ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವ ಅನಾನುಕೂಲತೆ ಯಾವುದು?

ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವ ಅನಾನುಕೂಲತೆ ಯಾವುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಟಾರ್ಗೆಟ್ ಮೆಚ್ಯುರಿಟಿ ಫಂಡ್ಸ್ (ಟಿಎಂಎಫ್ಗಳು) ಓಪನ್ ಎಂಡೆಡ್ ಡೆಟ್ ಫಂಡ್ಗಳಾಗಿದ್ದು ಇವು ನಿಮಗೆ ಖಚಿತ ಮೆಚ್ಯುರಿಟಿ ದಿನಾಂಕಗಳನ್ನು ನೀಡುತ್ತದೆ. ಈ ಫಂಡ್ಗಳ ಪೋರ್ಟ್ಫೋಲಿಯೋಗಳಲ್ಲಿ, ಫಂಡ್ನ ಟಾರ್ಗೆಟ್ ಮೆಚ್ಯುರಿಟಿ ದಿನಾಂಕಕ್ಕೆ ಹೊಂದಿಕೊಂಡ ಅವಧಿ ಮೀರುವ ದಿನಾಂಕ ಹೊಂದಿರುವ ಬಾಂಡ್ಗಳಿರುತ್ತವೆ ಮತ್ತು ಎಲ್ಲ ಬಾಂಡ್ಗಳನ್ನು ಮೆಚ್ಯುರಿಟಿ ವರೆಗೆ ಇಟ್ಟುಕೊಳ್ಳಲಾಗುತ್ತದೆ. ಇದು ಬಡ್ಡಿ ದರ ರಿಸ್ಕ್ ಅನ್ನು ಕಡಿಮೆ ಮಾಡುವುದು ಮತ್ತು ರಿಟರ್ನ್ಗಳನ್ನು ಹೆಚ್ಚು ನಿರೀಕ್ಷಿಸುವಂತೆ ಮಾಡಲು ಸಹಾಯ ಮಾಡುತ್ತವೆಯಾದರೂ, ಈ ಫಂಡ್ಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಟಿಎಂಎಫ್ಗಳ ಕೊರತೆಯನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.

ಟಾರ್ಗೆಟ್ ಮೆಚ್ಯುರಿಟಿ ಬಾಂಡ್ ಫಂಡ್ಗಳು ಹೊಸ ವಿಭಾಗದ ಡೆಟ್ ಫಂಡ್ ಆಗಿದೆ ಮತ್ತು ಈ ವಲಯದಲ್ಲಿ ಕೆಲವೇ ಆಯ್ಕೆಗಳು ಲಭ್ಯವಿರುತ್ತವೆ. ಇದು ಹೂಡಿಕೆದಾರರಿಗೆ ಲಭ್ಯವಿರುವ ಮೆಚ್ಯುರಿಟಿಯ ಆಯ್ಕೆಯನ್ನು ಮಿತಿಗೊಳಿಸಬಹುದು. ಅಂದರೆ, ನಿರ್ದಿಷ್ಟ ಮೆಚ್ಯುರಿಟಿ ವಲಯದಲ್ಲಿ ಆಸಕ್ತರಾಗಿರುವ ಹೂಡಿಕೆದಾರರಿಗೆ ಸೂಕ್ತ ಫಂಡ್ ಸಿಗದೇ ಇರಬಹುದು. ಹಾಗೆಯೇ, ವರ್ಗದಲ್ಲಿ ವಿಶ್ವಾಸಾರ್ಹವಾದ ಯಾವುದೇ ಕಾರ್ಯಕ್ಷಮತೆ ಟ್ರ್ಯಾಕ್ ರೆಕಾರ್ಡ್ ಹೊಂದಿಲ್ಲದಿರಬಹುದು.

