ಎಫ್ಎಂಪಿಗಳು ಎಂದರೆ ಯಾವುದು ಮತ್ತು ಯಾಕೆ ನಾನು ಅವುಗಳಲ್ಲಿ ಹೂಡಿಕೆ ಮಾಡಬೇಕು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಫಿಕ್ಸೆಡ್ ಮೆಚ್ಯುರಿಟಿ ಪ್ಲಾನ್ಗಳು (ಎಫ್ಎಂಪಿ) ಕ್ಲೋಸ್ ಎಂಡೆಡ್ ಡೆಟ್ ಫಂಡ್ಗಳಾಗಿದ್ದು, ಇವು ಫಿಕ್ಸೆಡ್ ಡೆಪಾಸಿಟ್ಗಳಂತೆ ಫಿಕ್ಸೆಡ್ ಮೆಚ್ಯುರಿಟಿ ಹೊಂದಿರುತ್ತವೆ. ಆದರೆ, ಎಫ್ಎಂಪಿಗಳು ಫಿಕ್ಸೆಡ್ ಡೆಪಾಸಿಟ್ಗಳಿಗಿಂತ ವಿಭಿನ್ನವಾಗಿರುತ್ತವೆ. ಯಾಕೆಂದರೆ, ಸ್ಕೀಮ್  ಅವಧಿಯ ಜೊತೆಗೆ ಮೆಚ್ಯೂರ್ ಆಗುವ ಮಾರ್ಕೆಟ್ ಮಾಡಬಹುದಾದ ಡೆಟ್ ಸೆಕ್ಯುರಿಟಿಗಳಲ್ಲಿ ಅವು ಹೂಡಿಕೆ ಮಾಡುತ್ತವೆ. ಉದಾಹರಣೆಗೆ  ಡೆಪಾಸಿಟ್ ಸರ್ಟಿಫಿಕೇಟ್ಗಳು (ಸಿಡಿ), ಕಮರ್ಶಿಯಲ್ ಪೇಪರ್ಗಳು (ಸಿಪಿ), ಇತರ ಮನಿ ಮಾರ್ಕೆಟ್ ಸಲಕರಣೆಗಳು, ಕಾರ್ಪೊರೇಟ್ ಬಾಂಡ್ಗಳು  , ಹೆಸರಾಂತ  ಕಂಪನಿಗಳ ರೂಪಾಂತರಿಸಲಾಗದ ಡಿಬೆಟಂಚರುಗಳು (ಎನ್ಸಿಡಿ) ಅಥವಾ ಸರ್ಕಾರಿ ಸೆಕ್ಯುರಿಟಿಗಳು.   ಮೇಲಾಗಿ  ಫಿಕ್ಸೆಡ್ ಡೆಪಾಸಿಟ್ಗಳ ಥರ , ಎಫ್ಎಮ್ಪಿಗಳು ಗ್ಯಾರಂಟಿ ರಿಟರ್ನ್ ದರವನ್ನು ಹೊಂದಿರುವುದಿಲ್ಲ.

