ಮ್ಯೂಚುವಲ್ ಫಂಡ್ ಪರ್ಫಾರ್ಮೆನ್ಸ್ಗೆ ಡ್ಯಾಶ್ಬೋರ್ಡ್ ಲಭ್ಯವಿದೆಯೆ?

Video
Check SCHEME Performance

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೂಡಿಕೆ ಮಾಡುವಾಗ, ನಾವು ಎಷ್ಟು ಗಳಿಸುತ್ತೇವೆ ಎಂಬುದನ್ನು ಕೇಳುವುದು ಅತ್ಯಂತ ಸಹಜ. ಫಿಕ್ಸೆಡ್ ಡೆಪಾಸಿಟ್ಗಳು ಮತ್ತು ಇತರ ಸಾಂಪ್ರದಾಯಿಕ ಉಳಿತಾಯ ಸ್ಕೀಮ್ಗಳ ವಿಚಾರದಲ್ಲಿ ಉತ್ತರ ಸ್ಪಷ್ಟವಾಗಿದ್ದರೂ, ಮ್ಯೂಚುವಲ್ ಫಂಡ್ಗಳ ವಿಚಾರದಲ್ಲಿ ಹೀಗಾಗದು. ಸಾಂಪ್ರದಾಯಿಕ ಉಳಿತಾಯ ಸ್ಕೀಮ್ಗಳು ನಮಗೆ ತಿಳಿದಿರುವಂತೆ ಖಚಿತ ರಿಟರ್ನ್ ದರವನ್ನು ಒದಗಿಸುತ್ತವೆ. ಹೀಗಾಗಿ ಈ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಸುಲಭ. ಆದರೆ, ಮ್ಯೂಚುವಲ್ ಫಂಡ್ಗಳಲ್ಲಿ ನೂರಾರು ಸ್ಕೀಮ್ಗಳಿದ್ದು, ಎಲ್ಲವನ್ನೂ ಮನುಷ್ಯರು ತಿಳಿದುಕೊಂಡಿರುವುದು ಸಾಧ್ಯವೇ ಇಲ್ಲ.

ಈ ಸನ್ನಿವೇಶದಲ್ಲಿ ಫಂಡ್ ಪರ್ಫಾರ್ಮೆನ್ಸ್ ಡ್ಯಾಶ್ಬೋರ್ಡ್ ಚಾಲ್ತಿಗೆ ಬರುತ್ತದೆ. ಫಂಡ್ ಪರ್ಫಾರ್ಮೆನ್ಸ್ ಡ್ಯಾಶ್ಬೋರ್ಡ್ ಎಂಬುದು ಎಲ್ಲ ಫಂಡ್ಗಳ ವರದಿಯಂತಿರುತ್ತದೆ. ಸಂಬಂಧಿಸಿದ ಬೆಂಚ್ ಮಾರ್ಕ್ಗಳು, ಇತ್ತೀಚಿನ ಎನ್ಎವಿ ಮತ್ತು ನಿತ್ಯದ ಎಯುಎಂ ಆಧರಿಸಿ ಹಿಂದಿನ ಪರ್ಫಾರ್ಮೆನ್ಸ್ ಅನ್ನು ಒಂದೇ ಸ್ಥಳದಲ್ಲಿ ನೀವು ನೋಡಬಹುದು. ಪರ್ಫಾರ್ಮೆನ್ಸ್ ಹೋಲಿಕೆ ದೃಷ್ಟಿಯಿಂದ ಇಂತಹ ಡ್ಯಾಶ್ಬೋರ್ಡ್ನಿಮ್ಮ ಕೆಲಸವನ್ನು ಸುಲಭವಾಗಿಸುತ್ತವೆ. ಆದರೆ, ನಿಮ್ಮ ಆಯ್ಕೆಗೆ ಇದೊಂದೇ ಆಧಾರವಾಗಿರಬಾರದು. ನಿಮ್ಮ ಹೂಡಿಕೆಗೆ ಸರಿಯಾದ ಫಂಡ್ ಆಯ್ಕೆ ಮಾಡುವುದಕ್ಕೆ ಹಲವು ಅಂಶಗಳಿವೆ. ಉದಾಹರಣೆಗೆ, ಫಂಡ್ನ ವಿಧ, ಫಂಡ್ಹೂಡಿಕೆ ಉದ್ದೇಶ, ಅದರ ರಿಸ್ಕ್ ಮಟ್ಟ ಮತ್ತು ನಿಮ್ಮ ರಿಸ್ಕ್ ತಾಳಿಕೊಳ್ಳುವ ಶಕ್ತಿ ಮತ್ತು ಹೂಡಿಕೆ ಗುರಿಗಳಿಗೆ ಸೂಕ್ತತೆ.

ಆದಾಗ್ಯೂ, ಮುಂದಿನ ಬಾರಿ ನೀವು ಫಂಡ್ ಪರ್ಫಾರ್ಮೆನ್ಸ್ ಅನ್ನು ಹೋಲಿಕೆ ಮಾಡುವಾಗ, www.mutualfundssahihai.com ಗೆ ಭೇಟಿ ನೀಡಿ ಮತ್ತು ‘ಮ್ಯೂಚುವಲ್ ಫಂಡ್ ಸ್ಕೀಮ್ಗಳ ಕಾರ್ಯಕ್ಷಮತೆಯನ್ನು ತಿಳಿಯಿರಿ’ ಮೇಲೆ ಕ್ಲಿಕ್ ಮಾಡಿ ಒಂದೇ ಸಮಯದಲ್ಲಿ ಎಲ್ಲ ಫಂಡ್ಗಳ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿ.

436
ನಾನು ಹೂಡಿಕೆ ಮಾಡಲು ಸಿದ್ಧ