ಟಾರ್ಗೆಟ್ ಮೆಚ್ಯುರಿಟಿ ಫಂಡ್ ಪ್ರಯೋಜನಗಳಲ್ಲಿ ಬಡ್ಡಿ ದರ ಅಪಾಯ ನಿರ್ಮೂಲನೆ ಮತ್ತು ರಿಟರ್ನ್ ಗೋಚರತೆಯು ಒಳಗೊಂಡಿರುತ್ತದೆ. ಆದರೆ, ಈ ಎರಡೂ ಪ್ರಯೋಜನಗಳು ಫಂಡ್ನಲ್ಲಿ ಹೂಡಿಕೆದಾರರು ಹೂಡಿಕೆ ಮಾಡಿಕೊಂಡೇ ಇದ್ದಲ್ಲಿ ಮೆಚ್ಯುರಿಟಿ ವರೆಗೆ ಮಾತ್ರ ಕೆಲಸ ಮಾಡಬಹುದು. ಹೀಗಾಗಿ, ತುರ್ತು ಪರಿಸ್ಥಿತಿಯಲ್ಲಿ ಮೆಚ್ಯುರಿಟಿಗೂ ಮೊದಲೇ ತಮ್ಮ ಹೂಡಿಕೆಯನ್ನು ಲಿಕ್ವಿಡೇಟ್ ಮಾಡಬೇಕಾದಲ್ಲಿ, ಹೂಡಿಕೆದಾರರ ಗಳಿಕೆ ಕಡಿಮೆಯಾಗಬಹುದು ಮತ್ತು ಬಡ್ಡಿ ದರ   ಚಂಚಲತೆಗೆ ಒಳಗಾಗಬೇಕಾಗಬಹುದು. ನೀವು 5-7 ವರ್ಷಗಳ ಮಧ್ಯಮದಿಂದ ದೀರ್ಘಕಾಲೀನ ಗುರಿಯನ್ನು ಹೊಂದಿದ್ದರೆ ಮತ್ತು ಫಂಡ್ ಮೆಚ್ಯುರಿಟಿವರೆಗೆ ನಿಮ್ಮ ಹೂಡಿಕೆಯನ್ನು ಹಿಡಿದುಕೊಳ್ಳಬಹುದಾದರೆ ಮಾತ್ರ ಟಿಎಂಎಫ್ಗಳನ್ನು ಪರಿಗಣಿಸಬೇಕು.

ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳ ಅತಿದೊಡ್ಡ ಅನಾನುಕೂಲ ಎಂದರೆ, ಪ್ರಸ್ತುತ ಬಡ್ಡಿ ದರಕ್ಕೆ ಹೂಡಿಕೆದಾರರು ಲಾಕ್ ಆಗುತ್ತಾರೆ ಮತ್ತು ಇದರಿಂದ ಒಟ್ಟಾರೆ ರಿಟರ್ನ್ಸ್ ಮೇಲೆ ವಿಪರೀತ ಪರಿಣಾಮ ಬೀರಬಹುದು. ಅದರಲ್ಲೂ ವಿಶೇಷವಾಗಿ, ಭವಿಷ್ಯದಲ್ಲಿ ಬಡ್ಡಿ ದರಗಳು ಹೆಚ್ಚಳವಾಗುವ ಸಾಧ್ಯತೆ ಇದ್ದಾಗ ಈ ಪರಿಣಾಮ ಉಂಟಾಗುತ್ತದೆ. ಸಾಮಾನ್ಯವಾಗಿ ಆರ್ಥಿಕತೆಯು ಕುಸಿತದಿಂದ ಚೇತರಿಸಿಕೊಳ್ಳುತ್ತಿರುವಾಗ ಮತ್ತು ಸರ್ಕಾರವು ಉತ್ತೇಜಕ ಪ್ಯಾಕೇಜ್ ಅನ್ನು ಹಿಂಪಡೆಯುವ ಸಾಧ್ಯತೆ ಇದ್ದಾಗ ಹೀಗಾಗುತ್ತದೆ. ಈ ಎರಡೂ ಸನ್ನಿವೇಶಗಳಲ್ಲಿ, ಬಡ್ಡಿ ದರ ತುಂಬಾ ಕಡಿಮೆ ಇರುವುದರಿಂದ, ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಬಾಂಡ್ ಬೆಲೆಗಳು ಮತ್ತು ಡೆಟ್ ಫಂಡ್ ರಿಟರ್ನ್ಗಳ ಮೇಲೆ ವಿಪರೀತ ಪರಿಣಾಮವನ್ನು ಏರುತ್ತಿರುವ ಬಡ್ಡಿ ದರಗಳು ಬೀರುತ್ತವೆ.