ಫಂಡ್ನ ಅವಧಿಗೆ ಅನುಗುಣವಾಗಿ ಮೆಚ್ಯೂರ್ ಆಗುವ ಸೆಕ್ಯುರಿಟಿಗಳೊಂದಿಗೆ ಕ್ಲೋಸ್ ಎಂಡೆಡ್ ಆಗಿರುವ ಎಫ್ಎಂಪಿಗಳು ಓಪನ್ಎಂಡೆಡ್ ಡೆಟ್ ಫಂಡ್ಗಳಿಗೆ ಹೋಲಿಸಿದರೆ ಕಡಿಮೆ ಲಿಕ್ವಿಡಿಟಿ ಮತ್ತು ಇಂಟರೆಸ್ಟ್ ರೇಟ್ ರಿಸ್ಕ್ ಅನ್ನು ಹೊಂದಿರುತ್ತವೆ. ನಿಗದಿತ ಅವಧಿಗೆ ಕೆಲವು ಕಾಲದವರೆಗೆ ನಿಮ್ಮ ಹಣವನ್ನು ಲಾಕ್ ಮಾಡಲು ನೀವು ನೋಡುತ್ತಿದ್ದರೆ ನಿಮಗೆ ಎಫ್ಎಂಪಿಗಳು ಸೂಕ್ತ ಆಯ್ಕೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ಗಳಿಗೆ ಹೋಲಿಸಿದರೆ ಇಂಡೆಕ್ಸೇಶನ್ ಮೂಲಕ ತೆರಿಗೆ ದಕ್ಷ ರಿಟರ್ನ್ ಅನ್ನು ಎಫ್ಎಂಪಿಗಳು ಒದಗಿಸುತ್ತವೆ. ಯಾಕೆಂದರೆ, ಎಫ್ಎಂಪಿಗಳ ರಿಟರ್ನ್ಅನ್ನು ಹಣದುಬ್ಬರಕ್ಕೆ ಹೊಂದಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಡೆಟ್ ಫಂಡ್ಗಳಿಗೆ 3 ವರ್ಷಗಳ ನಂತರ ಇಂಡೆಕ್ಸೇಶನ್ ಪ್ರಯೋಜನಗಳ ಜೊತೆಗೆ 20% ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್ತೆರಿಗೆಯನ್ನು ವಿಧಿಸಲ್ಪಡುವುದರಿಂದ, ಮೂರು ವರ್ಷಗಳ ಎಫ್ಡಿಗೆ ಹೋಲಿಸಿದರೆ ಇದೇ ಅವಧಿಯ ಎಫ್ಎಂಪಿಗಳು ವೆಚ್ಚ ಪರಿಣಾಮಕಾರಿಯಾಗಿವೆ.  

ಮೂರರಿಂದ ಐದು ವರ್ಷಗಳಲ್ಲಿ ನಿಮಗೆ ಬೇಕಾಗುವ ರೀತಿಯಲ್ಲಿ ರಜೆ, ಮಕ್ಕಳ ಕಾಲೇಜು ಅಡ್ಮಿಶನ್ ಅಥವಾ ಮನೆ ಸಾಲದ ಡೌನ್ಪೇಮೆಂಟ್ನಂತಹ ಗುರಿಗಳಿಗೆ ಹಣ ತೆಗೆದಿಡಲು ನೀವು ಬಯಸಿದರೆ, ನಿಮ್ಮ ಗುರಿಯ ಸಮಯಕ್ಕೆ ಸಮೀಪದಲ್ಲಿ ಮೆಚ್ಯೂರ್ ಆಗುವಂತೆ ಎಫ್ಎಂಪಿಯಲ್ಲಿ ನೀವು ಹಣ ಹೂಡಿಕೆ ಮಾಡಬಹುದು. ನೀವು ಗುರಿ ಹೊಂದಿಲ್ಲ ಮತ್ತು ನಿಮ್ಮ ಉಳಿತಾಯವನ್ನು ಅನಗತ್ಯವಾಗಿ ವೆಚ್ಚ ಮಾಡುತ್ತೀರಿ ಎಂಬ ಭೀತಿ ನಿಮಗೆ ಇದ್ದಲ್ಲಿ, ನಿಮ್ಮ ಉಳಿತಾಯವನ್ನು ಲಾಕ್ ಮಾಡಲು ಎಫ್ಎಂಪಿಯಲ್ಲಿ ಹೂಡಿಕೆ ಮಾಡಬಹುದು. ಯಾಕೆಂದರೆ, ಎಫ್ಎಂಪಿಗಳ ಮೆಚ್ಚುರಿಟಿಯು ಒಂದು ತಿಂಗಳಿಂದ ಐದು ವರ್ಷಗಳವರೆಗೆ ಇರುತ್ತವೆ.

436
ನಾನು ಹೂಡಿಕೆ ಮಾಡಲು ಸಿದ್ಧ