾವತಿ ಗ್ಯಾರಂಟಿ ಇಲ್ಲದಿದ್ದರೂ, ನಿಮ್ಮ ಆದಾಯಕ್ಕೆ ಹೆಚ್ಚುವರಿಯಾಗಿ ಪೂರಕವಾಗಿರುತ್ತದೆ. ಒಂದು ಡಿವಿಡೆಂಡ್ಪ್ಲಾನ್ನಲ್ಲಿ, ಡಿವಿಡೆಂಡ್ ಮರುಹೂಡಿಕೆ ಆಯ್ಕೆಯನ್ನು ಹೂಡಿಕೆದಾರರು ಆಯ್ಕೆ ಮಾಡಿದರೆ ಹೆಚ್ಚುವರಿ ಯೂನಿಟ್ಗಳು ಸಿಗುತ್ತವೆ. ಆದರೆ, ಡಿವಿಡೆಂಡ್ ಪೇಔಟ್ ಆಯ್ಕೆಯನ್ನು ಮಾಡಿದರೆ ಅವರಿಗೆ ಹೆಚ್ಚುವರಿ ಆದಾಯದ ಮೂಲ ಲಭ್ಯವಾಗುತ್ತದೆ.

2020 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಡಿವಿಡೆಂಡ್‌ಗಳ ಮೇಲೆ ಹೂಡಿಕೆದಾರರಿಗೆ ತೆರಿಗೆ ವಿಧಿಸಲಾಗುತ್ತದೆ. ಹೂಡಿಕೆದಾರರು ತಮ್ಮ ಆದಾಯ ತೆರಿಗೆ ಬ್ರ್ಯಾಕೆಟ್‌ಗೆ ಒಳಪಟ್ಟು ಮ್ಯೂಚುವಲ್‌ ಫಂಡ್‌ನಿಂದ ಗಳಿಸಿದ ಡಿವಿಡೆಂಡ್‌ ಮೇಲೆ ತೆರಿಗೆ ಪಾವತಿ ಮಾಡಬೇಕು.

ಡಿವಿಡೆಂಡ್ ಆಯ್ಕೆಯಲ್ಲಿ ನೀವು ಹೆಚ್ಚುವರಿ ತೆರಿಗೆ ಹೊರೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲವಾದರೂ, ಒಂದು ಆಯ್ಕೆಯ ಬದಲಿಗೆ ಇನ್ನೊಂದು ಆಯ್ಕೆಯನ್ನು ಆರಿಸಿಕೊಳ್ಳುವ ನಿರ್ಧಾರವು ಪ್ರಾಥಮಿಕವಾಗಿ ನಿಮ್ಮ ಹಣಕಾಸು ಗುರಿಗಳು/ಅಗತ್ಯಗಳನ್ನು ಆಧರಿಸಿರಬೇಕು.

 

436
ನಾನು ಹೂಡಿಕೆ ಮಾಡಲು ಸಿದ್ಧ