ಟಿಎಂಎಫ್ಗಳು ಬಾಂಡ್ ಸೂಚ್ಯಂಕದಲ್ಲಿ ಹೂಡಿಕೆ ಮಾಡುವುದರಿಂದ, ಯಾವುದೇ ಇತರ ಸೂಚ್ಯಂಕ ಫಂಡ್ನ ರೀತಿ ಟ್ರ್ಯಾಕಿಂಗ್ ದೋಷಕ್ಕೆ ಈ ಫಂಡ್ಗಳೂ ಒಳಗಾಗಬಹುದು. ಈ ವರ್ಗವು ಕಾರ್ಯಕ್ಷಮತೆ ಇತಿಹಾಸವನ್ನು ಹೊಂದಿಲ್ಲದಿರುವುದರಿಂದ, ನಿರ್ದಿಷ್ಟ ಟಿಎಂಎಫ್ನಿಂದ ನಿರೀಕ್ಷಿತ ರಿಟರ್ನ್ಸ್ಗೆ ಅದರ ಬಾಂಡ್ ಸೂಚ್ಯಂಕವು ಸಕಾರಣವಾದ ಸೂಚಕವಾಗಬಹುದು. ಆದರೆ, ರಿಟರ್ನ್ ಊಹೆ ಮಾಡುವುದರಲ್ಲಿ ನೈಜ ಫಂಡ್ ರಿಟರ್ನ್ಗಳು ಮತ್ತು ಬೆಂಚ್ಮಾರ್ಕ್ಗಳ ರಿಟರ್ನ್ನ ಮಧ್ಯದ ವ್ಯತ್ಯಾಸವು ಅಡ್ಡಿ ಉಂಟು ಮಾಡಬಹುದು.

ಪ್ಯಾಸಿವ್ ಆಗಿರುವುದರಿಂದ, ಕ್ರೆಡಿಟ್ ರೇಟಿಂಗ್ ಬದಲಾವಣೆ ಅಥವಾ ಬಡ್ಡಿ ದರಗಳ ಮೇಲೆ ಆರ್ಬಿಐ ಮೇಕಿಂಗ್ ಶುಲ್ಕಗಳನ್ನು ಬದಲಿಸುವಂತಹ ಅಲ್ಪಾವಧಿಯಲ್ಲಿನ ಡೆಟ್ ಮಾರ್ಕೆಟ್ ಬದಲಾವಣೆಯ ಮುನ್ನೋಟದ ಕುರಿತಂತೆ ವಿವಿಧ ರಿಸ್ಕ್ಗಳಿಗೆ ಫಂಡ್ ಮ್ಯಾನೇಜರ್ ಅತ್ಯಂತ ಕಡಿಮೆ ವ್ಯಾಪ್ತಿಯನ್ನು ಹೊಂದಿರುತ್ತಾರೆ. ತನ್ನ ಮುನ್ನೋಟ ಯಾವುದೇ ಇದ್ದರೂ ಅದರ ಸೂಚ್ಯಂಕದಲ್ಲಿ ಬಾಂಡ್ಗಳಿಗೆ ಬದ್ಧವಾಗುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಆಯ್ಕೆಯನ್ನು ಮ್ಯಾನೇಜರ್ ಹೊಂದಿರುವುದಿಲ್ಲ. ಹೀಗಾಗಿ, ಡೆಟ್ ಫಂಡ್ಗಳಲ್ಲಿ ಅಲ್ಪಾವಧಿ ಹೂಡಿಕೆಗಳಿಗೆ ಎದುರು ನೋಡುತ್ತಿರುವ ಹೂಡಿಕೆದಾರರಿಗೆ ಅನುಕೂಲಕರವಾಗಿರುವುದಿಲ್ಲ. ಟಿಎಂಎಫ್ಗಳ ಬದಲಿಗೆ ಅಲ್ಪಾವಧಿ ಮೆಚ್ಯುರಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಅವರಿಗೆ ಉತ್ತಮವಾಗಿರುತ್ತದೆ.

ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋದಲ್ಲಿ ಸೇರಿಸಿಕೊಳ್ಳುವುದಕ್ಕೂ ಮೊದಲು ಟಾರ್ಗೆಟ್ ಮೆಚ್ಯುರಿಟಿ ಪಂಡ್ಗಳ ಅನುಕೂಲ ಮತ್ತು ಅನಾನುಕೂಲಗಳನ್ನು ಗಮನವಿಟ್ಟು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ಮಾಡಲಾಗಿದೆ. ಹಾಗೆಯೇ, ಇಟಿಎಫ್ ಮಾದರಿಯಲ್ಲಿ ಲಭ್ಯವಿರುವ ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಕಡ್ಡಾಯವಾಗಿದೆ. ಒಂದು ವೇಳೆ ನೀವು ಇದನ್ನು ಹೊಂದಿಲ್ಲದಿದ್ದರೆ, ನಿಮಗೆ ಇದೊಂದು ಮಿತಿಯಾಗಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