ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ರಿಸ್ಕ್‌ಗಳು ಯಾವುವು?

ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ರಿಸ್ಕ್‌ಗಳು ಯಾವುವು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕಡಿಮೆ ವೆಚ್ಚದಲ್ಲಿ ವೈವಿಧ್ಯತೆ ಪ್ರಯೋಜನವನ್ನು ಇಟಿಎಫ್‌ಗಳು ಒದಗಿಸುತ್ತವೆ. ಈ ಪ್ರಯೋಜನಗಳ ಹೊರತಾಗಿಯೂ, ಇಂತಹ ಹೂಡಿಕೆಗಳಲ್ಲಿ ಇರುವ ರಿಸ್ಕ್‌ಗಳನ್ನು ನಾವು ಪರಿಗಣಿಸಬೇಕು. ಮೊದಲನೆಯದಾಗಿ, ಅಂತಾರಾಷ್ಟ್ರೀಯ ಮತ್ತು ಆಕರ್ಷಕ ಇಟಿಎಫ್‌ಗಳೂ ಸೇರಿದಂತೆ ಮಾರ್ಕೆಟ್‌ನಲ್ಲಿ ಹಲವು ರೀತಿಯವುಗಳಿವೆ. ಹೀಗಾಗಿ, ಈ ಇಟಿಎಫ್‌ಗಳ ಜೊತೆಗೆ ಸಹಭಾಗಿತ್ವ ಹೊಂದಿರುವ ರಾಜಕೀಯ ರಿಸ್ಕ್ ಮತ್ತು ಲಿಕ್ವಿಡಿಟಿ ರಿಸ್ಕ್‌ನಂತಹ ಹೆಚ್ಚುವರಿ ರಿಸ್ಕ್‌ ಅನ್ನು ನಿವಾರಿಸುವುದಕ್ಕಾಗಿ, ನಿಮ್ಮ ಅಗತ್ಯವನ್ನು ಪೂರೈಸಲು ಸರಿಯಾದ ಇಟಿಎಫ್ ಅನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ. ಇಟಿಎಫ್‌ಗಳು ತಮ್ಮ ಹೋಲ್ಡಿಂಗ್‌ಗಳನ್ನು ಆಧರಿಸಿ ಕೌಂಟರ್‌ಪಾರ್ಟಿ ರಿಸ್ಕ್ ಮತ್ತು ಕರೆನ್ಸಿ ರಿಸ್ಕ್‌ಗೂ ತೆರೆದುಕೊಳ್ಳಬಹುದು.

ಇಟಿಎಫ್‌ಗಳು ಯಾವುದರಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಪೋರ್ಟ್‌ಫೋಲಿಯೋದಿಂದ ಗಳಿಸಿದ ಬಂಡವಾಳವನ್ನು ಹೇಗೆ ಅವು ವಿತರಿಸುತ್ತವೆ ಎಂಬುದನ್ನು ಅಧರಿಸಿ ಇಟಿಎಫ್‌ಗಳು ವಿಭಿನ್ನ ರಚನೆಯನ್ನು ಹೊಂದಿರಬಹುದು. ಇದು ಹೂಡಿಕೆದಾರರ ತೆರಿಗೆ ಬಾಧ್ಯತೆಯ ಮೇಲೆ ಬಾಧಿಸಬಹುದು. ಉದಾಹರಣೆಗೆ, ವಿನಿಮಯವನ್ನು ಬಳಸುವ ಇಟಿಎಫ್‌ಗಳು ಅಂತಿಮ ಹೂಡಿಕೆದಾರರಿಗೆ ಬಂಡವಾಳ ಗಳಿಕೆಗಳನ್ನು ವಿತರಿಸುವುದಿಲ್ಲ. ಡಿರೈವೇಟಿವ್‌ಗಳು ಅಥವಾ ಕಮಾಡಿಟಿಗಳಲ್ಲಿರುವ ಇಟಿಎಫ್‌ಗಳು ಸಂಕೀರ್ಣ ರಚನೆ ಮತ್ತು ತೆರಿಗೆ ಬಾಧ್ಯತೆಗಳನ್ನು ಹೊಂದಿರಬಹುದು. ಈ ಸಂಗತಿಗಳ ಬಗ್ಗೆ ಹೂಡಿಕೆದಾರರಿಗೆ ಅರಿವು ಇಲ್ಲದಿದ್ದರೆ, ಅವರು ಸಿಕ್ಕಿಹಾಕಿಕೊಳ್ಳಬಹುದು.

ಇಟಿಎಫ್‌ಗಳು ವೈವಿಧ್ಯತೆ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ ಸ್ಟಾಕ್‌ಗಳು ಮತ್ತು ಇತರ ಮ್ಯೂಚುವಲ್‌ ಫಂಡ್‌ಗಳ ರೀತಿಯ ಮಾರ್ಕೆಟ್‌ ರಿಸ್ಕ್‌ಗೆ ತೆರೆದುಕೊಳ್ಳಬಹುದು. ಇಟಿಎಫ್‌ ಎಷ್ಟು ಹೆಚ್ಚು ವಿಶಾಲವಾದ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆಯೋ, ಅಷ್ಟೇ ಇದರ ಮಾರ್ಕೆಟ್‌ ರಿಸ್ಕ್ ಕಡಿಮೆ ಇರುತ್ತದೆ. ಆದರೆ ಇದನ್ನು ಸಂಪೂರ್ಣ ನಿವಾರಿಸಲಾಗದು. ಇಟಿಎಫ್‌ಗಳು ಟ್ರ್ಯಾಕಿಂಗ್‌ ದೋಷವನ್ನು ಎದುರಿಸುತ್ತವೆ. ಅಂದರೆ ಅವುಗಳ ರಿಟರ್ನ್‌ ಅಡಕವಾಗಿರುವ ಇಂಡೆಕ್ಸ್‌ನ ರಿಟರ್ನ್‌ಗಿಂತ ಭಿನ್ನವಾಗಿರುತ್ತವೆ. ಯಾಕೆಂದರೆ, ಇಂಡೆಕ್ಸ್ ಹೊಂದಿಲ್ಲದ ಕೆಲವು ವೆಚ್ಚಗಳನ್ನು ಇಟಿಎಫ್ ಹೊಂದಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