ಸ್ಕೀಮ್ ಸಂಬಂಧಿ ದಾಖಲೆಗಳು ಯಾವುವು? ಈ ದಾಖಲೆಗಳು ಯಾವ ಮಾಹಿತಿಯನ್ನು ಒದಗಿಸುತ್ತವೆ?

ಸ್ಕೀಮ್ ಸಂಬಂಧಿ ದಾಖಲೆಗಳು ಯಾವುವು? ಈ ದಾಖಲೆಗಳು ಯಾವ ಮಾಹಿತಿಯನ್ನು ಒದಗಿಸುತ್ತವೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಲ್ಲ ಮ್ಯೂಚುವಲ್‌ ಫಂಡ್ ಜಾಹೀರಾತುಗಳೂ ಇದನ್ನು ಹೊಂದಿರುತ್ತವೆ: “ಸ್ಕೀಮ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಎಚ್ಚರಿಕೆಯಿಂದ ಓದಿ.” ಈ ದಾಖಲೆಗಳು ಯಾವುವು?

ಇದರಲ್ಲಿ 3 ಪ್ರಮುಖ ದಾಖಲೆಗಳಿರುತ್ತವೆ: ಪ್ರಮುಖ ಮಾಹಿತಿ ಮೆಮೊರಾಂಡಮ್ (ಕೆಐಎಂ), ಸ್ಕೀಮ್‌ ಮಾಹಿತಿ ದಾಖಲೆ (ಎಸ್‌ಐಡಿ) ಮತ್ತು ಹೆಚ್ಚುವರಿ ಮಾಹಿತಿಯ ಹೇಳಿಕೆ (ಎಸ್‌ಎಐ).

ಇದನ್ನು ನಿರ್ದಿಷ್ಟ ಸ್ಕೀಮ್‌ಗಾಗಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (ಎಎಂಸಿ) ಸಿದ್ಧಪಡಿಸುತ್ತದೆ ಮತ್ತು ಅನುಮತಿಗಾಗಿ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (ಸೆಬಿ) ಗೆ ಸಲ್ಲಿಸುತ್ತದೆ.

ಎಸ್‌ಐಡಿಯಲ್ಲಿ ಈ ಮಾಹಿತಿ ಇರುತ್ತದೆ:

  1. ಹೂಡಿಕೆ ಉದ್ದೇಶ ಮತ್ತು ನೀತಿಗಳು, ಅಸೆಟ್ ಅಲೊಕೇಶನ್ ಪ್ಯಾಟರ್ನ್‌, ಫೀ ಮತ್ತು ಲಿಕ್ವಿಡಿಟಿ ಅನುಕೂಲಗಳಂತಹ ಎಲ್ಲ ಮೂಲಭೂತ ಅಂಶಗಳಿರುತ್ತವೆ,
  2. ಫಂಡ್ ಮ್ಯಾನೇಜ್‌ಮೆಂಟ್ ಟೀಮ್‌ ವಿವರಗಳು
  3. ಸ್ಕೀಮ್‌ನಲ್ಲಿ ಎಲ್ಲ ರಿಸ್ಕ್ ಅಂಶಗಳು ಹಾಗೂ ರಿಸ್ಕ್ ನಿವಾರಣೆ ತಂತ್ರಗಳು.
  4. ಲೋಡ್, ಪ್ಲಾನ್‌ಗಳು ಮತ್ತು ಆಯ್ಕೆಗಳು, ಹಿಂದಿನ ಕಾರ್ಯಕ್ಷಮತೆ, ಬೆಂಚ್‌ಮಾರ್ಕ್‌ನಂತಹ ಸ್ಕೀಮ್ ವಿವರಗಳು.
  5. ಸಾಮಾನ್ಯ ಯೂನಿಟ್‌ಹೋಲ್ಡರ್ ಮಾಹಿತಿ.
  6. ಇತರ ವಿವರಗಳಾದ ಎಎಂಸಿ ಶಾಖೆಗಳು, ಹೂಡಿಕೆದಾರರ ಸೇವೆ ಕೇಂದ್ರಗಳು, ಅಧಿಕೃತ ಸಮ್ಮತಿಯ ಸ್ಥಳಗಳು.

 

ಎಸ್‌ಎಐನಲ್ಲಿ ಈ ಮಾಹಿತಿಗಳು ಇರುತ್ತವೆ:

  1. ಮ್ಯೂಚುವಲ್‌ ಫಂಡ್‌ನ ಸ್ಥಾಪನೆ - ಪ್ರಾಯೋಜಕರು, ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮತ್ತು ಟ್ರಸ್ಟಿಗಳು.
  2. ರಿಜಿಸ್ಟ್ರಾರ್‌ಗಳು, ಕಸ್ಟಾಡಿಯನ್‌ಗಳು, ಬ್ಯಾಂಕರ್‌ಗಳು, ಆಡಿಟರ್‌ಗಳು ಮತ್ತು ಕಾನೂನು ಕೌನ್ಸೆಲ್‌ನಂತಹ ಎಎಂಸಿ ಮತ್ತು ಅಸೋಸಿಯೇಟ್‌ಗಳ ಪ್ರಮುಖ ವ್ಯಕ್ತಿಗಳ ಎಲ್ಲ ಮಾಹಿತಿ.
  3. ಎಲ್ಲ ಹಣಕಾಸು ಮತ್ತು ಕಾನೂನು ಸಮಸ್ಯೆಗಳು.

ಎಸ್‌ಐಡಿಯ ಸಂಚಿತ ರೂಪವು ಕೆಐಎಂ ಆಗಿರುತ್ತದೆ. ಇದನ್ನು ಅರ್ಜಿ ನಮೂನೆಗೆ ಲಗತ್ತಿಸಲಾಗಿರುತ್ತದೆ. ಹೆಸರೇ ಹೇಳುವಂತೆ, ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಹೂಡಿಕೆದಾರರು ತಿಳಿಯಬೇಕಿರುವ ಎಲ್ಲ ಪ್ರಮುಖ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಪ್ರತಿ ಅರ್ಜಿ ನಮೂನೆಯೊಂದಿಗೆ ಕೆಐಎಂ ಅನ್ನು ಒದಗಿಸಬೇಕು.

436
ನಾನು ಹೂಡಿಕೆ ಮಾಡಲು ಸಿದ್ಧ