ಪ್ರಸ್ತುತ, ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ಗಳ ಡಿವಿಡೆಂಡ್ಗಳ ಮೇಲೆ ತೆರಿಗೆ ವಿಧಿಸಲಾಗುತ್ತಿಲ್ಲ. ತಾವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ಗಳಿಂದ ಡಿವಿಡೆಂಡ್ ಆದಾಯ ಬಂದಾಗ ಅದರ ಮೇಲೆ ಹೂಡಿಕೆದಾರರು ತೆರಿಗೆ ಪಾವತಿ ಮಾಡಬೇಕಿಲ್ಲ. ಫಂಡ್ ಹೌಸ್ಗಳೇ ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ (ಡಿಡಿಟಿ) ಅನ್ನು ಫಂಡ್ನ ಲಾಭದಿಂದ ಕಡಿತಗೊಳಿಸಿಕೊಂಡು, ನಿವ್ವಳ ಡಿಸ್ಟ್ರಿಬ್ಯೂಟಬಲ್ ಸರ್ಪ್ಲಸ್ ಅನ್ನು ಲೆಕ್ಕ ಮಾಡುತ್ತವೆ. ಈ ಮೊತ್ತವನ್ನು ಡಿವಿಡೆಂಡ್ ಆಪ್ಷನ್ ಆಯ್ಕೆ ಮಾಡಿಕೊಂಡ ಎಲ್ಲ ಹೂಡಿಕೆದಾರರಿಗೆ ಅವರ ಫಂಡ್ನಲ್ಲಿರುವ ಯೂನಿಟ್ಗಳಿಗೆ ಅನುಗುಣವಾಗಿ ಹಂಚುತ್ತವೆ.
ಒಂದು ವೇಳೆ ಹೂಡಿಕೆದಾರರು ಡಿವಿಡೆಂಡ್ ಆಪ್ಷನ್ ಅನ್ನು ಆಯ್ಕೆ ಮಾಡದೇ, ಗ್ರೋತ್ ಆಪ್ಷನ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಆತನಿಗೆ ಡಿಡಿಟಿ ಪರಿಣಾಮ ಬೀರುವುದಿಲ್ಲ. ಈ ಪ್ರಕರಣದಲ್ಲಿ, ಫಂಡ್ ಮಾಡಿದ ಲಾಭವನ್ನು (ಇದನ್ನು ಡಿಸ್ಟ್ರಿಬ್ಯೂಟಬಲ್ ಸರ್ಪ್ಲಸ್ ಎಂದೂ ಕರೆಯಲಾಗುತ್ತದೆ) ಪುನಃ ಹೂಡಿಕೆ ಮಾಡಿ ಫಂಡ್ನ ಅಸೆಟ್ ಬೇಸ್ ಅನ್ನು ಬೆಳೆಸಲಾಗುತ್ತದೆ. ಹೀಗಾಗಿ, ಗ್ರೋತ್ ಸ್ಕೀಮ್ನ ಹೂಡಿಕೆದಾರರಿಗೆ ಯೂನಿಟ್ಗಳ ಸಂಖ್ಯೆ ಸಮಾನವಾಗಿದ್ದರೂ, ಎನ್ಎವಿಯಲ್ಲಿ ಹೆಚ್ಚಳವಾಗುವುದು ಕಾಣಿಸುತ್ತದೆ. ಲಾಭವನ್ನು ಫಂಡ್ನಲ್ಲಿ ಪುನಃ ಹೂಡಿಕೆ ಮಾಡುವುದರಿಂದ ದೀರ್ಘ ಕಾಲದ ಲಾಭದಲ್ಲಿ ಹೆಚ್ಚಳವನ್ನು ಗ್ರೋತ್ ಆಪ್ಷನ್ ಪಡೆದ ಹೂಡಿಕೆದಾರರು ಪಡೆಯುತ್ತಾರೆ.
ಫಂಡ್ ಘೋಷಿಸಿದ ಡಿವಿಡೆಂಡ್ ಅನ್ನು ಪುನಃ ಹೂಡಿಕೆ ಮಾಡಲು ಡಿವಿಡೆಂಡ್ ಮರು ಹೂಡಿಕೆಯು ಹೂಡಿಕೆದಾರರಿಗೆ ಅವಕಾಶ ಮಾಡುತ್ತದೆ. ಆದರೆ ಗ್ರೋತ್ ಆಪ್ಷನ್ ಹೂಡಿಕೆದಾರರು ಪಡೆಯುವ ಎನ್ಎವಿ ಹೆಚ್ಚಳಕ್ಕಿಂತ ಮರುಹೂಡಿಕೆ ಮಾಡಿದ ಡಿವಿಡೆಂಡ್ ಮೊತ್ತವು ಕಡಿಮೆ ಇರುತ್ತದೆ. ಯಾಕೆಂದರೆ ಡಿಡಿಟಿ ಕಳೆಯುವ ಮೂಲಕ ಮಾತ್ರವೇ ಎಲ್ಲ ಡಿವಿಡೆಂಡ್ಗಳನ್ನೂ ಘೋಷಣೆ ಮಾಡಲಾಗಿರುತ್ತದೆ. ನೀವು ದೀರ್ಘಕಾಲೀನ ಹೂಡಿಕೆದಾರರಾಗಿದ್ದರೆ, ಡಿವಿಡೆಂಡ್ ಮರುಹೂಡಿಕೆಯ ಬದಲಿಗೆ ಗ್ರೋತ್ ಆಪ್ಷನ್ ಅನ್ನು ಪಡೆಯಿರಿ.