ನಾನು ಹೂಡಿಕೆಯನ್ನು ಆರಂಭಿಸಿದ ನಂತರ ನನ್ನ ಹೂಡಿಕೆಯ ಅವಧಿಯನ್ನು ಬದಲಿಸಬಹುದೇ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಸ್ಐಪಿ ಮೂಲಕ ಮ್ಯೂಚುವಲ್‌ ಫಂಡ್ ಗಳಲ್ಲಿ   ಹೂಡಿಕೆ ಮಾಡುವುದರಿಂದ ತುಂಬಾ ಫ್ಲೆಕ್ಸಿಬಿಲಿಟಿ ಲಭಿಸುತ್ತದೆ. ತಾವು ಹೂಡಿಕೆ ಮಾಡಲು ಬಯಸುವ ಮೊತ್ತ, ತಾವು ಹೂಡಿಕೆ ಮಾಡಲು ಬಯಸುವ ಅವಧಿ, ಹೂಡಿಕೆ ಮಾಡಲು ಬಯಸುವ ಆವರ್ತನ (ವಾರ, ಮಾಸಿಕ, ತ್ರೈಮಾಸಿಕ ಇತ್ಯಾದಿ) ಅನ್ನು ಹೂಡಿಕೆದಾರರು ನಿಯಂತ್ರಿಸಬಹುದು.

ಆದರೆ ನೀವು ಎಸ್ಐಪಿ ಅನ್ನುಆರಂಭಿಸಿದರೆ, ನಿಮ್ಮ ಎಸ್ಐಪಿ ಅವಧಿ ಮುಗಿಯುವವರೆಗೂ ನೀವು ಆರಂಭದಲ್ಲಿ ಮಾಡಿದ ಆಯ್ಕೆಗೆ ಬದ್ಧವಾಗಿರುತ್ತೀರಾ?

ಇದಕ್ಕೆ ಉತ್ತರ ಇಲ್ಲ ಎಂಬುದಾಗಿರುತ್ತದೆ. ಉದಾಹರಣೆಗೆ, 7 ವರ್ಷದ ಅವಧಿಗೆ ನೀವುರೂ. 5,000 ಮಾಸಿಕ ಎಸ್ಐಪಿ ಅನ್ನು ಆರಂಭಿಸಿದರೆ, ನೀವು ಬಯಸಿದಂತೆ ಇದರ ಅವಧಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ನಿಮಗೆ ಅನುಕೂಲ ಇರುತ್ತದೆ, ನಿಮ್ಮ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ನೀವು ನಿಮ್ಮ ಎಸ್ಐಪಿ ಕಂತನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಲೂಬಹುದು. ಎಸ್ಐಪಿಗಳು ಉತ್ತಮ ದೀರ್ಘಕಾಲೀನ ಹೂಡಿಕೆ ಆಯ್ಕೆಗಳಾಗಿವೆ. ಈ ಫ್ಲೆಕ್ಸಿಬಲ್‌   ಸೌಲಭ್ಯಗಳಿಂದಾಗಿ ಅವು ಕಿರಿಕಿರಿ ರಹಿತವಾಗಿವೆ ಮತ್ತು ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದರೆ ಅತ್ಯಂತ ದ್ರವ್ಯತೆಯನ್ನು ಹೊಂದಿವೆ.

ಅಷ್ಟಕ್ಕೂ, ಕಾಲಕಾಲಕ್ಕೆ ಎಸ್ಐಪಿಗಳನ್ನು ನವೀಕರಿಸುವುದು ಮತ್ತು ವಿಸ್ತರಿಸುವ ಕಿರಿಕಿರಿಯನ್ನು ನಿವಾರಿಸಲು ನೀವು ಸಕಾಲಿಕ ಎಸ್ಐಪಿಯನ್ನೂ ಆಯ್ಕೆ ಮಾಡಬಹುದು ಮತ್ತು ನೀವು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸುವವರೆಗೂ ಅಡ್ಡಿ ಇಲ್ಲದಂತೆ ಹೂಡಿಕೆ ಮಾಡುತ್ತಿರಬಹುದು. ಅಗತ್ಯವಿದ್ದಾಗ, ನಿಮ್ಮ ಎಸ್ಐಪಿ ಅನ್ನು ನಿಲ್ಲಿಸುವ ಅನುಕೂಲವನ್ನು ನೀವು ಹೊಂದಿರುತ್ತೀರಿ. ಅವಧಿಯನ್ನು ಮುಗಿಸುವ ಮುನ್ನವೇ ನೀವು ಎಸ್ಐಪಿ ನಿಲ್ಲಿಸಲು ಅಥವಾ ವಿರಮಿಸಲು ನೀವು ಬಯಸಿದರೆ, ಮುಂದಿನ ಎಸ್ಐಪಿ ದಿನಾಂಕಕ್ಕೂ 30 ದಿನಗಳ ಮುನ್ನ ಅರ್ಜಿ ನಮೂನೆಯನ್ನು ಸಲ್ಲಿಸಿ.

434
ನಾನು ಹೂಡಿಕೆ ಮಾಡಲು ಸಿದ್ಧ