ಭಾರತದಲ್ಲಿನ ಮ್ಯೂಚುವಲ್ ಫಂಡ್‌ಗಳಲ್ಲಿ ಎನ್‌ಆರ್‌ಐ(NRI)ಗಳು ಹೂಡಿಕೆ ಮಾಡಬಹುದೇ?

ಭಾರತದಲ್ಲಿನ ಮ್ಯೂಚುವಲ್ ಫಂಡ್‌ಗಳಲ್ಲಿ ಎನ್‌ಆರ್‌ಐ(NRI)ಗಳು ಹೂಡಿಕೆ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮಾಡಬಹುದು. ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮತ್ತು ಸಾಗರೋತ್ತರ ಭಾರತೀಯರು (ಪಿಐಒ) ಸಂಪೂರ್ಣ ರಿಪಾಟ್ರಿಯೇಶನ್‌ ಹಾಗೂ ನಾನ್ ರಿಪಾಟ್ರಿಯೇಶನ್ ಆಧಾರದಲ್ಲಿ ಹೂಡಿಕೆ ಮಾಡಬಹುದು.

ಆದರೆ ಹೂಡಿಕೆಗೂ ಮೊದಲು ಕೆವೈಸಿ ಸೇರಿದಂತೆ ಎಲ್ಲ ನಿಯಂತ್ರಕ ಅಗತ್ಯಗಳನ್ನು ಪೂರೈಸಿರಬೇಕು. ಆದರೆ ಕೆಲವು ದೇಶಗಳಾದ ಯುಎಸ್‌ ಮತ್ತು ಕೆನಡಾ, ಸೂಕ್ತ ಬಹಿರಂಗಗೊಳಿಸುವಿಕೆ ಇಲ್ಲದೇ ಮ್ಯೂಚುವಲ್‌ ಫಂಡ್‌ಗಳಲ್ಲಿ ಎನ್‌ಆರ್‌ಐಗಳು ಹೂಡಿಕೆ ಮಾಡುವುದರ ಮೇಲೆ ನಿರ್ಬಂಧ ಹೇರಿವೆ. ಈ ದೇಶಗಳ ಎನ್‌ಆರ್‌ಐ(NRI)ಗಳು, ವಾಸ್ತವವಾಗಿ ಹೂಡಿಕೆ ಮಾಡುವ ಮೊದಲು ಭಾರತೀಯ ನಿಧಿಗಳಲ್ಲಿ ಹೂಡಿಕೆ ಮಾಡುವ ಕಾರ್ಯಸಾಧ್ಯತೆಯ ಕುರಿತು ತಮ್ಮ ಹಣಕಾಸು ತಜ್ಞರೊಂದಿಗೆ ಒಮ್ಮೆ ಪರಿಶೀಲಿಸಬೇಕಾಗುತ್ತದೆ.

ಹೂಡಿಕೆ ವಿಚಾರದಲ್ಲಿ ಸಾಮಾನ್ಯ ಭಾರತೀಯರಿಗೆ ಇರುವ ಬಹುತೇಕ ಎಲ್ಲ ಸೌಲಭ್ಯಗಳು ಮತ್ತು ಅನುಕೂಲಗಳನ್ನೂ ಎನ್‌ಆರ್‌ಐಗಳಿಗೆ ಒದಗಿಸಲಾಗಿದೆ. ಅವರು ಎಸ್‌ಐಪಿಗಳ ಮೂಲಕ ಹೂಡಿಕೆ ಮಾಡಬಹುದು, ತಮ್ಮ ಅನುಕೂಲಕ್ಕೆ ತಕ್ಕಂತೆ ಅವರು ಬದಲಾವಣೆ ಮಾಡಬಹುದು, ಗ್ರೋತ್ ಅಥವಾ ಡಿವಿಡೆಂಡ್ ಆಯ್ಕೆಗಳನ್ನು ಪಡೆಯಬಹುದು ಮತ್ತು ಬಯಸಿದಾಗ ರಿಡೆಂಪ್ಷನ್ ಪ್ರಕ್ರಿಯೆಯನ್ನು ರಿಪಾಟ್ರಿಯೇಟ್ ಮಾಡಬಹುದು.

ಹೀಗಾಗಿ ಎನ್‌ಆರ್‌ಐ ಮತ್ತು ಪಿಐಒಗಳು ಭಾರತದ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.

438
ನಾನು ಹೂಡಿಕೆ ಮಾಡಲು ಸಿದ್ಧ