ರಿಸ್ಕ್ ತಾಳಿಕೊಳ್ಳುವಿಕೆ ಶಕ್ತಿಯನ್ನು ಆಧರಿಸಿ ಫಂಡ್ ಆಯ್ಕೆ ಮಾಡುವುದು ಹೇಗೆ

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ಫಂಡ್ಗಳು ಮಾರ್ಕೆಟ್ಗೆ ಲಿಂಕ್ ಆಗಿರುವ ಪ್ರಾಡಕ್ಟ್(ಉತ್ಪನ್ನ) ಗಳಾಗಿದ್ದು, ವಿವಿಧ ರೀತಿಯ ರಿಸ್ಕ್ಗಳನ್ನು ಹೊಂದಿರುತ್ತವೆ ಮತ್ತು ಅವುಗಳ ರಿಟರ್ನ್ಗೆ ಗ್ಯಾರಂಟಿ ಇರುವುದಿಲ್ಲ. ಉತ್ತಮ ಮ್ಯೂಚುವಲ್ಫಂಡ್ ಆಯ್ಕೆಯಲ್ಲಿ, ಕೇವಲ ಅದರ ಹೂಡಿಕೆ ಉದ್ದೇಶ, ರಿಟರ್ನ್ ಸಾಧ್ಯತೆಯನ್ನಷ್ಟೇ ನೋಡುವುದಲ್ಲ. ಅದರ ರಿಸ್ಕ್ನ ಮೌಲ್ಯಮಾಪನವನ್ನೂ ಮಾಡಬೇಕಾಗುತ್ತದೆ. ರಿಸ್ಕ್ನ ಆದ್ಯತೆ ಸೇರಿದಂತೆ ಪ್ರತಿ ಹೂಡಿಕೆದಾರರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವುದರಿಂದ, ಮ್ಯೂಚುವಲ್ಫಂಡ್ಗಳ ಆಯ್ಕೆಯು ಪ್ರತಿ ಹೂಡಿಕೆದಾರರಿಗೂ ವಿಶಿಷ್ಟವಾಗಿರುತ್ತದೆ. ರಿಸ್ಕ್ ಆದ್ಯತೆಯನ್ನು ಹೊರತುಪಡಿಸಿ, ಪ್ರತಿ ಹೂಡಿಕೆದಾರರಿಗೂ ಕೆಲವು ಗುರಿಗಳು ಮನಸಲ್ಲಿರುತ್ತವೆ. ಮೌಲ್ಯ ಅಥವಾ ಕಾಲಕ್ಕೆ ಸಂಬಂಧಿಸಿದಂತೆ ಅವು ವಿಶಿಷ್ಟವಾಗಿರಬಹುದು. ಹೀಗಾಗಿ, ಸರಿಯಾದ ಮ್ಯೂಚುವಲ್ಫಂಡ್ ಆಯ್ಕೆ ಮಾಡುವುದಕ್ಕೆ ರಿಸ್ಕ್ ರಿಟರ್ನ್ ಟೈಮ್ ಹೊರೈಝನ್ ಮೆಟ್ರಿಕ್ ಬಗ್ಗೆ ವಿವಿಧ ಫಂಡ್ಗಳನ್ನು ಮೌಲೀಕರಿಸಬೇಕಾಗುತ್ತದೆ.

ಒಂದು ಉದಾಹರಣೆಯೊಂದಿಗೆ ಇದನ್ನು ಅರ್ಥ ಮಾಡಿಕೊಳ್ಳಿ.  30 ವರ್ಷದ ವ್ಯಕ್ತಿ ಮತ್ತು 50 ವರ್ಷದ ವ್ಯಕ್ತಿಯಿಬ್ಬರೂ ನಿವೃತ್ತಿಗಾಗಿ ಹೂಡಿಕೆ ಮಾಡುತ್ತಿರಬಹುದು. ಆದರೆ, ಅವರ ಆಯ್ಕೆಯ ಫಂಡ್ಗಳು ವಿಭಿನ್ನವಾಗಿರುತ್ತವೆ. 30 ವರ್ಷದ ವ್ಯಕ್ತಿ ಹೆಚ್ಚು ರಿಸ್ಕ್ತೆಗೆದುಕೊಳ್ಳಬಲ್ಲ. ಯಾಕೆಂದರೆ, ಆತನಿಗೆ 25-30 ವರ್ಷಗಳು ಬಾಕಿ ಇರುತ್ತವೆ. ಆದರೆ, 50 ವರ್ಷದ ವ್ಯಕ್ತಿ ತನ್ನ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ಹೊಂದಿರಬೇಕು. ಯಾಕೆಂದರೆ, ಆತನ ಗುರಿ ಸಾಧಿಸಲು ಕೇವಲ 8-10 ವರ್ಷಗಳು ಬಾಕಿ ಇರುತ್ತವೆ. 

ನಿಮ್ಮ ರಿಸ್ಕ್ ತಾಳಿಕೊಳ್ಳುವ ಶಕ್ತಿಗೆ ಹೋಲಿಕೆಯಾಗುವ ರಿಸ್ಕ್ ಪ್ರೊಫೈಲ್ ಇರುವ ಫಂಡ್ ಆಯ್ಕೆ ಮಾಡಿಕೊಳ್ಳಿ. ನೀವು ಕಡಿಮೆ ರಿಸ್ಕ್ ಆಯ್ಕೆ ಮಾಡಿಕೊಂಡರೆ, ಡೆಟ್ ಫಂಡ್ ಆಯ್ಕೆ ಮಾಡಿ. ರಿಸ್ಕ್ ತೆಗೆದುಕೊಳ್ಳಲು ನಿಮಗೆ ತೊಂದರೆ ಇಲ್ಲದಿದ್ದರೆ, ಸೂಕ್ತವಾದ ಈಕ್ವಿಟಿ ಫಂಡ್ ಅನ್ನು ನೋಡಿ. ಮಧ್ಯಮ ಪ್ರಮಾಣದ ರಿಸ್ಕ್ಇರಲಿ ಎಂದಾದರೆ, ಹೈಬ್ರಿಡ್ ಫಂಡ್ಪರಿಗಣಿಸಿ. ಈ ಮೂಲಕ, ಫಂಡ್ ಆಯ್ಕೆಯಲ್ಲಿ ಮೊದಲ ಹೆಜ್ಜೆಯೇ ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಸಮ್ಮತಿಸುತ್ತೀರಿ ಎಂಬುದಾಗಿರುತ್ತದೆ.

434
ನಾನು ಹೂಡಿಕೆ ಮಾಡಲು ಸಿದ್ಧ